JCI Shivamogga ಜೆಸಿಐ ಸಮೃದ್ಧಿ ಘಟಕದ ಪದಾಧಿಕಾರಿಗಳು ತುಂಗಾ ನದಿಗೆ ಬಾಗಿನ ಸಮರ್ಪಿಸಿದರು.
ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ತುಂಗಾ ನದಿಗೆ ಬಾಗಿನ ಅರ್ಪಿಸಿದ್ದು, ಘಟಕದ ಎಲ್ಲರೂ ಭಾಗವಹಿಸಿದ್ದು, ಗೌರಿ ಗಣೇಶ ಹಬ್ಬ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.
ಜೆಸಿಐ ಸಮೃದ್ಧಿ ಘಟಕದ ಕಾರ್ಯದರ್ಶಿ ಗಾಯತ್ರಿ ಯಲ್ಲಪ್ಪಗೌಡ ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ತುಂಗಾ ನದಿಯು ತುಂಬಿದೆ. ತುಂಬಿದ ನದಿಗೆ ಬಾಗಿನ ಅರ್ಪಿಸುವುದು ತುಂಬಾ ಖುಷಿಯಾಗುತ್ತಿದೆ. ಸಕಾಲಕ್ಕೆ ಸರಿಯಾಗಿ ಮಳೆಯಾಗಿರುವುದರಿಂದ ಎಲ್ಲ ರೈತರು ಬೆಳೆಗಳನ್ನು ಚೆನ್ನಾಗಿ ಬೆಳೆದು ಸುಖ ಸಮೃದ್ಧಿ ಜೀವನ ನಡೆಸಲಿ ಎಂದು ಆಶಿಸಿದರು.
ಜೆಸಿಐ ಸಮೃದ್ಧಿ ಘಟಕದ ಸದಸ್ಯೆ ಕವಿತಾ ಮಾತನಾಡಿ, ತುಂಗಾ ನದಿಗೆ ಬಾಗಿನ ಅರ್ಪಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು.
JCI Shivamogga ಜೆಸಿಐ ಸಂಸ್ಥೆಯ ಶಶಿಕಲಾ ಹಾಗೂ ಮೀನ ಅವರು ಸಮೃದ್ಧಿ ಘಟಕದ ಅಧ್ಯಕ ನರಸಿಂಹಮೂರ್ತಿ ಅವರಿಗೆ ವಸ್ತ್ರವನ್ನು ಉಡುಗೊರೆಯಾಗಿ ನೀಡಿದರು.
ಅಶ್ವಿನಿ, ನರಸಮ್ಮ, ಅನಿತಾ ಸಿರಿಲ್, ಶಶಿಕಲಾ, ಸುಮ, ಪುಷ್ಪ, ಮಾಲಾ, ಸರಳ ವಾಸನ್, ಮಂಜುಳಾ, ಮೀನಾ, ಅನ್ನಪೂರ್ಣ, ಶಾಂತಮ್ಮ, ದೀಕ್ಷಿತ್, ಕಿಶನ್, ಬಿ.ಎಂ.ಯಲ್ಲಪ್ಪಗೌಡ ಹಾಜರಿದ್ದರು.
JCI Shivamogga ಶಿವಮೊಗ್ಗ ಜೆಸಿಐ ಸಮೃದ್ದಿ ಘಟಕದಿಂದ ತುಂಬಿದ ತುಂಗೆಗೆ ಬಾಗಿನ ಅರ್ಪಣೆ
Date:
