Saturday, December 6, 2025
Saturday, December 6, 2025

Bahumukhi Shivamogga ಕಾರ್ನಾಡ್ ಕೆಲೈಡೋಸ್ಕೋಪ್” ಕೃತಿಯು ಅನೇಕ‌ ಒಳನೋಟಗಳನ್ನ ಒಳಗೊಂಡಿದೆ- ಟಿ.ಪಿ.ಅಶೋಕ

Date:

Bahumukhi Shivamogga ಹಿರಿಯ ಪತ್ರಕರ್ತ ಮುರಳೀಧರ ಖಜಾನೆಯವರ ಗಿರೀಶ್ ಕಾರ್ನಾಡ್ ಕೆಲೈಡೋಸ್ಕೋಪ್ ಕೃತಿಯ ಮೂಲಕ ಲೇಖಕರು ಗಿರೀಶ್ ಕಾರ್ನಾಡರ ಸಿನಿಮಾಗಳೊಂದಿಗೆ ಅನುಸಂಧಾನ ನಡೆಸಿದ್ದಾರೆ. ಹೀಗಾಗಿ ಈ ಕೃತಿ ಅನೇಕ ಒಳನೋಟಗಳನ್ನು ತೆರೆದಿಡುತ್ತದೆ ಎಂದು ಹೆಸರಾಂತ ವಿಮರ್ಶಕ ಟಿ. ಪಿ. ಅಶೋಕ ಹೇಳಿದರು.
ಶಿವಮೊಗ್ಗ ನಗರದ ಬಹುಮುಖಿ ಆಯೋಜನೆಯ 57 ಕಾರ್ಯಕ್ರಮವಾಗಿ ಹಿರಿಯ ಪತ್ರಕರ್ತ ಮುರಳೀಧರ ಖಜಾನೆಯವರ ಗಿರೀಶ್ ಕಾರ್ನಾಡ್ ಕೆಲೈಡೋಸ್ಕೋಪ್ ಕೃತಿಯ ಕುರಿತು ವಿಶ್ಲೇಷಣೆ ನಡೆಸಿದ ಅವರು, ಗಿರೀಶ್ ಕಾರ್ನಾಡರ ನಾಟಕಗಳ ಬಗ್ಗೆ ಅನೇಕ ಚರ್ಚೆಗಳು, ವಿಮರ್ಶೆಗಳು ನಡೆದಿವೆ. ಆದರೆ, ಅವರ ಸಿನಿಮಾಗಳ ಬಗ್ಗೆ ಚರ್ಚೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಹೀಗಾಗಿ ಈ ಕೃತಿ ಅವರ ಸಿನಿಮಾಗಳ ಒಳನೋಟವನ್ನು ತೆರೆದಿಡುತ್ತದೆ ಎಂದರು.
ಕಾರ್ನಾಡರ ಸಿನಿಮಾಗಳು ವರ್ತಮಾನದ ನೆಲೆಯಲ್ಲಿಯೇ ರೂಪುಗೊಂಡವು. ಆದರೆ, ಅವುಗಳನ್ನು ವಿಶ್ಲೇಸುವಾಗ ಕಾಲಾತೀತವಾಗಿಯೇ ನೋಡಬೇಕಾಗುತ್ತದೆ ಎಂದ ಅವರು, ಕಾರ್ನಾಡ್ ನಿರ್ದೇಶಿಸಿದ ಸಂಸ್ಕಾರ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ ಚಿತ್ರಗಳು ಬಹು ಚರ್ಚಿತವಾದವುಗಳು. ಈ ಸಿನಿಮಾಗಳ ಮೂಲಕ ಅವರು, ಹೊಸ ಅಲೆಯನ್ನು ಸೃಷ್ಟಿಸಿದವರು ಎಂದರು.
ರಾಷ್ಟç ಕವಿ ಕುವೆಂಪುರವರ ಕಾನೂರು ಹೆಗ್ಗಡತಿಯನ್ನು ತೆರೆಗೆ ತಂದಾಗ, ಸುದೀರ್ಘವಾದ ಕಾದಂಬರಿ ಹೇಗೆ ತೆರೆಗೆ ಅಳವಡಿಸರಬಹುದು ಎಂಬ ಕುತೂಹಲವಿತ್ತು. ಚಿತ್ರಕಥೆಯ ಹಂತದಲ್ಲಿ ಅದಕ್ಕೊಂದು ಹೊಸ ಚೌಕಟ್ಟನ್ನು ಗಿರೀಶ್ ಕಾರ್ನಾಡ್ ನೀಡಿದ್ದಾರೆ ಎಂದು ವಿವರಿಸಿದ ಅವರು, ಕಾರ್ನಾಡರ ಸಿನಿಮಾಗಳ ಚರ್ಚೆ ಪ್ರಸ್ತುತದ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದು ಎಂದರು.
ಕೃತಿಕಾರ ಮುರಳೀಧರ ಖಜಾನೆ ಮಾತನಾಡಿ, ಇಂದು ಸಿನಿಮಾಗಳ ವ್ಯಾಖ್ಯಾನ ಬದಲಾಗಿದೆ. ಯಾವುದೇ ತಂತ್ರಜ್ಞಾನ ಇಲ್ಲದ ಸಮಯದಲ್ಲಿ ಕಾರ್ನಾಡರು,ಒಂದಾನೊಂದು ಕಾಲದಲ್ಲಿ, ಉತ್ಸವ್‌ನಂತಹ ಮಹತ್ವದ ಚಿತ್ರಗಳನ್ನು ನೀಡುತ್ತಾರೆ. ಇದು ಅವರ ದೂರದೃಷ್ಟಿಯ ಸಂಕೇತ ಎಂದರು.
ಪುಸ್ತಕದ ಸಂಪಾದಕರಾದ ಹಿರಿಯ ರಂಗಕರ್ಮಿ, ಸಂಗೀತ ಶಾಸö ಜ್ಞ ಎಂ. ಕೆ. ಶಂಕರ್ ಮಾತನಾಡಿ, ವಾಸ್ತವವಾಗಿ ಈ ಕೃತಿಯನ್ನು ಸಂಪಾದಿಸುವ ಅಗತ್ಯ ಇರಲಿಲ್ಲ. ಆದರೆ, ಓದಗರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಈ ಕೆಲಸ ಮಾಡಬೇಕಾಯಿತು. ಸಿನಿಮಾಗಳಲ್ಲಿ ಸಂಕಲನ ಹೇಗೋ ಹಾಗೆಯೇ ಈ ಕೃತಿಯನ್ನು ಸಂಪಾದಿಸಲಾಗಿದೆ. ಹೀಗಾಗಿ ಈ ಕೃತಿಯನ್ನು ಓದಿದಾಗ, ಕಾರ್ನಾಡ ಸಿನಿಮಾಗಳು ತೆರೆದುಕೊಂಡ ಅನುಭವವಾಗುತ್ತದೆ ಎಂದರುದ
ಶಿವಮೊಗ್ಗ ಮೂಲದ ಮುರಳೀಧರ ಖಜಾನೆಯವರು ಸುಮಾರು ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ ಪ್ರಜಾವಾಣಿ, ಉದಯವಾಣಿ ಹಾಗೂ ದಿ ಹಿಂದೂ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒಡನಾಡುತ್ತಿರುವ ಅಪರೂಪದ ಪತ್ರಕರ್ತರು ಹಾಗೂ ಬರಹಗಾರರು ಎಂದು ಪರಿಚಯ ಮಾಡಿಕೊಟ್ಟ ಡಾ. ಹೆಚ್. ಎಸ್. ನಾಗಭೂಷಣ್, ಖಜಾನೆಯವರು ಶಿವಮೊಗ್ಗೆಯಲ್ಲಿ ಇದ್ದ ಸಂದರ್ಭದಲ್ಲಿ ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದು, ಅಭಿನಯ ತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಿನ್ನೆಲೆಯಲ್ಲಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಅನೇಕ ಜನಪರ ಹೋರಾಟಗಳಲ್ಲಿಯೂ ಕೂಡಾ ಭಾಗಿಯಾಗಿದ್ದಾರೆ ಎಂದರು.
Bahumukhi Shivamogga ಮುರಳಿರವರು, ರುಸ್ತುಂ ಬರುಚ ಇವರ ಕೊಶ್ವನ್ ಆಥ್ ( ನಂಬಿಕೆಯ ಪ್ರಶ್ನೆ) ಹಾಗೂ ಡಿ. ಮಂಡಲ್ ರವರ ಅಯೋಧ್ಯ ಆರ್ಕಾ್ಯಲಜಿಆಸ್ಟರ್ ಡೆಮಾಕ್ರೆಸಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ . ಅಲ್ಲದೆ ರ‍್ಯಾಂಡಮ್ ರಿ-ಕ್ಷನ್ಸ್ – ಎ ಕೆಲೈಡೋಸ್ಕೋಪಿಕ್ ಮ್ಯೂಸಿಂಗ್ಸ್ ಆನ್ ಕನ್ನಡ ಸಿನೆಮಾ ಹೆಸರಿನ ಇಂಗ್ಲಿಷ್ ಪುಸ್ತಕದ ನಂತರ ಈಗ ಕಾರ್ನಾಡ್ ಕೆಲೈಡೋಸ್ಕೊಪ್ ಇಂಗ್ಲೀಷ್ ಕೃತಿ ಪ್ರಕಟಿಸಿದ್ದಾರೆ. ಭಾರತೀಯ ಚಲನಚಿತ್ರದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಇವರು, ಜಿ. ವಿ. ಅಯ್ಯರ್, ಗರುದತ್, ಪ್ರಸಿದ್ಧ ಛಾಯಾಗ್ರಾಹಕ ವಿ. ಕೆ. ಮೂರ್ತಿ ಕುರಿತಾಗಿ ಕೃತಿಗಳನ್ನು ಸಧ್ಯದಲ್ಲಿಯೇ ಹೊರತರಲಿದ್ದಾರೆ. ಹಾಗೆಯೇ ಕನ್ನಡ ರಂಗಭೂಮಿಗೆ ಮಹತ್ವದ ನಾಟಕವೊಂದರ ರಚನೆಯಲ್ಲಿಯೂ ತೊಡಗಿದ್ದಾರೆ ಎಂದು ವಿವರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...