Department of Youth Empowerment and Sports ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆ.31 ರಂದು ಬೆಳಿಗ್ಗೆ 6.30 ಕ್ಕೆ ನೆಹರು ಕ್ರೀಡಾಂಗಣದಲ್ಲಿ ಸೈಕ್ಲೋಥಾನ್ ಸ್ಪರ್ಧೆ ಆಯೋಜಿಲಾಗಿದೆ.
ಸ್ಪರ್ಧೆಯು ನೆಹರು ಕ್ರೀಡಾಂಗಣದಿಂದ ಆರಂಭವಾಗಿ ಸರ್ಕೀಟ್ ಹೌಸ್, ಬಸ್ ನಿಲ್ದಾಣ, ಹಮೀರ್ ಅಹಮದ್ ಸರ್ಕಲ್, ಹೊಳೆ ಬಸ್ ನಿಲ್ದಾಣ, ಕೆಇಬಿ ಸರ್ಕಲ್, ಮಹಾವೀರ ಸರ್ಕಲ್ ಮಾರ್ಗವಾಗಿ ಸಾಗಿ ನೆಹರು ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಆಸಕ್ತ ಸ್ಪರ್ಧಿಗಳು ಆ.28 ರ ಸಂಜೆಯೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ , ನೆಹರು ಕ್ರೀಡಾಂಗಣ ಶಿವಮೊಗ್ಗ ಇಲ್ಲಿ ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು.
Department of Youth Empowerment and Sports ಹೆಚ್ಚಿನ ಮಾಹಿತಿಗಾಗಿ ದೂ.ಸಂ:9845863549, 7619638472 ಗೆ ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Department of Youth Empowerment and Sports ಸೈಕ್ಲೋಥಾನ್ ಸ್ಪರ್ಧೆಗೆ ನೋಂದಣಿಗೆ ಆಗಸ್ಟ್ 28 ಕೊನೇಯ ದಿನಾಂಕ
Date:
