Friday, December 5, 2025
Friday, December 5, 2025

Sir.M. Visvesvaraya ಸರ್ .ಎಂ.ವಿ ಜನ್ಮದಿನದ ಪ್ರಯುಕ್ತ ಪ್ರೌಢಶಾಲೆ/ ಪಿಯು ವಿದ್ಯಾರ್ಥಿಗಳಿಗೆರಸಪ್ರಶ್ನೆ ಸ್ಪರ್ಧೆ.

Date:

Sir.M. Visvesvaraya ದಿನಾಂಕ: 15-9-25 ರಂದು ಆಚರಿಸಲಿರುವ “ಸರ್.ಎಂ. ವಿಶ್ವೇಶ್ವರಯ್ಯರವರ ಜನ್ಮ ದಿನಾಚರಣೆ” ಮತ್ತು “ಇಂಜಿನಿಯರ‍್ಸ್ ಡೇ” ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ದಿನಾಂಕ:10.09.2025ರ ಬುಧವಾರದಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ವಿಜ್/ರಸಪ್ರಶ್ನೆ ಮತ್ತು ಪದವಿ ಪೂರ್ವ ಕಾಲೇಜು (ಪಿಯುಸಿ) ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ದೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅವರವರ ವಿದ್ಯಾ ಸಂಸ್ಥೆಯ ದೃಢೀಕರಣ ಪತ್ರದ ಮೂಲಕ ಭಾಗವಹಿಸಲು ಕೋರಿದೆ.

೧. ಕ್ವಿಜ್/ರಸಪ್ರಶ್ನೆ ಪ್ರಥಮ ಬಹುಮಾನ 6000/-

ದ್ವಿತೀಯ ಬಹುಮಾನ 4000/-

ತೃತೀಯ ಬಹುಮಾನ 2000/-

೨. ಭಾಷಣ ಸ್ಪರ್ದೆ ಪ್ರಥಮ ಬಹುಮಾನ 3000/-

ದ್ವಿತೀಯ ಬಹುಮಾನ 2000/-

ತೃತೀಯ ಬಹುಮಾನ 1000/-

ಸ್ಥಳ:- ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣ

ದಿನಾAಕ: 10.09.2025 ಬುದವಾರ, ಸಮಯ: ಬೆಳಗ್ಗೆ 10.00 ಘಂಟೆಗೆ

Sir.M. Visvesvaraya ನಿಬಂಧನೆಗಳು: ಒಂದು ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳ ಒಂದು ತಂಡದ‌ಂತೆ ಎರಡು ತಂಡಗಳನ್ನು ಮಾತ್ರ ಕಳುಹಿಸಿಕೊಡುವುದು. ಕ್ವಿಜ್ ಸ್ಪರ್ದೆಯು ಎರಡು ಹಂತಗಳಲ್ಲಿ ನಡೆಯಲಿದ್ದು
1) ಮೊದಲನೆಯ ಹಂತ ಲಿಖಿತವಾಗಿರುತ್ತದೆ.

2) ಎರಡನೆಯ ಹಂತ ಮೌಖಿಕವಾಗಿರುತ್ತದೆ.

ಭಾಷಣ ಸ್ಪರ್ದೆಗೆ ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಎರಡು ಸ್ಪರ್ಧೆ ಗಳಲ್ಲಿ ಪ್ರಥಮ ಸ್ಥಾನ ಪಡೆದ ವಿಜೇತ ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜಿಗೆ ಆಕರ್ಷಕ ಪಾರಿತೋಷಕ ನೀಡಲಾಗುವುದು.
ಸೂಚನೆ:ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9353966546,7019663300,9632351163 ಸಂಪರ್ಕಿಸಲು ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...