Rotary Shimoga ಉಡುಪಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ “ಕಲ್ಯಾಣ-ಸಂಗಮ” ದಲ್ಲಿ, ರೋಟರಿ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ಗೆ ಸಾರ್ವಜನಿಕ ಸೇವೆಗೆ ಜಿಲ್ಲಾ ಮಟ್ಟದ ಏಳು ಪ್ರಶಸ್ತಿಗಳನ್ನು ಪಡೆದು ಕೊಂಡಿದೆ.
ಉದ್ಯೋಗದಾತರ ಗೌರವಿಸುವಿಕೆ, ಶುದ್ಧನೀರು ಮತ್ತು ಶುಚಿತ್ವಕ್ಕೆ ಸಹಕಾರ, ಬಾಣಂತಿಯರ ಯೋಗಕ್ಷೇಮ ಮತ್ತು ಮಕ್ಕಳ ಆರೋಗ್ಯ, ಕ್ಲಬ್ ಪತ್ರಿಕೆ, ಯುವಜನರ ಸಬಲಿಕರಣ, ಶಿಕ್ಷಣ ಮತ್ತು ಕನ್ನಡ ಜಾಗೃತಿ, ರಸ್ತೆ ಸುರಕ್ಷೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಬಗ್ಗೆ ಒಟ್ಟು ಏಳು ಪ್ರಶಸ್ತಿಯನ್ನು ನೀಡಲಾಗಿದೆ.
2024-25ನೇ ಸಾಲಿನ ಅಧ್ಯಕ್ಷರಾಗಿ ರೂಪಪುಣ್ಯಕೋಟಿ, ಕಾರ್ಯದರ್ಶಿಯಾಗಿ ಡಾ.ಪ್ರಕೃತಿ ಮಂಚಾಲೆ ಕಾರ್ಯನಿರ್ವಹಿಸಿದ್ದರು. ಕ್ಲಬ್ಬಿನ ಎಲ್ಲಾ ಸದಸ್ಯರು ಅಭಿನಂದಿಸಿದ್ದಾರೆ.
Rotary Shimoga ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಸಹಾಯಕ ಗೌರ್ನರ್ ನಾಗರಾಜ್, ಲಕ್ಷ್ಮೀನಾರಾಯಣ್, ರೇಣುಕಾರಾಧ್ಯ, ರೂಪ ಪುಣ್ಯಕೋಟಿ, ಛೇರ್ಮನ್ ಪಿಡಿಜಿ ಗೀತಾ, ಐಪಿಡಿಜಿ ದೇವಾನಂದ್, ಗೌರ್ನರ್ ಪಾಲಾಕ್ಷ, ಎಸ್.ಎಸ್.ವಾಗೇಶ್ ಇದ್ದಾ
