Mysore Police ಶರತ್ ಎಂ ಎಂ, ಸುಮಾರು 19 ವರ್ಷಗಳು ಈತ ಹುಟ್ಟಿನಿಂದ ಕಿವುಡ/ಮೂಗನಾಗಿದ್ದು ಮೈಸೂರಿನ ಯಾದವಗಿರಿ ಕೈಗಾರಿಕಾ ಪ್ರದೇಶದ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಜುಲೈ 27 ರಂದು ಕಾಣೆಯಾಗಿರುತ್ತಾನೆ.
ಶಿವಮೊಗ್ಗ ಜಿಲ್ಲೆಯ ಮಂಜಪ್ಪ ಎಂಬುವವರ ಏಕೈಕ ಪುತ್ರನಾದ ಇವನು ಹುಟ್ಟಿನಿಂದ ಕಿವುಡ/ಮೂಗನಾಗಿದ್ದು ಈ ಹಿಂದೆ ಭದ್ರಾವತಿಯ ಕಿವುಡ ಮೂಗರ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತಾನೆ. ಕಾಣೆಯಾದ ಶರತ್ ಸುಮಾರು 149 ಸೆಂ.ಮೀ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಕಪ್ಪು ಕೂದಲು ಹೊಂದಿರುತ್ತಾನೆ. ಎಡಗೈಲಿ ಅಮ್ಮ ಎಂಬ ಹಚ್ಚೆ ಇರುತ್ತದೆ. ಬಲಗೈಲಿ ಬೆಳ್ಳಿ ಕಡಗ, ಕುತ್ತಿಗೆಯಲ್ಲಿ ಬೆಳ್ಳಿ ಸರ, ಬಲಗೈಯಲ್ಲಿ ಬೆಳ್ಳಿ ಉಂಗುರ ಧರಿಸಿರುತ್ತಾನೆ. ಕಾಣೆಯಾದ ವೇಳೆ ತೆಳು ನೀಲಿ Mysore Police ಬಣ್ಣದ ಶರ್ಟ್, ಕಪ್ಪು ಬಣ್ಣದ ನಿಕ್ಕರ್ ಧರಿಸಿರುತ್ತಾನೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ
ವಿ.ವಿ.ಪುರಂ ಪೊಲೀಸ್ ಠಾಣೆ ಅಥವಾ ಮೈಸೂರು ನಗರದ ಪೊಲೀಸ್ ಕಂಟ್ರೋಲ್ ರೂಂ, ದೂ.ಸಂ: 0821-2418314, ಪೊಲೀಸ್ ನಿರೀಕ್ಷಕರ ಸಂಖ್ಯೆ 9480802238 ನ್ನು ಸಂಪರ್ಕಿಸಬಹುದೆಂದು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
Mysore Police ಕಾಣೆಯಾಗಿರುವ ಕಿವುಡ/ ಮೂಗ ಹುಡುಗನ ಸುಳಿವು ನೀಡಿ ಸಹಕರಿಸಿ, ಮೈಸೂರು ವಿವಿ ಪುರಂ ಪೊಲೀಸ್ ಠಾಣೆ ಮಾಹಿತಿ
Date:
