Saturday, December 6, 2025
Saturday, December 6, 2025

Cosmo Club Shivamogga ಸಮಾಜದ ದಾರಿ ದೀಪ ಕೃಷ್ಣನ ಜೀವನವೇ ತೆರೆದ ಪುಸ್ತಕ- ಶ್ರೀರಂಜಿನಿ‌ ದತ್ತಾತ್ರಿ

Date:

Cosmo Club Shivamogga ಕೃಷ್ಣ ದೇವಗುಣ ಸಂಪನ್ನ ಮಾತ್ರವಲ್ಲ. ಕೃಷ್ಣ ಕೌಶಲ್ಯದಗಣಿ, ತತ್ವಜ್ಞಾನಿ, ಶ್ರೇಷ್ಠ ಯೋಧ, ಸಂಗೀತ, ನೃತ್ಯದ ಮಹಾ ಪಂಡಿತ, ಅದ್ಭುತ ರಾಜ ಕಾರಣಿ, ಅದ್ಭುತ ವಾಕ್‌ಚಾತುರ್ಯ ಹೊಂದಿದಾತ, ಆದರ್ಶ ನಡವಳಿಕೆಗಳ ಆಗರ, ಮಾನವೀಯ ಮೌಲ್ಯಗಳ ಹರಿಕಾರ, ಗುರಿ ಸಾಧಿಸುವವರೆಗೂ ಹಿಂದೆ ನೋಡದ ಶ್ರಮಜೀವಿ. ಕುಟುಂಬ-ಸಮಾಜ-ದೇಶ-ಧರ್ಮ ಒಂದಕ್ಕೊಂದು ಬೆಸೆದ ಬಂಧಗಳು. ಕುಟುಂಬವೇ ಧರ್ಮದ ತಳಹದಿ. ಅಧರ್ಮದ ಹಾದಿಯಲ್ಲಿ ನಡೆದ ಕುಟುಂಬ ನಿರ್ನಾಮ ಆಗುವುದರಲ್ಲಿ ಸಂಶಯವಿಲ್ಲ ಎಂದು ಸಾಕ್ಷೀಕರಿಸಿದವ ಕೃಷ್ಣ. ಹಾಗಾಗಿಯೇ ಅಧರ್ಮದ ಹಾದಿ ಹಿಡಿದಿದ್ದ ಕೌರವನ ಜೊತೆಯಿದ್ದ ಭೀಷ, ಕರ್ಣ, ದ್ರೋಣಾಚಾರ್ಯರನ್ನು ಇಲ್ಲವಾಗಿಸಿದ ಶ್ರೀಕೃಷ್ಣ. ರಣಯುದ್ಧದ ನಡುವೆಯೂ ಗೀತಾಜ್ಞಾನ ಬೋಧಿಸಿ ಪ್ರಪಂಚಕ್ಕೆ ಮನುಕುಲದ ಸಾರ ಸಾರಿದ ಶ್ರೀಕೃಷ್ಣ ಭವಿರ್ಷ ವರ್ತಮಾನ ಎರಡೂ ಮೌಲ್ಯಯುಕ್ತವಾಗಿರಬೇಕು. ಅದೇ ಸಮಾಜದ ದಾರಿದೀಪ ಎಂದು ತಿಳಿಸಿಕೊಟ್ಟ ಪರಮಾತ್ಮ ಶ್ರೀಕೃಷ್ಣ. ಕೃಷ್ಣನ ಜೀವನವೇಒಂದು ಪ್ರಯೋಗಶಾಲೆ. ಧರ್ಮ, ಕರ್ತವ್ಯ, ಕುಠಿಲತೆ, ಸ್ನೇಹ, ಸಮಾಜ, ರಾಷ್ಟ್ರ, ಸ್ಥಿತಿಸ್ಥಾಪಕ ಸಿದ್ದಾಂತ ಎಲ್ಲವನ್ನು ಸಾಕ್ಷೀಕರಿಸಿದ ಕೃಷ್ಣನ ಬದುಕು ಒಂದು ತೆರೆದ ಹಾಳೆಯಂತೆ ಎಂದು ಶ್ರೀರಂಜಿನಿ ದತ್ತಾತ್ರಿ, ಮಿತ್ರೆ ಕಾಸ್ಮೋ ಕ್ಲಬ್‌ ಮಹಿಳಾ ಬಳಗದ ಅಧ್ಯಕ್ಷೆ ನುಡಿದರು.

ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕಾಸ್ಮೋಕ್ಲಬ್ ಶುಭಾಂಗಣದಲ್ಲಿ ಮಿತ್ರೆ ಕಾಸ್ಮೋ ಕ್ಲಬ್‌ ಮಹಿಳಾ ಬಳಗ, ಇನ್ನರ್‌ವ್ಹೀಲ್‌ಕ್ಲಬ್‌ಶಿವಮೊಗ್ಗ, ಮನ್ವಂತರ ಮಹಿಳಾ ಮಂಡಳ ಇದರ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡಿದ್ದ“ಕೃಷ್ಣಾ ರಾಧೆರಾಗರಸ ಸಂಭ್ರಮ” ದಲ್ಲಿ ಪ್ರೀತಿಯಿಂದ ಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನಾಡಿದ ಶ್ರೀರಂಜಿನಿ ದತ್ತಾತ್ರಿಯವರು ಶುದ್ಧತೆಯ ಸಂಕೇತವೇ ರಾಧೆ. ಸ್ನೇಹ, ಪ್ರೀತಿ, ಭಕ್ತಿ, ನಂಬಿಕೆ, ಶ್ರದ್ಧೆ, ದೃಢತೆ, ಸಂಕಲ್ಪ ಈ ಎಲ್ಲಕ್ಕೂರಾಧೆ ನೆನಪಾಗುತ್ತಾಳೆ.ರಾಧೆ ಕೃಷ್ಣನ ಗೋಕುಲ ನಿರ್ಗಮನದ ನಂತರ ಎದುರಾದ ಯಾವ ಕಷ್ಟಗಳಿಗೂ ಬೆನ್ನು ಹಾಕದೆ ಘನತೆ ಕಾಪಿಟ್ಟಳು. ಒಂಟಿ ಹೆಣ್ಣು ಬದುಕಬಲ್ಲೆ ಎಂದು ಜಗತ್ತಿಗೆ ತೋರಿದಳು. ರಾಧಾ ಕೃಷ್ಣ ಒಂದೇಆತ್ಮ, ಎರಡುದೇಹ. ತನ್ನ ಆತ್ಮದ ಜೊತೆ ಮದುವೆಯೇ ಎಂದೇ ಕೃಷ್ಣ ರಾಧೆಯೊಂದಿಗೆ ಮದುವೆ ಆಗಲಿಲ್ಲ ಎಂಬುದು ಪುರಾಣ ಪ್ರಸಿದ್ದ ಎಂಬ ಹಲವು ವಿಚಾರಗಳನ್ನು ಶ್ರೀರಂಜಿನಿ ದತ್ತಾತ್ರಿ ಮಾತನಾಡಿದರು.

ಉಭಯ ಭಾರತೀ ತಂಡದ ನಾಯಕಿ ಲತಾ ಶಂಕರ್‌ರವರು ಶ್ರೇಷ್ಠತೆ ಮೆರೆದ ಶ್ರೀಕೃಷ್ಣ ಜನಿಸಿದ್ದು ಮಥುರಾ, ಬೆಳೆದಿದ್ದು ಗೋಕುಲ, ರಾಜನಾಗಿದ್ದು ದ್ವಾರಕೆಯಲ್ಲಿ.ಈ ನಡುವೆರಾಧೆಯ ಪ್ರೀತಿಯ ಅನನ್ಯತೆಯಲ್ಲಿ ಜಗತ್ತಿಗೆ ಸಂದೇಶ ನೀಡಿದ. ಸಾವಿರಾರು ಹೆಸರುಗಳಿಂದ ಕರೆಯಲ್ಪಡುವ ಶ್ರೀಕೃಷ್ಣ ಎಂದಿಗೂ ಜಗತ್ತಿಗೆ ಮಾರ್ಗದರ್ಶಕ ಅಂತೆಯೇ ನಮ್ಮಂತಹ ಮಹಿಳಾ ಸಂಘಗಳು ಸಮಾಜಕ್ಕೆ ಸದಾ ಆದರ್ಶವಾಗಿದ್ದು ಬದ್ಧತೆಯನ್ನು ಕಟ್ಟಿಕೊಡೋಣ ಎಂದರು.

