Karnataka Minorities Development Corporation ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ನವೋದ್ಯಮ (Start Ups) ಕೈಗೊಳ್ಳುವ ಮುಸಲ್ಮಾನ, ಕ್ರೈಸ್ತ , ಜೈನ್, ಆಂಗ್ಲೋಇಂಡಿಯನ್ಸ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದ ಯುವಕ/ಯುವತಿಯರಿಗೆ ಸಹಾಯಧನ ಪಡೆಯಲು ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಅರ್ಜಿದಾರರು ಕರ್ನಾಟಕದಲ್ಲಿ ನೋಂದಾಯಿತ ಪ್ರೈ.ಲಿ/ಒಪಿಸಿ/ಎಲ್‌ಎಲ್‌ಪಿ ಪಾಲುದಾರಿಕೆ ಸಂಸ್ಥೆಗಳು ಖಾಸಗಿ ನಿಯಮಿತ ಕಂಪನಿ ಅಥವಾ ಪಾಲುದಾರಿಕೆ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿರಬೇಕು. ಆರಂಭದ ದಿನಾಂಕದಿಂದ ವಹಿವಾಟಿನ ಒಟ್ಟು ಆದಾಯವು 100 ಕೋಟಿಗಿಂತ ಕಡಿಮೆಯಿರಬೇಕು. ನವೋದ್ಯಮಗಳ ನೋಂದಣಿ ದಿನಾಂಕದಿಂದ 10 ವರ್ಷಗಳನ್ನು ಮೀರಿರಬಾರದು. ಉತ್ಪನ್ನಗಳು/ಪ್ರಕ್ರಿಯೆಗಳು/ ಸೇವೆಗಳ ತಂತ್ರಜ್ಞಾನಗಳ ಅಭಿವೃದ್ಧಿ ಅಥವಾ ಸುಧಾರಣೆ ಕಾರ್ಯ ನಿರ್ವಹಿಸುವುದು. ಅಸ್ತಿತ್ವದಲ್ಲಿರುವ ವ್ಯವಹಾರವನ್ನು ವಿಭಜಿಸುವ ಅಥವಾ ಪುನರ್ ನಿರ್ಮಿಸುವ ಮೂಲಕ ರೂಪಗೊಂಡ ಸ್ಥಾಪನೆಯನ್ನು ಪರಿಗಣಿಸಲಾಗುವುದಿಲ್ಲ. ನಿರ್ದೇಶಕರುಗಳು/ಪಾಲುದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ಕಂಪನಿ/ಸಂಸ್ಥೆಯಲ್ಲಿ ಕನಿಷ್ಠ ಶೇ. 51% ರಷ್ಟು ಪಾಲನ್ನು ಹೊಂದಿರಬೇಕು ಹಾಗೂ ಅನುದಾನ ಮಂಜೂರು ಮಾಡಲಾದ ಯೋಜನೆ ಅವಧಿಯವರೆಗೆ ಮತ್ತು ಎಲ್ಲಾ ಸಮಯದಲ್ಲೂ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರಬೇಕು ಮತ್ತು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಆರ್‌ಡಿ ಸಂಖ್ಯೆಯೊಂದಿಗೆ ಡಿಜಿಟಲ್ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಈ ಯೋಜನೆಯ ಅವಧಿಯಲ್ಲಿ ಮಾಲೀಕತ್ವದ ನಿಯಮಗಳು ಮತ್ತು ಷರತ್ತುಗಳನ್ನು ನಿರ್ದೇಶಕರು/ಪಾಲುದಾರರ ಅನುಕೂಲಕ್ಕಾಗಿ ಬದಲಾಯಿಸಬಾರದು.
Karnataka Minorities Development Corporation ಆಸಕ್ತರು ವೆಬ್‌ಸೈಟ್ www.eitbt.karnataka.gov.in ರಲ್ಲಿ ಎಂಎಸ್‌ಎಂಇ ಉದ್ಯೋಗ, ಆಧಾರ್, ಜಿಎಸ್‌ಟಿ, ಟ್ರೆಂಡ್ ಯೂನಿಯನ್, ಕೆಎಂಎಫ್, ವ್ಯಾಟ್ ಪ್ರಮಾಣ ಪತ್ರಗಳು ಅಥವಾ ಅಂಗಡಿಗಳು ಮತ್ತು ಸಂಸ್ಥೆಯೊಂದಿಗೆ ಇರುವ ನೋಂದಣಿ ಸಹಿತ ಸೆ. 15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಂಜಪ್ಪ ಆಸ್ಪತ್ರೆ ಮುಂಭಾಗದ ರಸ್ತೆ, ಅಜ್ಯುತ್‌ರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ, ದೂ.ಸಂ.: 08182-228262 ನ್ನು ಸಂಪರ್ಕಿಸುವುದು.
Karnataka Minorities Development Corporation ನವೋದ್ಯಮ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಸಹಾಯಧನ, ಆನ್ ಲೈನ್ ಅರ್ಜಿಆಹ್ವಾನ
Date:
