Friday, December 5, 2025
Friday, December 5, 2025

B. R. Ambedkar ಆಗಸ್ಟ್ 30. ಚಿತ್ರದುರ್ಗದಲ್ಲಿ “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನ” ವಿಚಾರ ಸಂಕಿರಣ.

Date:

B. R. Ambedkar ಕರ್ನಾಟಕ ಮಾಧ್ಯಮ ಅಕಾಡೆಮಿಯು ಚಿತ್ರದುರ್ಗ ಪತ್ರಕರ್ತರ ಭವನದ ಡಾ. ಬಿ.ಆರ್.‌ ಅಂಬೇಡ್ಕರ್‌ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಎಸ್‌.ಸಿ. ಎಸ್‌.ಟಿ. ಪತ್ರಿಕಾ ಸಂಪಾದಕರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಗಸ್ಟ್‌ 30 ರಂದು “ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್‌ ದೃಷ್ಟಿಕೋನ” ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಡಿ. ಸುಧಾಕರ್‌ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ.
B. R. Ambedkar ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಕ್ರಾಂತಿಕಾರಿ ಚಿಂತನೆಗಳು, ಇಂದಿನ ದಿನದಲ್ಲಿಯೂ ಅವುಗಳ ಪ್ರಸ್ತುತತೆ, ಪತ್ರಕರ್ತರಾಗಿ ಅವರ ಕೊಡುಗೆ ಮತ್ತು ಎಲ್ಲರನ್ನು ಒಳಗೊಂಡ ಸಮಾಜ ನಿರ್ಮಾಣಕ್ಕೆ ಮುಂದಿನ ಹಾದಿ ಮುಂತಾದ ವಿಷಯಗಳ ಚರ್ಚೆಗೆ ಈ ವಿಚಾರ ಸಂಕಿರಣವು ವೇದಿಕೆಯಾಗಲಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ಅವರು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಶ್ರೀ ಡಿ. ಉಮಾಪತಿ ಅವರು ದಿಕ್ಸೂಚಿ ಭಾಷಣ ಮಾಡುವರು. ಮಾನ್ಯ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಶ್ರೀ ಕೆ.ವಿ. ಪ್ರಭಾಕರ್‌, ಸಂಸದ ಗೋವಿಂದ ಎಂ. ಕಾರಜೋಳ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ “ಅಂಬೇಡ್ಕರ್‌ ಅವರ ಪತ್ರಿಕಾ ವೃತ್ತಿ” ವಿಷಯದ ಕುರಿತು ಪತ್ರಕರ್ತ ಶ್ರೀ ಎನ್.‌ ರವಿಕುಮಾರ್‌, “ಪತ್ರಕರ್ತರಾಗಿ ಅಂಬೇಡ್ಕರ್‌ ಅವರ ಬರವಣಿಗೆಗಳು” ವಿಷಯದ ಕುರಿತು ವಿ.ಎಲ್.‌ ನರಸಿಂಹಮೂರ್ತಿ, “ಅಂಬೇಡ್ಕರ್‌ ದೃಷ್ಟಿಯಲ್ಲಿ ಲಿಂಗಸಮಾನತೆ” ಕುರಿತು ಡಾ. ಭಾರತಿದೇವಿ ಹಾಗೂ ಪತ್ರಕರ್ತರಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ವಿಷಯದ ಕುರಿತು ರಿಷಿಕೇಶ್‌ ಬಹದ್ದೂರ್‌ ದೇಸಾಯಿ ವಿಷಯ ಮಂಡಿಸಲಿದ್ದಾರೆ. ಹಿರಿಯ ಪತ್ರಕರ್ತ ಶ್ರೀ ಸನತ್‌ ಕುಮಾರ್‌ ಬೆಳಗಲಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.
ಪತ್ರಕರ್ತರು ಹಾಗೂ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...