Shimoga News ಮಲೆನಾಡು ಇತಿಹಾಸ ಸಂಶೋಧನೆ & ಅಧ್ಯಯನ ವೇದಿಕೆಯ ಆಶ್ರಯದಲ್ಲಿ ಜಿಲ್ಲೆಯ
ನೂತನ ಸಂಶೋಧನಾ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ವೇದಿಕೆ ಅಧ್ಯಕ್ಷ ಡಾ.ಸಾಮಕ ಅವರು
ಈಗಾಗಲೇ ಕನ್ನಡದ ಮೊದಲ ಶಾಸನೆವೆಂದು
ಹಲ್ಮಿಡಿ ಶಾಸನ ಪ್ರಚಾರದಲ್ಲಿದೆ.
ಆದರೆ ಅದಕ್ಕಿಂತಲೂ ಪೂರ್ವದ ಶಾಸನ ತಾಳಗುಂದದ ಪ್ರಣವೇಶ್ವ ದೇವಾಲಯದ ಸಿಂಹ ಕಟಾಂಜನದಲ್ಲಿದೆ.
ಇದನ್ನ ಪ್ರಾಚ್ಯ ಸಂಶೋಧನಾ ಇಲಾಖೆ
ದಾಖಲೆ ಮಾಡಿದೆ ಎಂದು ಹೇಳಿದರು.
Shimoga News ವೇದಿಕೆ ಪ್ರಧಾನ ಕಾರ್ಯದರ್ಶಿ ದಿಲೀಪ್ ನಾಡಿಗ್ ಅವರು ಮಸತನಾಡಿ ” ಸದ್ಯ ಶಿವಮೊಗ್ಗ ಜಿಲ್ಲೆಯಲ್ಲಿ
ಬೆಳಕಿಗೆ ಬಾರದ ಅನೇಕ ದೇಗುಲ, ಶಾಸನಗಳು ಹೇರಳ ಇವರ. ಅವುಗಳ ಬಗ್ಗೆ ಸೂಕ್ತ ಮಾಹಿತಿಯನ್ನ ಸ್ಥಳೀಯರಿಗೆ ತಿಳಿಯ ಹೇಳುವ ಕೆಲಸ ಆಗಬೇಕಿದೆ .ಈ ನಿಟ್ಟನಲ್ಲಿ ವೇದಿಕೆ ಐತಿಹಾಸಿಕ ಸ್ಥಳಗಳಿಗೆ
ಯುವ ಜನತೆಯನ್ನ ಪ್ರವಾಸ ಕರೆದೊಯ್ದು ಪರಿಚಯ ಮಾಡಿಕೊಡುವ
ಕಾರ್ಯ ಮಾಡುತ್ತಿದೆ ಎಂದು ವಿವರಿಸಿದರು.
ಹಿರಿಯ ಸಂಶೋದಕ
ರಮೇಶ್ ಹಿರೇಜಂಬೂರು ಮಾತನಾಡಿ” ಐತಿಹಾಸಿಕ ಸ್ಥಳ,ವಿಚಾರಗಳನ್ನು ಯುವ ಪೀಳಿಗೆಗೆ ಈಗ ಜನಪ್ರಿಯವಾಗಿರುವ
ಸಾಮಾಜಿಕ ಜಾಲತಾಣಗಳ ಮುಖಾಂತರ ತಲುಪಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಸಂಶೋಧನಾಸಕ್ತರಾದ ಸತ್ಯನಾರಾಯಣ ಗಣೇಶ್ ,ಸುಬ್ರಹ್ಮಣ್ಯ,
ಡಾ. ಚಂದ್ರು. ಆದಿತ್ಯ.ಆದಿತ್ಯ ಪ್ರಸಾದ್, ನಾಗರಾಜ್,
ರಾಂಗೋಪಾಲ್, ಮಾತನಾಡಿದರು.ಕೆಲೈವ್ ನ್ಯೂಸ್ ಪ್ರಧಾನ ಸಂಪಾದಕ
ಡಾ.ಸುಧೀಂದ್ರ ವಂದನೆ ಸಲ್ಲಿಸಿದರು.
Shimoga News ಹಲ್ಮಿಡಿಗಿಂತ ಪೂರ್ವ ಕನ್ನಡ ಶಾಸನ ತಾಳಗುಂದದಲ್ಲಿದೆ- ಡಾ.ಸಾಮಕ.
Date:
