Madhu Bangarappa ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ರಾಜ್ಯ ಬೋವಿ ಅಭಿವೃದ್ಧಿ ನಿಗಮದಲ್ಲಿ ಲಂಚಾವತಾರ ವಿಚಾರವಾಗಿ ಮಾತನಾಡಿದರು.
ನಾನು ಮಾಧ್ಯಮದಲ್ಲಿ ವಿಷಯ ನೋಡಿದೆ.ನಾನು ವೈಯಕ್ತಿಕವಾಗಿ ಇನ್ನು ಕೂಡ ಮಾತನಾಡಿಲ್ಲ.ಜಿಲ್ಲಾಧ್ಯಕ್ಷರು ಮಾತನಾಡಿದ್ದಾರೆ. ಬೇರೆ ಬೇರೆ ಕಾರಣ ಕೊಟ್ಟಿದ್ದಾರೆ.ನಾನು ತಿಳುವಳಿಕೆ ಇಟ್ಟುಕೊಂಡು ಮಾತನಾಡಬೇಕಾಗುತ್ತೆ ಎಂದರು.
ಮಾಧ್ಯಮದಲ್ಲಿ ಬಂದಾಗ ಹುಷಾರಾಗಿ ನೋಡಿಕೊಂಡಾಗ ರಿಯಾಕ್ಟ್ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಯಾರದ್ದೇ ತಪ್ಪಿದ್ದರೂ ಕಾನೂನು ತನ್ನ ಜವಾಬ್ದಾರಿ ನಿರ್ವಹಿಸುತ್ತೆ ಆ ವಿಶ್ವಾಸವನ್ನ ನೂರಕ್ಕೆ ನೂರು ನಾನು ಕೊಡ್ತೇನೆ.
ಈ ವಿಷಯವನ್ನ ಕಾನೂನು ಕಾನೂನು ರೀತಿಯಲ್ಲೇ ನೋಡುತ್ತೆ ಎಂದು ತಿಳಿಸಿದರು.
