Sri Adichunchanagiri Education Trust ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ,ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 23ನೇ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿಯಲ್ಲಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಪ್ರತೀಕ್ಷ ಅಗ್ನೇಶ್ ಮೈಕಲ್ ಅವರು ಭಾಗವಹಿಸಿ ಅತ್ಯಾಕರ್ಷಕ ಆಟದ ಪ್ರದರ್ಶನ ನೀಡಿ,ಮತ್ತು ಬೆಸ್ಟ್ ಡಿಫೆನ್ಸ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾಳೆ. ಉತ್ತಮ ಆಟದ ಪ್ರದರ್ಶನ ನೀಡಿ ಪ್ರಥಮಸ್ಥಾನ ಪಡೆಯುವ ಮೂಲಕ ಚುಂಚಾದ್ರಿ ಕಪ್ ಟ್ರೋಫಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾಳೆ.
Sri Adichunchanagiri Education Trust ನೆರೆದ ಸಾವಿರಾರು ಜನರ ಗಮನ ಸೆಳೆದ ಈ ಪ್ರತಿಭೆಯು ವಾಲಿಬಾಲ್ ಅಷ್ಟೇ ಅಲ್ಲದೇ ಅಥ್ಲೆಟಿಕ್ಸ್ ವಿಭಾಗದಲ್ಲಿ ರಿಲೇ ಮತ್ತು 200ಮೀಟರ್ ನಲ್ಲೂ ಪ್ರತಿಭಾನ್ವಿತ ಕ್ರೀಡಾಪಟು ಆಗಿರುತ್ತಾಳೆ.
ಪ್ರತೀಕ್ಷ ಇವರು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಮೈಕಲ್ ಕಿರಣ್ ಹಾಗೂ ಶಿಕ್ಷಕಿಯಾದ ಸಪ್ನಾ ರೈಚಲ್ ದಂಪತಿಗಳ ಪುತ್ರಿಯಾಗಿರುತ್ತಾಳೆ.
ಈ ಕ್ರೀಡಾಪಟುವಿನ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ.ತಿಮ್ಮೇನಹಳ್ಳಿ ಹಾಗೂ ಸಂಘದ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
Sri Adichunchanagiri Education Trust ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯದಲ್ಲಿ ,” ಬೆಸ್ಟ್ ಡಿಫೆನ್ಸ್ ಪ್ಲೇಯರ್” ಆಗಿ ಮಿಂಚಿದ ಪ್ರತೀಕ್ಷಾ ಆಗ್ನೇಶ್ ಮೈಕಲ್
Date:
