Skating Association ಕೇರಳದ ಫಲಕಾಡಿನಲ್ಲಿ ನಡೆಯುತ್ತಿರುವ ಸಿ ಬಿ ಎಸ್ ಸಿ ದಕ್ಷಿಣ ವಲಯದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಇಬ್ಬರು ಸ್ಟೇಟರ್ ಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದಿದ್ದಾರೆ. ಶಿವಮೊಗ್ಗದ ನಮ್ಮ ಸ್ಕೇಟಿಂಗ್ ಅಸೋಸಿಯೇಷನ್ ನ ಆದ್ವಿಕಾ ನಾಯರ್ ಅವರು ಬಂಗಾರ ಹಾಗೂ ಕಂಚಿನ ಪಡೆದಿದ್ದಾರೆ. ನಮ್ಮ ಸ್ಕೇಟರ್ ವೇದಾಂಶ್ ಗಜೇಂದ್ರ ಪರಡಿ ಅವರು ಬೆಳ್ಳಿ ಪದಕ ಗೆದ್ದು, ಶಿವಮೊಗ್ಗ ಇಲ್ಲಿಗೆ ಕೀರ್ತಿ ತಂದಿದ್ದಾರೆ.
ಶಿವಮೊಗ್ಗ ಗೋಪಾಳದಲ್ಲಿರುವ ಕ್ರೀಡಾ ಸಂಕೀರ್ಣದಲ್ಲಿ ನಮ್ಮ ಸಂಸ್ಥೆಯ ತರಬೇತಿದಾರರಾದ ಆರ್. ವಿಶ್ವಾಸ್ ಮತ್ತು ಆರ್ ಅತೀಶ್ ಅವರಿಂದ ತರಬೇತಿ ಪಡೆದಿದ್ದಾರೆ.
Skating Association ಸಂಸ್ಥೆಗೆ ಕೀರ್ತಿ ತಂದ ನಮ್ಮ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್, ಕಾರ್ಯದರ್ಶಿ ಎಂ. ರವಿ ಹಾಗೂ ಪದಾಧಿಕಾರಿಗಳಾದ ಎಸ್. ಕೆ. ಗಜೇಂದ್ರ ಸ್ವಾಮಿ, ಉಮಾ ಟಿ., ತಾರಾನಾಥ್, ಶ್ರೀನಾಥ್ ಅಭಿನಂದಿಸಿದ್ದಾರೆ.
ಸಂಸದರ ಅಭಿನಂದನೆ: ಜಿಲ್ಲೆಗೆ ಕೀರ್ತಿ ತಂದ ಸ್ಕೇಟಿಂಗ್ ಪುಟಗಳನ್ನು ಸಂಸದ ಬಿ. ವೈ. ರಾಘವೇಂದ್ರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರೇಖ್ಯಾನಾಯ್ಕ ಅಭಿನಂದಿಸಿದ್ದಾರೆ.
Skating Association ಕೇರಳದ ಫಾಲಕ್ಕಾಡ್ ನಲ್ಲಿ ನಡೆದ ದಕ್ಷಿಣ ವಲಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಶಿವಮೊಗ್ಗ ಸ್ಪರ್ಧಿಗಳ ಗಮನಾರ್ಹ ಸಾಧನೆ
Date:
