Rotary Organization ಮಾನವ ಸ್ನೇಹ ಜೀವಿ, ಇದರ ಅನುಭವ ಪಡೆಯಲು ರೋಟರಿ ಸಂಸ್ಥೆ ಸೇರಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡಾಗ ಜೀವನದಲ್ಲಿ ಸಾರ್ಥಕತೆ ಹೊಂದಲು ಸಾದ್ಯವಾಗುತ್ತದೆ ಎಂದು ರೋಟರಿ ಜ್ಯೂಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಅಸಿಸ್ಟೆಂಟ್ ಗೌರ್ನರ್ ಡಾ.ಗುಡದಪ್ಪಕಸಬಿ ಮಾತನಾಡುತ್ತಿದ್ದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಿಸ್ವಾರ್ಥ ಸೇವೆಯಲ್ಲಿ ರೋಟರಿ ಮುಂಚೋಣಿಯಲ್ಲಿದೆ. ಪ್ರತಿಯೊಬ್ಬ ಸದಸ್ಯರು ತಮ್ಮ ದುಡಿಮೆಯ ಒಂದು ಪಾಲು ಸೇವೆಗಾಗಿ ಮುಡುಪಿಟ್ಟು, ದೇಣಿಗೆ ನೀಡಿ, ಅವಶ್ಯಕತೆ ಇರುವವರಿಗೆ ಅನುಕೂಲ ಮಾಡಿಕೊಟ್ಟು ಸಂತೋಷ ಹೊಂದುತ್ತಾರೆ. ಜೀವನದಲ್ಲಿ ಅತೀ ಹೆಚ್ಚು ಸಂತೋಷ ದೊರಕುವುದು, ಸಹಾಯ ಪಡೆದವರು ಹರಸಿದಾಗ
ಯಾರು ಯಾವ ಸಮಯದಲ್ಲಿ ಏನನ್ನು ಮಾಡುತ್ತಾರೆ ಗೊತ್ತಾಗೊಲ್ಲ, ವಜ್ರ ತಯಾರಕರಿಬ್ಬರು, ರಾಷ್ಟ್ರಾದ್ಯಂತ ರೈಲ್ವೇಹಳಿ ಕುಲಷಿತ ಗೊಳ್ಳುವುದನ್ನು ತಪ್ಪಿಸಲು ಬಯೋ ಟಾಯ್ಲೆಟ್ ಕಂಡುಹಿಡಿದರು, ಇದರಿಂದ ಸ್ವಚ್ಛ ಭಾರತಕ್ಕೆ ನಂದಿಯಾಯಿತು. ಕೆಲವರು ಜೀವನ ಸುಂದರ ಎನ್ನುತ್ತಾರೆ, ನಾವು ಕಲ್ಪಿಸಿ ಕೊಂಡಂತೆ ಇರುತ್ತದೆ.
ಸರ್ಕಾರ ದೃಷ್ಠಿ ದೋಷ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತ್ತೊಟ್ಟಿದ್ದು, 5.5ಕೊಟಿ ವೆಚ್ಛದ ಕಾರ್ಯಕ್ರಮ, ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ. ಹಲವರಿಗೆ ದೃಷ್ಟಿ ದೊಷ ಇರುವುದರಿಂದ, ಕನ್ನಡಕದ ಅವಶ್ಯಕತೆ ಇರುತ್ತದೆ, ತಮ್ಮ ಕ್ಲಬ್ ವತಿಯಿಂದ ಸರ್ಕಾರದ ಕಾರ್ಯಕ್ರಮ ಆಯೋಜಿಸಿದಲ್ಲಿಗೆ ಬಂದು ಅಗತ್ಯತೆ ಇರುವವರಿಗೆ, ಸ್ಥಳದಲ್ಲೆ ದೊರಕುವ ಕನ್ನಡಕವನ್ನು ವಯೋವೃದ್ದ ಬಡವರಿಗೆ ಕೊಡಸಿದರೆ ಅವರಿಂದ ದೊರಕುವ ಆಶಿರ್ವಾದ ಅವರ್ಣನಿಯ ಅನುಭವ ನೀಡುತ್ತದೆ ಎಂದರು.
Rotary Organization ಅಧ್ಯಕ್ಷತೆಯನ್ನು ರೊ.ಬಿ.ಎಸ್.ಅಶ್ವಥ್ ವಹಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಕಾರ್ಯದರ್ಶಿ ರೊ.ರೇವಣಸಿದ್ದಪ್ಪ ವಂದಿಸಿದರು, ನವೀನ್, ಭಾರದ್ವಾಜ್, ಸತ್ಯನಾರಾಯಣ್, ನಾಗರಾಜ್ ಉಮಾದೇವಿ, ಉಮೇಶ್, ಜವಳಿ, ವೆಂಕಟರಮಣಭಟ್ ಇತರ ಸದಸ್ಯರು ಭಾಗವಹಿಸಿದ್ದರು.
Rotary Organization ಜೀವನದಲ್ಲಿ ಹೆಚ್ಚು ಸಂತೋಷ ದೊರಕುವುದು, ಸಹಾಯ ಪಡೆದವರು ಹರಸಿದಾಗ- ಡಾ.ಗುಡದಪ್ಪ ಕಸಬಿ
Date:
