S.N. Channabasappa ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ, ಇಂದು ಮಾನ್ಯ ವಸತಿ ಸಚಿವರಾದ ಶ್ರೀ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿ, ಶಿವಮೊಗ್ಗ ನಗರದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಲು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮನವಿಯನ್ನು ಸಲ್ಲಿಸಿದರು.
S.N. Channabasappa ಭೇಟಿಯ ಸಂದರ್ಭದಲ್ಲಿ, ಗೋಪ ಶೆಟ್ಟಿಕೊಪ್ಪ ಮತ್ತು ಗೋವಿಂದಪುರ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ AHP ಘಟಕದ ಮನೆಗಳ ಪ್ರಗತಿ ಹಾಗೂ ಗುಣಮಟ್ಟದ ಪರಿಶೀಲನೆಗಾಗಿ, ರಾಜೀವ್ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ ಅವರು 26.08.2025 ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಯೋಜನೆಯ ಪ್ರಗತಿಯನ್ನು ತ್ವರಿತಗೊಳಿಸಲು, ಬಾಕಿ ಉಳಿದ ಮನೆಗಳ ಶೀಘ್ರ ಹಸ್ತಾಂತರಕ್ಕೆ ಮತ್ತು ಫಲಾನುಭವಿಗಳ ವಸತಿ ಕನಸನ್ನು ನನಸಾಗಿಸಲು ಮಹತ್ವದ ಹೆಜ್ಜೆಯಾಗಲಿದೆ.
