Shivamogga Police ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಜನ ನಾಪತ್ತೆಯಾಗಿದ್ದು, ಸುಳಿವು ದೊರೆತಲ್ಲಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಅಕ್ಕಸಾಲಿಕೊಪ್ಪದ ವನಜಾ ಶೆಡ್ತಿ ಎಂಬುವವರ ಮಗ ಸದಾನಂದ ಶೆಟ್ಟಿ ಬಿನ್ ಸೂರಣ್ಣ ಶೆಟ್ಟಿ ಎಂಬುವವರು 2024ರ ಜೂನ್‌ನಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸು ಬಂದಿರುವುದಿಲ್ಲ ಎಂದು ಸಹೋದರಿ ವಿಮಲ ಕೋಂ ಮಂಜುನಾಥ, ಕುಂಬಾರಕೊಪ್ಪ ಕುಡುಮಲ್ಲಿಗೆ ಗ್ರಾಮ ತೀರ್ಥಹಳ್ಳಿ ತಾ ವಾಸಿ ಇವರು ದಿ: 02-09-2025 ರಂದು ದೂರು ನೀಡಿರುತ್ತಾರೆ. ಈತನ ತಾಯಿ ಸುಮಾರು 95 ವರ್ಷದವರಾಗಿದ್ದು, ಅನಾರೋಗ್ಯಪೀಡತರಾಗಿರುತ್ತಾರೆ.
ಈತನ ಚಹರೆ: ಸುಮಾರು 5.5 ಅಡಿ ಎತ್ತರ ಉದ್ದನೆಯ ಮುಖ, ಗೋಧಿ ಬಣ್ಣ, ಬಿಳಿ ಕೂದಲು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ತೀರ್ಥಹಳ್ಳಿ ತಾಲ್ಲೂಕು ತನಿಕಲ್ ಬೆಟ್ಟಬಸವಾನಿ ಗ್ರಾಮ ವಾಸಿ ಹರೀಶ್ ಜಿ ಆರ್ ಬಿನ್ ಜಿ ಹೆಚ್ ರಂಗಪ್ಪ ಗೌಡ ಎಂಬುವವರ ಅಣ್ಣ ತುಳಸೀದಾಸ್ ಎಂಬುವವರು ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿರುವ ಅನಾಥ ಸೇವಾ ಆಶ್ರಮದ ಹಾಸ್ಟೆಲ್‌ನಲ್ಲಿದ್ದು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು, ಜನವರಿ 1982 ರಂದು ಮನೆಗೆ ಬಂದು,1982ರ ಜ.14ರಂದು ಪುನಃ ಕಾಲೇಜಿಗೆಂದು ಹೋದವರು ಕಾಣೆಯಾಗಿರುತ್ತಾರೆ ಎಂದು ದಿ:06-08-2025 ರಂದು ದೂರು ನೀಡಿರುತ್ತಾರೆ.
ಈತನ ಚಹರೆ ಕಾಣೆಯಾದ ಸಮಯದಲ್ಲಿ ಸುಮಾರು 05 ಅಡಿ ಎತ್ತರ ಉದ್ದನೆಯ ಮುಖ, ಗೋಧಿ ಬಣ್ಣ, ಕಪ್ಪು ಕೂದಲು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಮಿಳಗಟ್ಟ 02 ನೇ ತಿರುವು ಶಿವಮೊಗ್ಗ ಹಾಲಿ ವಾಸ ಬೆಜ್ಜವಳ್ಳಿ ತೀರ್ಥಹಳ್ಳಿ ತಾಲ್ಲೂಕು ಅರುಣ್ ಎಸ್ ಬಿನ್ ಸೋಮಶೇಖರ್ ಎಂಬುವವರ ಪತ್ನಿ ಪವಿತ್ರ ಎಂಬ24 ವರ್ಷದ ಮಹಿಳೆ ಬೆಜ್ಜವಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿ:04-04-2025 ರಂದು ಎಂದಿನAತೆ ಕೆಲಸಕ್ಕೆಂದು ಹೋಗಿದ್ದು ಮನೆಗೆ ವಾಪಾಸ್ಸಾಗಿರುವುದಿಲ್ಲ.
Shivamogga Police ಈಕೆಯ ಚಹರೆ ಸುಮಾರು 04 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ, ಕಪ್ಪು ಕೂದಲು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.
ಮೇಲ್ಕಂಡ ಕಾಣೆಯಾಗಿದ್ದ ಮೂರು ವ್ಯಕ್ತಿಗಳು ಕಂಡಲ್ಲಿ ಅಥವಾ ಪತ್ತೆಯಾದಲ್ಲಿ ಪಿ.ಎಸ್.ಐ. ಮಾಳೂರು ಠಾಣೆ, ಸಿಪಿಐ ಮಾಳೂರು ವೃತ್ತ ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ. ಅಥವಾ ದೂರವಾಣಿ ಸಂಖ್ಯೆ; ಪಿ.ಎಸ್.ಐ. ಮಾಳೂರು ಠಾಣೆ, ಮೊ.08181-235142, ಮೊ. 9480803353.ಸಿಪಿಐ ಮಾಳೂರು ವೃತ್ತ, 08181-228310. ಮೊ. 9480803333. ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ.08182-261413, ಮೊ. 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವುದು
