Haranahalli Government Higher Primary School ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು 79ನೇ ಸ್ವತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸುವುದರ ಮೂಲಕ “ಇಂಗ್ಲಿಷ್ ಮಾಧ್ಯಮ” ಶಾಲೆಯ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಷಣ್ಮುಖಪ್ಪ ಮತ್ತು ಸದಸ್ಯರಾದ ಸುಕನ್ಯಾ, ಜೈಶೀಲ, ಶಾಲೆಯ ಹಳೆಯ ವಿದ್ಯಾರ್ಥಿ ಚೇತನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ರೂಪಾಲೇಖನ, ಸಹ ಶಿಕ್ಷಕರಾದ ಕುಸುಮ ದೊಡ್ಡಮನಿ, ಎಸ್. ವಿ. ವೀಣಾರಾಣಿ, ದೀಪಾ ಮಾಳಗಿ, ಅನಿತಾ, ಗೋಪಿನಾಥ್, ಪೋಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಅಡಿಗೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
