Bapuji Institute of Hi-Tech Education ಪಠ್ಯಗಳು ಹೊರೆಯಲ್ಲ, ಕೇವಲ ನಾಲ್ಕು ತಿಂಗಳುಗಳಲ್ಲಿ ಪೂರೈಸಬಹುದು ಆದರೆ ಅವು ಪರಿಪೂರ್ಣವೂ ಅಲ್ಲ, ಪಠ್ಯದಿಂದ ಹೊರತಾದ ಜ್ಞಾನವೂ ಸಾಧನೆಗೆ ಅವಶ್ಯ ಎಂದು ಎಂ ಎಸ್ ಬಿ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿತಾ ಕುಮಾರಿ ಜೆ ಹೇಳಿದರು.
ಅವರು ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್ ನ ವಾಣಿಜ್ಯ ವಿಭಾಗದ ವತಿಯಿಂದ ಏರ್ಪಾಡಾಗಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ‘ಫ್ಲೋಸಂ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಪಠ್ಯದಿಂದ ಹೊರತಾದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ವಸ್ತು ಸ್ಥಿತಿ ಬೆಳವಣಿಗೆ ಹಾಗೂ ಭವಿಷ್ಯವನ್ನು ಅಂತರ್ಜಾಲ ಮುಂತಾದ ಆಧುನಿಕ ತಂತ್ರಜ್ಞಾನಗಳಿಂದ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಾ ನವೀಕರಣಗೊಳ್ಳುತ್ತಿರಬೇಕು. ಆಗ ಅವಕಾಶಗಳು ಗೋಚರವಾಗುತ್ತವೆ, ಅವನ್ನು ಬಾಚಿಕೊಳ್ಳಬಹುದು, ಅಧ್ಯಾಪನವು ಶಿಕ್ಷಕರ ಜವಾಬ್ದಾರಿಯಾದರೆ ಅಧ್ಯಯನವು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ, ಇದಕ್ಕಾಗಿ ಗಮನವಿಟ್ಟು ಆಲಿಸಬೇಕು ಅರ್ಥ ಮಾಡಿಕೊಳ್ಳಬೇಕು ಇದಕ್ಕೆ ಬದ್ಧತೆ ಸಮರ್ಪಣೆ ಮತ್ತು ಮಗ್ನತೆ ಬೇಕು ಎಂದರು.
ಹಳೆಯ ಪೀಳಿಗೆಗಿಂತ ಈಗಿನ ಪೀಳಿಗೆಗೆ ತಂತ್ರಜ್ಞಾನಗಳ ತಿಳುವಳಿಕೆ ಹೆಚ್ಚಿಗೆ ಇದ್ದು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸ್ವಾಗತ ಕೋರುತ್ತಾ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿಭುವನಾನಂದ ಹೆಚ್ ವಿ ಸ್ಪರ್ಧಾತ್ಮಕತೆಯು ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ, ಸಾಮರ್ಥ್ಯ ವೃದ್ಧಿಗಾಗಿ ಪಠ್ಯದೊಂದಿಗೆ ವಾಣಿಜ್ಯ ವಿಷಯ ಸಂಬಂಧೀ ಇತರೆ ಕೋರ್ಸ್ ಗಳನ್ನೂ ಮಾಡುವುದು ಉತ್ತಮ ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ ವೀರಪ್ಪನವರು ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಇಂತಹ ಕಾರ್ಯಕ್ರಮ ಏರ್ಪಡಿಸಿರುವುದು ಅನುಕರಣೀಯವಾಗಿದೆ, ಇದು ಬಾಪೂಜಿ ವಿದ್ಯಾ ಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳ ಉತ್ತಮ ಅಭಿರುಚಿಯನ್ನು ಸಾಕ್ಷೀಕರಿಸುತ್ತಿದೆ ಎಂದು ತಿಳಿಸಿದರು.
Bapuji Institute of Hi-Tech Education ಅಪೂರ್ವ ಎಂ ಬಿ ಹಾಗೂ ಸೃಷ್ಟಿ ಎ ಜೈನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಅಕ್ಷತಾ ಎಂ ವಿ ಹಾಡಿದರೆ ಅತಿಥಿಗಳ ಪರಿಚಯವನ್ನು ಸ್ನೇಹಾ ವಿ ಆರ್, ರಾಘವ್ ಜಿ ಎನ್ ಮಾಡಿದರು. ಪ್ರತಿಭಾ ಪುರಸ್ಕಾರದ ನಂತರ ವಂದನೆಗಳನ್ನು ಪ್ರೊ. ಬಿ ಬಿ ಮಂಜುನಾಥ ಅರ್ಪಿಸಿದರು. ಬೋಧಕ ವರ್ಗದ ಲತಾ ಓ ಹೆಚ್, ಶ್ವೇತಾ ಬಿ ವಿ, ಮಂಜುಳಾ ಎ ಎನ್, ಜ್ಞಾನೇಶ್ವರ್ ಆರ್ ಎಸ್, ಪ್ರಜ್ವಲ್ ಎ ಆರ್, ನಾಗರಾಜ್ ಎಂ ಎಸ್, ನರೇಂದ್ರ ಡಿ ಆರ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ಹಾಗೂ ವರದಿ: -ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-
