ಕಣ್ಣಿನ ಪರೀಕ್ಷೆ ಮಾಡಿಸುವುದರ ಮುಖಾಂತರ ಮುಂದೆ ಸಂಭವಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬಹುದು. ಇದು ಕೇವಲ ತಪಾಸಣಾ ಶಿಬಿರ ಅಷ್ಟೇ ಅಲ್ಲ, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ತಿಳುವಳಿಕೆ ಶಿಬಿರ ಎಂದು ಶಂಕರ ಕಣ್ಣಿನ ಆಸ್ಪತ್ರೆ ನೇತ್ರಶಾಸ್ತ್ರಜ್ಞೆ ಡಾ. ಶ್ರೀನಿ ಹೇಳಿದರು.
ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಶಾಂತಿನಗರದ ಸರ್ಕಾರಿ ಕನ್ನಡ ಮತ್ತು ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ನೇತ್ರ ತಪಾಸಣಾ ಉಚಿತ ಶಿಬಿರದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಣ್ಣಿನ ಆರೋಗ್ಯದ ಲಕ್ಷಣಗಳು, ಕಣ್ಣಿನ ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು, ಕಣ್ಣಿನ ಆರೈಕೆ ಸಲಹೆಗಳಿಂದ ಹಿಡಿದು ಕಣ್ಣಿನ ಚಿಕಿತ್ಸೆಗಳವರೆಗೆ ಹಲವಾರು ವಿಷಯಗಳ ಜೊತೆಗೆ ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸುವುದರ ಪ್ರಯೋಜನದ ಬಗ್ಗೆ ವಿವರಿಸಿದರು.
Shankara Eye Hospital ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ಪ್ರತಿಯೊಬ್ಬರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಕಾರ್ಯದರ್ಶಿ ಧನಂಜಯ್ ಮಾತನಾಡಿ, ಕಣ್ಣಿನ ಆರೋಗ್ಯ ಅತ್ಯಂತ ಮುಖ್ಯ. ಶಿಬಿರಾರ್ಥಿಗಳು ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಮಾತನಾಡಿ, ಯಾವುದೇ ಭಯ ಪಡದೆ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕು. ಮುಂದೆ ತಾವುಗಳು ನೇತ್ರದಾನ ಮಾಡುವುದರ ಮೂಲಕ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಬೇಕು ಎಂದರು.
ಶಿವ ಟೈರ್ಸ್ ಮಾಲೀಕ ಶಿವಕುಮಾರ್ ಅವರು ದಾನವಾಗಿ ನೀಡಿದ ಕನ್ನಡಕವನ್ನು ಡಾ. ಕಿರಣ್ ಕುಮಾರ್ ಮೂಲಕ ಶಿಬಿರಾರ್ಥಿಗಳಿಗೆ ವಿತರಿಸಲಾಯಿತು. ರೋಟರಿ ಸಂಸ್ಥೆಯ ಮನೋಹರ್, ನಿರಂಜನ್ ಕುಮಾರ್, ನೇತ್ರಾಧಿಕಾರಿ ನವೀನ್, ರೋಸಾ ಮತ್ತಿತರು ಉಪಸ್ಥಿತರಿದ್ದರು.
Shankara Eye Hospital ಕಣ್ಣಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಕಣ್ಣಿನ ವೈದ್ಯರನ್ನ ಸಂಪರ್ಕಿಸಿದರೆ ಪ್ರಯೋಜನ- ಡಾ.ಶ್ರೀನಿ.
Date:
