JCI Sahyadri Shivamogga ಮೌನವೀಯ ಮೌಲ್ಯಗಳ ಅರಿವು ಮೂಡಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಜೆಸಿಐ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಬಿ.ಮೋಹನ್ ಹೇಳಿದರು.
ಜೆಸಿಐ ಸಹ್ಯಾದ್ರಿ ಘಟಕದ ವತಿಯಿಂದ ಸರ್ವ ಪೋಷಕ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಉದ್ಯೋಗಿ ಹಾಗೂ ಶಿಬಿರಾರ್ಥಿಗಳಿಗೆ ಜೆಸಿಐ ಮಹತ್ವ ಕುರಿತು ಉಪನ್ಯಾಸ ನೀಡಿದ ಅವರು, ವೃತ್ತಿ ಹಾಗೂ ಬದುಕಿನಲ್ಲಿ ಶಿಸ್ತುಬದ್ಧ ಜೀವನಶೈಲಿ ಅಳವಡಿಸಿಕೊಳ್ಳಲು ಜೆಸಿಐ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಜೆಸಿಐ ಸಂಸ್ಥೆ ತನ್ನದೇ ಆದ ವಿಶೇಷ ಮೌಲ್ಯಗಳೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದೆ. ಯುವಜನರಿಗೆ ಹಾಗೂ ಎಲ್ಲ ಕಾರ್ಯಕ್ಷೇತ್ರಗಳನ್ನು ವಿಶೇಷ ತರಬೇತಿಗಳನ್ನು ನೀಡುವುದರ ಮುಖಾಂತರ ಅವರನ್ನು ಜೆಸಿಐ ಸಂಸ್ಥೆಗೆ ಸೇರಿಸಿ ಉತ್ತಮ ಸೇವೆ ಸಲ್ಲಿಸಲು ವೇದಿಕೆ ಒದಗಿಸುತ್ತಿದೆ.
ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮಲ್ಲಿನ ಕಾರ್ಯಕ್ಷಮತೆ ಮತ್ತಷ್ಟು ವೃದ್ಧಿಸುತ್ತದೆ ಎಂದು ಹೇಳಿದರು.
ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ.ವಿ.ಗಣೇಶ್ ಮಾತನಾಡಿ, ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯುವಜನರನ್ನು ಜೆಸಿಐ ಸಂಸ್ಥೆಗೆ ಸೇರಿಸುವ ಉದ್ದೇಶವಿದ್ದು, ಈ ವರ್ಷ 1 ಲಕ್ಷ ಸದಸ್ಯರನ್ನು ಜೆಸಿಐ ಸಂಸ್ಥೆಗೆ ಸೇರಿಸುವ ಗುರಿಯನ್ನು ಜೆಸಿಐ ಅಂತರಾಷ್ಟ್ರೀಯ ಅಧ್ಯಕ್ಷರು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಪಂಚಾದ್ಯಂತ ಅಭಿಯಾನ ನಡೆಯುತ್ತಿದೆ ಎಂದರು.
JCI Sahyadri Shivamogga ಜೆಸಿಐ ಸಂಸ್ಥೆಗೆ ಸೇರುವುದರ ಮುಖಾಂತರ ಹೊಸ ಸಂಚಲನ ಮೂಡುವವರ ಜೊತೆಗೆ ಬೇರೆ ಬೇರೆ ವೃತ್ತಿಪರರ ಸಂಪರ್ಕ ಹಾಗೂ ಅವರ ಪ್ರತಿಭೆ, ಸೇವಾ ಗುಣಗಳು ಮತ್ತು ಮಾನವೀಯ ಮೌಲ್ಯಗಳ ಪರಿಚಯವಾಗುತ್ತದೆ. ಎಲ್ಲ ಶಿಬಿರಾರ್ಥಿಗಳು ಜೆಸಿಐ ಸಂಸ್ಥೆ ಸೇರಬೇಕು ಎಂದು ತಿಳಿಸಿದರು.
ಜೆಸಿಐ ಸಂಸ್ಥೆ ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ಹಾಗೂ ತರಬೇತಿಗಳ ಬಗ್ಗೆ ಮಾಹಿತಿ ನೀಡಲಾಯಿತು.
ಸರ್ವ ಪೋಷಕ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಸುನೀಲ್ ನಲ್ಲೂರು ಹಾಗೂ ಉದ್ಯೋಗಿಗಳು ಉಪಸ್ಥಿತರಿದ್ದರು.
