Chirantana Yoga and Music Trust ಪಿ ಕಾಳಿಂಗರಾವ್ ರವರು ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ ಅವರ ಸಾಧನೆ ಹಾಗೂ ಸಲ್ಲಿಸಿದ ಸೇವೆಗಳು ಇಂದಿಗೂ ಅಜರಾಮರ ಎಂದು ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಎಸ್ ಶಾಂತಾ ಶೆಟ್ಟಿ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ನಲ್ಲಿ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ (ರಿ) ಶಿವಮೊಗ್ಗ ಇದರ 28ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಸುಗಮ ಸಂಗೀತ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿ ಕಾಳಿಂಗರಾಯರ ಹಾಡುಗಳು ಇಂದಿಗೂ ಸಹ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಜನ ಕಲಾವಿದರು ಇಂದು ಸುಗಮ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ನುಡಿದರು.
ಸುಗಮ ಸಂಗೀತ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಸುಗಮ ಸಂಗೀತ ಹಾಗೂ ಆಕಾಶವಾಣಿಯ ಕಲಾವಿದರಾದ ವಿದುಷಿ ಜಯಶ್ರೀ ಶ್ರೀಧರ್
ಹಾಗೂ ವಿದುಷಿ ಉಮಾ ದಿಲೀಪ್ ಇವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಾವಿದರಿಂದ ಬಾವಗೀತೆ ಗಳನ್ನು ಹಾಡುವುದರ ಮುಖಾಂತರ ಶುಭಾಶಯ ಕೋರಲಾಯಿತು ಸಲ್ಲಿಸಲಾಯಿತು.
Chirantana Yoga and Music Trust ಕಾರ್ಯಕ್ರಮದಲ್ಲಿ ಶೋಭಾ ಸತೀಶ್ ,ಸುಶೀಲ, ರಾಜಕುಮಾರ್, ದಾಕ್ಷಾಯಿಣಿ, ಲಕ್ಷ್ಮಿ ಮಹೇಶ್, ಕೆಎಸ್ ಮಂಜುನಾಥ್, ಶ್ವೇತಾ ಪಾಟೀಲ್, ಮಥುರಾ ನಾಗರಾಜ್,
ಲತಾ ಕೇದಿಲಯ. ಹಾಗೂ ಮಮತಾ ಉಪಸ್ಥಿತರಿದ್ದರು.
