S.N.Chennabasappa 2022ರಲ್ಲಿ ದೇವಾಲಯಗಳಿಗೆ ಘೋಷಿಸಲಾದ ರೂ. 5 ಕೋಟಿ ಅನುದಾನದಲ್ಲಿ ಕೇವಲ 50% ಮಾತ್ರ ಬಿಡುಗಡೆಗೊಂಡಿದೆ. ಬದಲಾದ ಸರ್ಕಾರದ ಅವಧಿಯಲ್ಲಿ ಉಳಿದಿರುವ ಅನುದಾನದ ಬಗ್ಗೆ ಈಗ ಮನವಿ ಸಲ್ಲಿಸಿದರೆ “ಹಣವಿಲ್ಲ” ಎಂಬ ಉತ್ತರ ದೊರೆಯುತ್ತಿದೆ. ಇದು ಭಕ್ತರ ಧಾರ್ಮಿಕ ಭಾವನೆಗಳನ್ನು ನಿರ್ಲಕ್ಷಿಸುವಂತಿದೆ.
ಮುಜರಾಯಿ ಸಚಿವರು “ಮುಖ್ಯಮಂತ್ರಿಗಳ ಬಳಿ ಕೇಳಿ” ಎಂಬ ಅಸಹಾಯಕ ಉತ್ತರ ನೀಡಿರುವುದು ಆಡಳಿತದ ಅಸಮರ್ಥತೆಯನ್ನು ಸ್ಪಷ್ಟಪಡಿಸುತ್ತದೆ. ಸರ್ಕಾರ ಬದಲಾದರೂ ದೇವಾಲಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗೆ ನೀಡುವ ಬದ್ಧತೆ ಬದಲಾಗಬಾರದು.
S.N.Chennabasappa ದೇಗುಲಗಳು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲ, ಸಮಾಜದ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಕೇಂದ್ರಗಳಾಗಿವೆ. ಇವುಗಳಿಗೆ ಘೋಷಿಸಲಾದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಸರ್ಕಾರಕ್ಕೆ ಸದನದಲ್ಲಿ ಪ್ರಸ್ತಾಪಿಸಿದರು.