ಇನ್ನರ್ ವ್ಹೀಲ್‌ ಅಧ್ಯಕ್ಷೆ ಲತಾ ರಮೇಶ್‌ರವರು ಹಿಂದುಗಳ ಆರಾಧ್ಯ ದೈವ ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಭೂದೇವಿಯ ಕೋರಿಕೆಯ ಮೇರೆಗೆ ಅವತರಿಸಿದ. ಕಾರಣ ರಾಕ್ಷಸ ತತ್ವದ ಗುಣದ ಅಟ್ಟಹಾಸದಲ್ಲಿ ಭೂಮಿ ನಲುಗಿ ಹೋಗಿತ್ತು. ಕಂಸನೂ ಸೇರಿದಂತೆ ಪೂತನಾ, ಖಗಾಸುರ, ಶಕಟಾಸುರ, ಕೃಣಾವರ್ತ, ವತ್ಸಾಸುರ, ಬಕಾಸುರ, ಅಘಾಸುರ, ನರಕಾಸುರ, ಹೀಗೆ ನೂರಾರು ಅಸುರರು ಅಟ್ಟಹಾಸ ಮೆರೆಯುತ್ತಿದ್ದರು.ಆ ದುಷ್ಟರನ್ನು ಸಧೆ ಬಡಿಯಲೆಂದೇ ಕೃಷ್ಣ ಭೂಮಿಗೆ ಅವತರಿಸಿದ. ಜೊತೆಗೆ ರಾಧೆಯ ತತ್ವ ಸಾರಿದ ಎಂದರು.

Cosmo Club Shivamogga ಮನ್ವಂತರದ ಕಾರ್ಯದರ್ಶಿ ಆಶಾ ಪ್ರಕಾಶ್ ಮೂರು ಗಂಟೆಗಳ ಕಾರ್ಯಕ್ರಮವಿದು. ಆದರೆ ಮೂವತ್ತು ದಿನಗಳ ಯೋಜನೆ ಸರಿಯಾಗಿರಬೇಕು ಅದನ್ನೆಲ್ಲ ಯೋಜಿಸಿ, ಜೋಡಿಸಿ, ರಾಧಾಕೃಷ್ಣರ ಆರಾಧನೆಯೊಂದಿಗೆ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಹಾಡು, ನೃತ್ಯ ಕಲಿಸಿ ಪ್ರಸ್ತುತ ಪಡಿಸಲು ಸಹಕಾರಿಯಾದ ಮಿತ್ರೆ ಕಾಸ್ಮೋ ಕ್ಲಬ್‌ಮಹಿಳಾ ಬಳಗಕ್ಕೆ ಶುಭಕೋರಿದರು.

ವೇದಿಕೆಯಲ್ಲಿ ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ಶ್ರೀರಂಜಿನಿ ದತ್ತಾತ್ರಿ, ದೀಪಾ ಶ್ರೀನಿವಾಸ್, ವೀಣಾಹರ್ಷ, ಸುನಿತಾ ಅರುಣ್, ಹೇಮಾ ಸತೀಶ್. ಇನ್ನರ್‌ವ್ಹೀಲ್‌ನ ಲತಾ ರಮೇಶ್, ಶೃತಿ ರಾಕೇಶ್, ಸುಧಾ ಹೆಗಡೆ, ಮನ್ವಂತರದ ಆಶಾಪ್ರಕಾಶ್, ಸವಿತಾ ವೆಂಕಟೇಶ್, ಉಭಯ ಭಾರತೀತಂಡದ ಲತಾ ಶಂಕರ್, ಸದಸ್ಯರಾದ ನಿಖಿಲಾ, ಸುಧಾ ಬೆನಕಪ್ಪ, ಲಲಿತಾರವೀಶ್, ನಳಿನಿ ಐತಾಳ್, ಸೌಮ್ಯ ಶಿವಕುಮಾರ್, ದೀಪಾ ಮಂಜುನಾಥ್, ಸುಲಕ್ಷಣಾ ಶಿವಪ್ರಕಾಶ್, ಕಾವೇರಿ ಉಪಸ್ಥಿತಿ ಇದ್ದರು.

ನಿಖಿಲಾ ನಿರೂಪಿಸಿ, ಸುನಿತಾ ಅರುಣ್ ಪ್ರಾರ್ಥಿಸಿ, ಲತಾ ಶಂಕರ್‌ ಸ್ವಾಗತಿಸಿ, ಶ್ರೀರಂಜಿನಿ ದತ್ತಾತ್ರಿ ರಾಧಾಕೃಷ್ಣರ ಮಹತ್ವ ತಿಳಿಸಿ, ಸುಧಾ ಬೆನಕಪ್ಪ ಉಭಯ ಭಾರತಿ ತತ್ವಜ್ಞಾನಿಯ ಬಗ್ಗೆ ಪರಿಚಯ ನೀಡಿ, ಲಲಿತಾ ರವೀಶ್ ವಂದಿಸಿದರು. ಮೂರು ಸಂಸ್ಥೆಗಳು ರಾಧಾಕೃಷ್ಣರ ಭಜನೆ, ಹಾಡು, ನೃತ್ಯವನ್ನು ಸುಂದರವಾಗಿ ಪ್ರಸ್ತುತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...