Food and Civil Supplies Department ಪಡಿತರ ವಿತರಣೆಯಲ್ಲಿ ಅವ್ಯವಹಾರಗಳನ್ನು ತಪ್ಪಿಸುವ ಉದ್ದೇಶದಿಂದ ಬಯೋಮೆಟ್ರಿಕ್ ಆಧಾರಿತ ಪಡಿತರ ವಿತರಣೆಯನ್ನು ಕಡ್ಡಾಯಗೊಳಿಸಲಾಗಿದೆ. ಎಂದು ರಾಜ್ಯ ಆಹಾರ ಮತ್ಯು ನಾಗರೀಕ ಸರಬರಾಜು ಇಲಾಖೆ ಮಂತ್ರಿ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
Food and Civil Supplies Department ವಯಸ್ಸಾದವರಿಗೆ ಬಯೋಮೆಟ್ರಿಕ್ ನೀಡಲು ತೊಂದರೆ ಉಂಟಾದಲ್ಲಿ ಐರೀಸ್ ಸ್ಕ್ಯಾನರ್ (ಕಣ್ಣಿನ ಮೂಲಕ ದೃಢೀಕರಣ) ಮಾಡಬಹುದಾಗಿದೆ. ಬಯೋಮೆಟ್ರಿಕ್ ಹಾಗೂ ಐರೀಸ್ ಎರಡರಲ್ಲಿಯೂ ಪಡಿತರ ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ವಿನಾಯಿತಿ ನೀಡಿ ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದ್ದಾರೆ
