ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ
Klive Special Article ಶ್ರೀಗಣೇಶ ಸ್ಮರಣೆ ಶ್ರೀಹರಿಕಥಾಮೃತಸಾರ ಎನ್ನುವ ಶ್ರೇಷ್ಠ ಗ್ರಂಥವನ್ನು
ಶ್ರೀಜಗನ್ನಾಥದಾಸರು ತಮ್ಮ ಇಳಿ ವಯಸ್ಸಿನಲ್ಲಿ ಬರೆದಿದ್ದಾರೆಂದು ತಿಳಿದು ಬರುತ್ತದೆ.ಈ ಗ್ರಂಥವು ಒಟ್ಟು 32,ಸಂಧಿಗಳನ್ನು ಹೊಂದಿದೆ.
ಜಗನ್ನಾಥದಾಸರು ಮೊದಲನೆಯ ಸಂಧಿಯಾದ ಮಂಗಳಾಚರಣ ಸಂಧಿಯಿಂದ ಪ್ರಾರಂಭವಾಗಿ 27ಸಂಧಿಗಳನ್ನು ಪೂರೈಸುತ್ತಾರೆ.ಮುಂದೆ28ನೇ ಸಂಧಿಯನ್ನು ಬರೆಯಲು ಆಗುವುದೇ ಇಲ್ಲ.ಅವರು ಯೋಚನೆ ಮಾಡಿ ತಮ್ಮ ಗುರುಗಳ ಬಳಿ ಕೇಳುವುದೆಂದು ಶ್ರೀಗೋಪಾಲದಾಸರ ಹತ್ತಿರ ಬರುತ್ತಾರೆ.ವಿಷಯ ತಿಳಿದ ಗುರುಗಳು ನೀವು ಗಣಪತಿಯನ್ನೇ ಮರೆತು ಬಿಟ್ಟಿದ್ದೀರಿ,ಅದಕ್ಕೆ ನಿಮ್ಮ ಹರಿಕಥಾಮೃತಸಾರದ ಬರವಣಿಗೆ ಮುಂದುವರೆಯುತ್ತಿಲ್ಲ ಎಂದು ಹೇಳಿ ಮುಂದಿನ ಸಂಧಿಯನ್ನು ಗಣಪತಿಯ ಹೆಸರಿನಲ್ಲಿ ಬರೆಯಿರಿ ಎಂದು ಸೂಚಿಸುತ್ತಾರೆ.ಜಗನ್ನಾಥದಾಸರು 28ನೇ ಸಂಧಿಯನ್ನು “ವಿಘ್ನೇಶ್ವರ ಸ್ತೋತ್ರ ಸಂಧಿ”ಎಂದು ಗಣಪತಿಗೆ ಅರ್ಪಣೆ ಮಾಡುತ್ತಾರೆ.ಮುಂದೆ ಬರವಣಿಗೆ 32ಸಂಧಿಯವರೆಗೂ ಮುಂದುವರೆಯುತ್ತದೆ.
ಅಂದರೆ ಇದರಿಂದ ತಿಳಿಯುವುದೇನೆಂದರೆ ಯಾವುದೇ
Klive Special Article ಶ್ರೀಗಣೇಶ ಸ್ಮರಣೆ ಶುಭ ಕಾರ್ಯವನ್ನು ಆರಂಭಿಸುವ ಮೊದಲು ವಿಘ್ನೇಶ್ವರನನ್ನು ಪೂಜಿಸಿ ಕೆಲಸ ಪ್ರಾರಂಭ ಮಾಡಬೇಕೆಂಬುದು ತಿಳಿಯುತ್ತದೆ.
ಯಾವುದೇ ಹವನ,ಹೋಮ,ಮಂಗಳಕಾರ್ಯಗಳನ್ನು
ಪ್ರಾರಂಭಿಸುವ ಮೊದಲು ಗಣಪತಿಯನ್ನು ಪೂಜಿಸಿ,
ಹಿಡಿದ ಶುಭಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರಿಸುವಂತೆ ಪ್ರಾರ್ಥಿಸುವುದು ರೂಢಿಯಲ್ಲಿದೆ.
ಇಂತಹ ವಿಘ್ನ ನಿವಾರಕನಾದ ವಿಘ್ನೇಶ್ವರನನ್ನು ನಾವೂ ಭಕ್ತಿಯಿಂದ ಪೂಜಿಸಿ ಸ್ವಾಮಿಯ ಅನುಗ್ರಹ ಪಡೆಯೋಣ.
