Saturday, December 6, 2025
Saturday, December 6, 2025

Chamber of commerce ದೇಶ ಭಕ್ತಿಗೀತೆಗಳು ನಮ್ಮ ಸಂಸ್ಕೃತಿಯ ಮಹತ್ವ ಮತ್ತು ಅರಿವು ಮೂಡಿಸುತ್ತವೆ – ಎನ್. ಗೋಪಿನಾಥ್

Date:

Chamber of commerce Shivamogga ದೇಶಭಕ್ತಿ ಗೀತೆಗಳು ನಮ್ಮ ಸಂಸ್ಕೃತಿಯ ಮಹತ್ವ ಅರಿವು ಮೂಡಿಸುವ ಜತೆಯಲ್ಲಿ ರಾಷ್ಟ್ರ ಭಕ್ತಿ ಜಾಗೃತಗೊಳಿಸುತ್ತದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಗೌರವಾಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಎಸ್ ಆರ್ ಕೆ ಕರೋಕೆ ತಂಡ ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ದೇಶಭಕ್ತಿ ಗೀತೆಗಳ ನಾಡು ನುಡಿ ಬಿಂಬಿಸುವ ಗಾಯನ ಸ್ಪರ್ಧೆ ಹಾಗೂ ರಾಷ್ಟ್ರಭಕ್ತರ ವೇಷಭೂಷಣ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಸ್ವಾತಂತ್ರ್ಯೋತ್ಸವವನ್ನು ಹಲವರು ಹಲವು ವಿಧದಲ್ಲಿ ಆಚರಿಸುತ್ತಾರೆ. ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ. ಇದೊಂದು ಒಳ್ಳೆಯ ಪರಿಪಾಠ ತೋರಿಸುತ್ತವೆ ಎಂದು ತಿಳಿಸಿದರು.
ರೋಟರಿಯ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ಭಾರತ ಇಂದು ಜಗತ್ತಿನ ಮೂರನೆಯ ಆರ್ಥಿಕತೆಯಾಗುವತ್ತ ಸಾಗುತ್ತಿದೆ. ದೇಶಭಕ್ತಿಯ ಭಾವನೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಈ ರೀತಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದು ದೇಶಭಕ್ತಿ ಮೂಡಿಸುವ ಕಾರ್ಯ ಮಾಡುತ್ತದೆ ಎಂದು ನುಡಿದರು.
Chamber of commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ನಿರ್ದೇಶಕಿ ಡಾ. ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ಮಾತನಾಡಿ, ಸಂಗೀತ ಭಾವಗಳ ಅಭಿವ್ಯಕ್ತಿಯ ಮಾಧ್ಯಮ. ಎಲ್ಲಾ ಭಾವಗಳನ್ನು ಹೃದಯಗಳಿಗೆ ಮುಟ್ಟಿಸುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಖಜಾಂಚಿ ಜಿ ವಿಜಯಕುಮಾರ್ ಮಾತನಾಡಿ, ಸಂಗೀತ ನಮ್ಮ ಭಾವನೆಗಳನ್ನು ಹಾಗೂ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ. ಇಂತಹ ಕಾರ್ಯಕ್ರಮಗಳಿಂದ ಜೀವನೋತ್ಸಾಹ ಮತ್ತು ದೇಶಭಕ್ತಿ ಹೆಚ್ಚುತ್ತದೆ. ಆಗಾಗ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಧ್ವನಿ ಸಂಸ್ಕರಣವಾಗುತ್ತದೆ ಮತ್ತು ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಮಥುರಾ ನಾಗರಾಜ ಅವರು ತಮ್ಮ ಸಾರಥ್ಯದಲ್ಲಿ ಹಲವಾರು ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವುದರ ಮುಖಾಂತರ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುತ್ತಾರೆ ಎಂದರು.
ಮಥುರಾ ನಾಗರಾಜ್, ಯೇಸುದಾಸ್, ಕೇಶವಸ್ವಾಮಿ, ರೇಖಾ ಸತೀಶ್, ರೂಪಾ, ಎಸ್ ಎಸ್ ಕರೋಕೆ ತಂಡದ ಪದಾಧಿಕಾರಿಗಳು ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 50ಕ್ಕೂ ಹೆಚ್ಚು ಕಲಾವಿದರು ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...