G M University ಭಾರತದ ಆರ್ಥಿಕ ಶಕ್ತಿಯು 4.39 ಟ್ರಿಲಿಯನ್ ಡಾಲರ್ ಗಳಾಗಿದ್ದು ಇದು ಉದ್ಯಮಗಳ ಸ್ಥಾಪನೆಗೂ ಉತ್ತೇಜಕವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಅಭಿಪ್ರಾಯಪಟ್ಟರು. ಅವರಿಂದು ಜಿ ಎಂ ವಿಶ್ವವಿದ್ಯಾನಿಲಯದ ವಾಣಿಜ್ಯ, ಕಾಯಿದೆ ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನೂತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಯು ಅಮೆರಿಕ ಚೈನಾ ಮತ್ತು ಜರ್ಮನಿಗಿಂತಲೂ ಅಧಿಕವಾಗಿದ್ದು ದೇಶದಲ್ಲಿ ಹೂಡಿಕೆಗೂ, ಹೊಸ ಉದ್ಯಮಗಳ ಸ್ಥಾಪನೆಗೂ, ಮಾರುಕಟ್ಟೆಗೂ ಅನುಕೂಲಕರವಾಗಿದೆ. G M University ಈ ಸಂದರ್ಭವನ್ನು ಅಲಕ್ಷಿಸದೆ ಬಳಸಿಕೊಂಡು ಪದವೀಧರರುಗಳು ಅತಿ ಸಣ್ಣ, ಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ದಿಮೆಗಳನ್ನು ಆರಂಭಿಸುವತ್ತ ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ಆಸಕ್ತಿ ವಹಿಸಿ ಪೂರಕವಾದ ಯೋಚನೆ ಮತ್ತು ಯೋಜನೆಗಳನ್ನು ತಲೆಯಲ್ಲಿ ರೂಪಿಸಿಕೊಳ್ಳುತ್ತಿರಬೇಕು, ಸರ್ಕಾರದ ಅನೇಕ ಯೋಜನೆಗಳು ಉದ್ಯಮಶೀಲತೆಗೆ ಪ್ರೋತ್ಸಾಹದಾಯಕವಾಗಿದ್ದು ಅಂತರ್ಜಾಲದಲ್ಲಿ ಇವುಗಳ ಮಾಹಿತಿಯನ್ನು ಪಡೆದು ಈಗಿಂದಲೇ ಉದ್ದಿಮೆಗಳ ಬಗ್ಗೆ ಆಲೋಚಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು. ನವೀಕರಿಸಬಲ್ಲ ಇಂಧನ, ಪ್ರವಾಸೋದ್ಯಮ, ಕ್ವಾಂಟಮ್ ಕಂಪ್ಯೂಟರ್, ಸಾಮಾಜಿಕ ಆರೋಗ್ಯ, ಆಹಾರ ಸಂಸ್ಕರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಉದ್ದಿಮೆಗಳನ್ನು ಮಾಡಲು ಅವಕಾಶಗಳಿವೆ ಎಂದರು. ಪ್ರಾಚಾರ್ಯ ಡಾ ಗಂಗಾಧರ ಜಿ ಹೂಗಾರ್, ಅಧ್ಯಾಪಕರುಗಳಾದ ಡಾ ಶ್ವೇತಾ ಹೆಚ್ ಎಸ್, ಹರೀಶ್, ರಮೀಜ್ ರಾಜ, ಅನುರೂಪಾ, ವಿದ್ಯಾಧರ್, ನಾಗರಾಜ್, ಸಂಗೀತಾ, ಸ್ಟೈ ಸಿ, ಮುಕ್ತಿ ಮುಂತಾದವರು ಉಪಸ್ಥಿತರಿದ್ದರು.
G M University ದೇಶದಲ್ಲಿನ ಆರ್ಥಿಕತೆಯು ಉದ್ಯಮಶೀಲತೆಗೆ ಉತ್ತೇಜಕವಾಗಿದೆ- ಡಾ.ಎಚ್.ಬಿ.ಮಂಜುನಾಥ್
Date:
