Ganesha chaturthi Festival ಕಲಿಯುಗದ ಕಾಮದೇನು ಎಂದು ಬಣ್ಣಿಸಲಾಗುವ ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯನೀಯ ಗೌರವವಿದ್ದು, ಗೋವುಗಳ ಸೇವೆ ಮಾಡುವುದು ಪುಣ್ಯದ ಕಾರ್ಯವಾಗಿದೆ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 20ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಗೋಪಾಲಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋವುಗಳ ರಕ್ಷಣೆಗೆ ಗೋಪಾಲಕರ ಪಾತ್ರ ಮಹತ್ವದ್ದಾಗಿದೆ. ಮನುಷ್ಯನಿಗೆ ಜೀವನ ಪೂರ್ತಿ ಹಾಲುಣಿಸುವ ಗೋವಿಗೆ ಮಹಾತಾಯಿ ಎಂದು ಕರೆಯುತ್ತೇವೆ. ಸಮಿತಿಯಿಂದ ಗೋವುಗಳ ರಕ್ಷಣೆ ಜೊತೆಗೆ ಗಣೇಶೋತ್ಸವದ ಸಂದರ್ಭದಲ್ಲಿ ಗೋಪಾಲಕರು, ಹೈನುಗಾರಿಕೆಯಲ್ಲಿ ತೊಡಗಿದವರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಕೆಲಸದ ಜೊತೆಗೆ ವರ್ಷಪೂರ್ತಿ ಸಾರ್ವಜನಿಕರಲ್ಲಿ ಗೋವಿನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಸಮಿತಿಯಿಂದ ಮಾಡಲಾಗುತ್ತಿದೆ ಎಂದರು.
Ganesha Chaturthi Festival ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ಗೋ ಸಂರಕ್ಷಣಾ ಹೋರಾಟ ಸಮಿತಯಿಂದ ಕಳೆದ 25 ವರ್ಷಗಳಿಂದ ಗೋವುಗಳ ರಕ್ಷಣೆ ಕಾರ್ಯ ಮಾಡಲಾಗುತ್ತಿದೆ. ಕಾಯಕ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಾಗ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕೆಲಸ ಯಾವುದೇ ಇರಲಿ ಪ್ರಾಮಾಣಿಕತೆಯಿಂದ ಇದ್ದಾಗ ಸಮಾಜದಲ್ಲಿಯೂ ಗೌರವ ಲಭಿಸುತ್ತದೆ. ಪ್ರಸಕ್ತ ವರ್ಷ ಚಾಲಕ, ಬಸ್ ನಿರ್ವಾಹಕ, ಹೋಟೆಲ್ ಉದ್ಯಮಿ ಹಾಗೂ ಗೋಪಾಲಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಾಲಕ ಎಸ್. ರಾಮಣ್ಣ, ಬಸ್ ನಿರ್ವಾಹಕ ಕೆ. ವೀರಭದ್ರಪ್ಪ, ಹಿರಿಯ ಹೋಟೆಲ್ ಉದ್ಯಮಿ ನಾರಾಯಣ ಭಟ್, ಗೋಪಾಲಕ ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ಯುವಕ ಜೆ.ವಿ. ಗುರುರಾಜ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಶ್ರೀ ಗಣೇಶ ಮೂರ್ತಿಗೆ ೨೧ ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸುವ ಮೂಲಕ ಪವಿತ್ರ ದಂಡಾವತಿ ನದಿಯಲ್ಲಿ ನಿಮಜ್ಜನ ನಡೆಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಗೌರವ ಸದಸ್ಯ ಕೃಷ್ಣಮೂರ್ತಿ ಭಾವೆ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ, ಉಪಾಧ್ಯಕ್ಷ ನಾಗಪ್ಪ ಎಸ್.ಬಿ. ಬಿದರಗೇರಿ, ಖಜಾಂಚಿ ರಾಜೇಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಯು.ಎಸ್. ಶರತ್ ಸ್ವಾಮಿ, ಕಾರ್ಯದರ್ಶಿ ಅಭಿ ಹೊಯ್ಸಳ, ಸಹ ಕಾರ್ಯದರ್ಶಿ ವೀರಭದ್ರ, ಸಿಂಪಿ ಸಮಾಜದ ಉಪಾಧ್ಯಕ್ಷ ಅನಿಲ್ ಕುಮಾರ್ ಬಾಂಬೋರೆ, ವಾಹನ ಚಾಲಕರ ಸಂಘದ ಅಧ್ಯಕ್ಷ ದಾನಶೇಖರ್ ಗುಂಡಶೆಟ್ಟಿಕೊಪ್ಪ, ಅಲೆಗ್ಸಾಂಡರ್ ಡಿಸೋಜಾ, ಬಸವರಾಜ ಹಳೇಸೊರಬ, ಚಂದ್ರಕಾAತ ತವನಂದಿ, ಭೂಪಾಲ್, ಸಮಿತಿಯ ಕಾರ್ಯಕರ್ತರಾದ ಉದ್ಯೋತ್‌ರಾಜ್ ಇಂದ್ರ ಜೈನ್, ಅಭಿಷೇಕ್ ಗೌಡ, ಚವನ್ ರಾಜ್ ಗೌಡ, ನಮಾಮಿರಾಜ್ ಇಂದ್ರ ಜೈನ್, ಕೌಶಿಕ್ ಗೌಡ ಸೇರಿದಂತೆ ಇತರರಿದ್ದರು.
Ganesha Festival ಗೋವುಗಳ ರಕ್ಷಣೆಯಲ್ಲಿ ಗೋಪಾಲಕರ ಪಾತ್ರ ಮಹತ್ವವುಳ್ಳದ್ದು- ಜೆ.ಎಸ್.ಚಿದಾನಂದ ಗೌಡ
Date:
