Shivamogga Roller Skating Association ಬೆಂಗಳೂರಿನ ಬನಶಂಕರಿಯಲ್ಲಿರುವ ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಳೆದ ಮೂರು ದಿನಗಳಿಂದ ಆಯೋಜಿಸಿದ್ದ ನಾಲ್ಕನೇ ರ್ಯಾಕಿಂಗ್ (ranking) ಸ್ಕೇಟಿಂಗ್ ಕ್ರೀಡೆಯಲ್ಲಿ ಶಿವಮೊಗ್ಗದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ನಾಲ್ವರು ಸ್ಕೇಟರ್ ಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಆರು ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ಭಕ್ತಿ ಎಂ.ಪಿ. ಅವರು ಎರಡು ಚಿನ್ನದ ಪದಕ ಪಡೆದಿದ್ದಾರೆ. ಸೆಂಟ್ ಜೋಸೆಫ್ ಅಕ್ಷರಧಾಮ ಶಾಲೆಯಲ್ಲಿ ಓದುತ್ತಿರುವ ಭಕ್ತಿ ಡಾ. ಎಂ.ಸಿ. ಪ್ರದೀಪ್ ಹಾಗೂ ಕೆ.ಬಿ. ಮಮತಾ ದಂಪತಿಗಳ ಪುತ್ರಿ.
ಅಂತೆಯೇ ಆರರಿಂದ ಎಂಟು ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ಸಂಸ್ಥೆಯ ಹಿತ ಪ್ರವೀಣ್ ಎರಡು ಚಿನ್ನದ ಪದಕ ಪಡೆದಿದ್ದಾರೆ.
ಜ್ಞಾನದೀಪ ಶಾಲೆಯಲ್ಲಿ ಓದುತ್ತಿರುವ ಹಿತ ಪ್ರವೀಣ್ ಅವರು ಆರೋಗ್ಯ ಇಲಾಖೆಯ ಪ್ರವೀಣ್ ಹಾಗೂ ಸೌಮ್ಯ ದಂಪತಿಗಳ ಪುತ್ರಿ.
ಸರ್ಜಿ ಫ್ರೀ ಶಾಲೆಯಲ್ಲಿ ಓದುತ್ತಿರುವ ಸಮೃದ್ಧಿ ವಿಶ್ವಾಸ್ 6 ವರ್ಷದೊಳಗಿನ ವಯೋಮಿತಿಯ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಶಿವಮೊಗ್ಗದ ಮಾಜಿ ಕಾರ್ಪೊರೇಟರ್ ಈ. ವಿಶ್ವಾಸ್ ಹಾಗೂ ಸುಪ್ರಿಯಾ ಎಸ್. ಎಸ್. ದಂಪತಿಗಳ ಪುತ್ರಿ.
ನಮ್ಮ ಶಿವಮೊಗ್ಗ ಸಂಸ್ಥೆಯ ಅದ್ವಿಕಾ ನಾಯರ್ 10 ರಿಂದ 12 ವರ್ಷ ವಯೋಮಿತಿಯ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಪೋದಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅದ್ವಿಕಾ ಅವರು ಆರ್.ಎಲ್. ರಂಜಿತ್ ಹಾಗೂ ಗಾಯತ್ರಿ ದಂಪತಿಗಳ ಪುತ್ರಿ.
ಈ ಸಾಧಕ ಸ್ಕೇಟರ್ ಗಳಿಗೆ ನಮ್ಮ ಶಿವಮೊಗ್ಗ ಸಂಸ್ಥೆಯ ಆರ್. ವಿಶ್ವಾಸ್, ಆರ್. ಆತೀಶ್ ತರಬೇತುದಾರರು.
Shivamogga Roller Skating Association ಜಿಲ್ಲೆಗೆ ಕೀರ್ತಿ ತಂದ ಸಾಧಕ ಸ್ಕೇಟರ್ ಗಳಿಗೆ ನಮ್ಮ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಎಂ.ರವಿ, ಎಸ್.ಕೆ. ಗಜೇಂದ್ರಸ್ವಾಮಿ, ಉಮಾ ಟಿ., ವಕೀಲ ಪ್ರವೀಣ್, ತಾರಾನಾಥ್ ಹೆಚ್. ಪಿ., ಶ್ರೀನಾಥ್ ಅಭಿನಂಧಿಸಿದ್ದಾರೆ.
ಬಿವೈಆರ್, ಕೆಎಸ್ಈ, ಡಿಎಸ್ಎ ಶುಭಹಾರೈಕೆ:
ಸ್ಕೇಟಿಂಗ್ ನಲ್ಲಿ ಜಿಲ್ಲೆಗೆ ಕೀರ್ತಿ ತಂದ ಪುಟಾಣಿ ಕ್ರೀಡಾಪಟುಗಳಿಗೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ. ವೈ. ರಾಘವೇಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ವಿಧಾನ ಪರಿಷತ್ ಶಾಸಕ ಡಿ. ಎಸ್. ಅರುಣ್ ಸೇರಿದಂತೆ ವಿವಿಧ ಗಣ್ಯರು ಅಭಿನಂದಿಸಿ ಶುಭಹಾರೈಸಿದ್ದಾರೆ.
