Youth Hostels Association of India ವಿದ್ಯಾಭ್ಯಾಸದ ಜೊತೆಗೆ ಸಾಹಸ ಪ್ರವೃತಿ ಅಭ್ಯಾಸ ಮಾಡಿಸಬೇಕು. ಆಗ ಮಾತ್ರ ಮುಂದಿನ ಪ್ರಜೆಗಳು ಯಾವುದಕ್ಕು ಅಂಜದೆ ತಮ್ಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಯೂತ್ ಹಾಸ್ಟೇಲ್ಸ್ ತರುಣೋದಯ ಘಟಕ ಮಥುರಾ ಪ್ಯಾರಡೈಸ್ ನಲ್ಲಿ ಆಯೋಜಿಲಾಗಿದ್ದ ಸಂಸ್ಥಾಪಕರ ದಿನದ ಕಾರ್ಯಕ್ರಮ ಉದ್ಘಾಟಿಸಿ ಅ.ನ.ವಿಜಯೇಂದ್ರ ಮಾತನಾಡಿದರು
ಶತಮಾನದ ಹಿಂದೆಯೆ ಜರ್ಮನಿಯ ಅದ್ಯಾಪಕ ರಿಚರ್ಡ್ ಸ್ಕಿರ್ಮನ್ ಬಡ ಸರ್ಕಾರಿ ಶಾಲಾಮಕ್ಕಳಿಗೆ ಚಾರಣ ಏರ್ಪಡಿಸಿ ಈ ಸಹಾಸ ಪ್ರವೃತಿ ಬೆಳೆಸಲು ಪ್ರಾರಂಭಿಸಿದ. ರಜಾದಿನಗಳಲ್ಲಿ ರಾತ್ರಿ ಶಾಲೆಯಲ್ಲಿ ವಾಸ್ತವ್ಯ ಮಾಡಿ, ಕಡಿವೆ ವೆಚ್ಛದಲ್ಲಿ ಕಾರ್ಯಕ್ರಮ ರೂಪಿಸಲು ಪ್ರಾರಂಭಿಸಿದರು. ಇದನ್ನು ಇತರೆ ಪ್ರದೇಶಕ್ಕು ಹರಡುವಂತೆ ಮಾಡಿ, ಯೂತ್ ಹಾಸ್ಟೆಲ್ಸ್ ಹೆಸರಿನಡಿ ಪ್ರಾರಂಭಿಸಿದಿದರು. ಇದನ್ನು ಅರಿತ ಇತರ ಅಧ್ಯಾಪಕರು ತಾವು ಅಳವಡಿಸಿಕೊಂಡು, ದೇಶ, ವಿದೇಶಕ್ಕು ಹರಡಿ ಇಂದು ವಿಶ್ವಾಧ್ಯಂತ ಯಶಸ್ವಿಯಗಿ ಕಾರ್ಯಕ್ರಮ ಜರುಗುತ್ತಿದೆ ಎಂದರು.
Youth Hostels Association of India ಛೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ಬಡವರ ಆಶಾಕಿರಣದಂತೆ ಇಂದು ಯೂತ್ ಹಾಸ್ಟೇಲ್ಸ್ ಕಾರ್ಯ ನಿರ್ವಹಿಸುತ್ತಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಸ್ಥಳಿಯ ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ನಗರದ ಸಾವಿರಾರು ಜನರು ನಮ್ಮ ಘಟಕದ ಮೂಲಕ ರಾಷ್ಟ್ರೀಯ ಹಿಮಾಲಯ ಚಾರಣಗಳಲ್ಲಿ ಭಾಗವಹಿಸಿದ್ದಾರೆ. ಮೂರು ಸಾವಿರಕ್ಕೆ ಅಜೀವ ಸದಸ್ಯತ್ವ ನೀಡಲಾಗುತ್ತದೆ, ಇದರ ಸದುಪಯೋಗ ಪಡಿಸಿಕೊಳ್ಳುತೆ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಎನ್. ಗೋಪಿನಾಥ್ ಮಾತನಾಡಿ 1909ರಲ್ಲಿ ಜರ್ಮನಿಯಲ್ಲಿ ಪ್ರಾರಂಭವಾದ ಯೂತ್ ಹಾಸ್ಟೇಲ್ಸ್ ಇಂದು ವಿಶ್ವದ ಹಲವಾರು ದೇಶಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ, ಯುವಕರಿಗೆ ಸಹಾಸ ಪ್ರವೃತ್ತಿ ಹೆಚ್ಚಿಸಿದೆ. ಇದನ್ನು ಅರಿತ ಮಹಾರಾಜರು ಭಾರತದಲ್ಲಿಯೇ ಪ್ರಥಮ ಭಾರಿಗೆ, ಸ್ವಾತಂತ್ರ್ಯಪೂರ್ವದಲ್ಲಿಯೇ ಮೈಸೂರಿನಲ್ಲಿ ಪ್ರಾರಂಭಿಸಿದರು. ಸ್ವಾತಂತ್ರ್ಯದ ನಂತರ ಕೇಂದ್ರ ಕಛೇರಿ ದೆಹಲಿಗೆ ವರ್ಗಗೊಂಡು, ಇಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಕೃತಿ ಮಂಚಾಲೆ ಪ್ರಾರ್ಥಿಸಿದರು, ಎಮ್. ಪಿ.ನಾಗರಾಜ್ ಸ್ವಾಗತಿಸಿದರು, ಜಿ. ವಿಜಯಕುಮಾರ್ ವಂದಿಸಿದರು. ರಾಜು, ಎಮ್.ನಾಗರಾಜ್, ರವೀಂದ್ರ, ಸುಮಾರಾಣಿ, ಮಲ್ಲಿಕಾರ್ಜುನ್ ಮುಂತಾದವರು ಇದ್ದರು.
Youth Hostels Association of India ವಿದ್ಯಾಭ್ಯಾಸದ ಜೊತೆ ಮಕ್ಕಳಲ್ಲಿ ಸಾಹಸ ಪ್ರವೃತ್ತಿ ಬೆಳೆಸಬೇಕು- ಅರಿಶಿನಗೆರೆ ನಾಡಿಗ್ ವಿಜೇಂದ್ರರಾವ್.
Date:
