The Institute of Indian Foundrymen Shivamogga ಮಕ್ಕಳ ಸರಿಯಾದ ಪೋಷಣೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರ ಪಾತ್ರ ಮಹತ್ತರ ಎಂದು ಸುಬ್ಬಯ್ಯ ಮೆಡಿಕಲ್ ಕಾಲೇಜು ಮಾನಸಿಕ ವೈದ್ಯಕೀಯ ವಿಭಾಗ ಪ್ರೊಫೆಸರ್ ಹಾಗೂ ಮುಖ್ಯಸ್ಥ ಡಾ. ಹರೀಶ್ ಡೆಲಂತಬೆಟ್ಟು ಹೇಳಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ವತಿಯಿಂದ ಏರ್ಪಡಿಸಿದ್ದ 76ನೇ ರಾಷ್ಟ್ರೀಯ ಫೌಂಡ್ರಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ನೈಟೆಕ್ ಫೆರೋಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್ ನ ಹಿರಿಯ ಫೌಂಡ್ರಿಮೆನ್ ಮಹೇಶಪ್ಪ, ಅತ್ಯುತ್ತಮ ಕಾರ್ಮಿಕರಾಗಿ ಪ್ರಿಸಿಶನ್ ಕಾಸ್ಟಿಂಗ್ಸ್ ನ ಮುಡ್ಲಿಗಿರಿ ಶಿವಮೊಗ್ಗ ಹಾಗೂ ಅತ್ಯುತ್ತಮ ಕುಶಲ್ ಕಾರ್ಮಿಕರಾಗಿ ಪ್ರಗತಿ ಸ್ಟೀಲ್ ಕಾಸ್ಟಿಂಗ್ಸ್ ರುದ್ರೇಶ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಟಲ್ ಬ್ಯಾಡ್ಮಿಂಟನ್ ಮತ್ತು ಕ್ವಿಜ್ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
The Institute of Indian Foundrymen Shivamogga ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ಖಜಾಂಚಿ ಅರುಣ್ ಎಂ ಎಸ್ ಅವರು ರಾಷ್ಟ್ರೀಯ ಫೌಂಡ್ರಿ ದಿನದ ಕುರಿತು ಮಾಹಿತಿ ನೀಡಿದರು. ರಾಗ ರಂಜನಿ ಟ್ರಸ್ಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿತು.
ದಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್ ಶಿವಮೊಗ್ಗ ಚಾಪ್ಟರ್ ಅಧ್ಯಕ್ಷ ಎಂ.ವಿ.ರಾಘವೇAದ್ರ ಸ್ವಾಗತಿಸಿದರು. ಚೇತನ ಸಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಸಮೃದ್ಧಿ ಜೈನ್ ಮತ್ತು ಸನ್ನಿಧಿ ಜೈನ್ ಪ್ರಾರ್ಥನಾ ಗೀತೆ ಹಾಡಿದರು. ಗೌರವ ಕಾರ್ಯದರ್ಶಿ ಮಹಾವೀರ ಜೈನ್ ವಂದನಾರ್ಪಣೆ ನಡೆಸಿಕೊಟ್ಟರು.ಧನ್ಯವಾದಗಳನ್ನು ಅರ್ಪಿಸಿದರು.
ಫೌಂಡ್ರಿ ಉದ್ಯಮದ ಅನೇಕ ಗಣ್ಯರಾದ ಶ್ರೀನಾಥ್ ಗಿರಿಮಾಜಿ, ದಾಮೋದರ್ ಬಾಳಿಗ, ಶಶಿಧರ್ ಭೂಪಾಳಂ, ಡಿ ಎಸ್ ಚಂದ್ರಶೇಖರ್, ಪರಮಶೇಖರ್, ಬೆನಕಪ್ಪ ಡಿ ಜಿ, ಸದಸ್ಯರಾದ ಇಲಂಗೋನ್ ನಂಜುಂಡೇಶ್ವರ, ಶಾಂತಿಕಿರಣ್, ಜಗದೀಶ್ವರಪ್ಪ, ನವೀನ್, ಚೇತನ್ ಮತ್ತಿತರರು ಪಾಲ್ಗೊಂಡಿದ್ದರು.
The Institute of Indian Foundrymen Shivamogga ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಸಾಧನೆಗೈಯಲು ಪೋಷಕರು ಪ್ರೋತ್ಸಾಹಿಸಬೇಕು- ಡಾ.ಹರೀಶ್ ದೇಲಂತಬೆಟ್ಟು
Date:
