Karnataka State Roller Skating Association ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ನೂತನ ಸಹ ಕಾರ್ಯದರ್ಶಿಯಾಗಿ ಶಿವಮೊಗ್ಗದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಎಂ. ರವಿ ಅವರನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ್ ಹಾಗೂ ಪ್ರಧಾನ ಕಾರ್ಯದರ್ಶಿ ಇಂದೂದರ್ ಸೀತಾರಾಮ್ ಅವರು ಬೆಂಗಳೂರಿನ ಬನಶಂಕರಿಯಲ್ಲಿ ನಡೆದ ನಾಲ್ಕನೇ ಸ್ಕೇಟಿಂಗ್ ಉದ್ಘಾಟನಾ ಸಮಾರಂಭದಲ್ಲಿ ಎಂ.ರವಿ ಅವರ ಆಯ್ಕೆಯನ್ನು ಘೋಷಿಸಿದರು.
Karnataka State Roller Skating Association ನೂತನವಾಗಿ ರಾಜ್ಯ ಸಹಕಾರ್ಯದರ್ಶಿಯಾಗಿ ಆಯ್ಕೆಯಾದ ಎಂ. ರವಿ ಅವರಿಗೆ ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ಪದಾಧಿಕಾರಿಗಳು, ಹಾಗೂ ಕ್ರೀಡಾ ಪಟುಗಳ ಪೋಷಕರು ಮತ್ತು ಸ್ಟೇಟರ್ ಗಳು ಅಭಿನಂದಿಸಿದ್ದಾರೆ
