Independence Day ಸುಸಜ್ಜಿತವಾದ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಸೈಲ್-ವಿಐಎಸ್‌ಎಲ್‌ವತಿಯಿಂದ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೈಭವದಿಂದ ಆಚರಿಸಲಾಯಿತು. ಸೈಲ್-ವಿಐಎಸ್‌ಎಲ್‌ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್.ಚಂದ್ವಾನಿ ಮುಖ್ಯ ಅತಿಥಿಯಾಗಿದ್ದರು, ಮುಖ್ಯ ಅತಿಥಿಯನ್ನು ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಅವರು ಬರಮಾಡಿಕೊಂಡರು. ಮುಖ್ಯ ಅತಿಥಿಗಳು ತ್ರಿವರ್ಣ ಧ್ವಜವನ್ನು ಹಾರಿಸಿದರು. ವಿಐಎಸ್‌ಎಲ್ ಸೆಕ್ಯುರಿಟಿ, ಸರ್.ಎಮ್.ವಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್.ಸಿ.ಸಿ ಪೈಲೆಟ್ಸ್, ಭದ್ರಾವತಿಯ ವಿವಿಧ ಪ್ರೌಢಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಂದ ಪಥಸಂಚಲನ, ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ಕಾರ್ಯಕ್ರಮಗಳು ನಡೆದವು.
ಶ್ರೀ ಬಿ.ಎಲ್. ಚಂದ್ವಾನಿರವರು ಕವಾಯತ್ತನ್ನು ವೀಕ್ಷಿಸಿ, ಪಥಸಂಚಲನ ತಂಡಗಳಿAದ ಗೌರವ ವಂದನೆ ಸ್ವೀಕರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
೭೯ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಐಎಸ್‌ಎಲ್ ಸಮುದಾಯದ ಸಾಧಕರಾದ ಶ್ರೀ ಜತಿನ್.ಕೆ, ಕು. ಸಾನಿಕಾ ದೇವಾಂಗ ಮಠ್, ಶ್ರೀ ಪ್ರತೀಕ್ ಬಡಿಗೇರ್, ೨೦೨೪-೨೫ ರಲ್ಲಿ ಕರ್ನಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದ್ವಿತೀಯ, ಚತುರ್ಥ ಹಾಗೂ ೬ನೇ ರ‍್ಯಾಂಕ್ ಪಡೆದವಾಗಿದ್ದು ಅವರಿಗೆ ಸನ್ಮಾನಿಸಲಾಯಿತು.
ವಿಐಎಸ್.ಎಲ್ ಉದ್ಯೋಗಿಗಳಾದ ಶ್ರೀ ಸೀತಾರಾಮ್, ೨೦೨೪ ದಸರಾ ಸಿ.ಎಂ. ಕಪ್ ಬಾಲ್ ಬ್ಯಾಂಡ್ಮಿAಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ, ಶ್ರೀ ಎಮ್.ಎಸ್.ಕುಮಾರ್, ಉಪ ಮಹಾಪ್ರಬಂಧಕರು (ಚಾಲನೆ), ಶ್ರೀ ಎಮ್. ಕೃಷ್ಣ, ಉಪಪ್ರಬಂಧಕರು (ಮಿಲ್ಸ್ ಮತ್ತು ಆರ್.ಟಿ.ಎಸ್) ಇವರ ಸಕ್ಷಮ್ ಬ್ಯುಸಿನೆಸ್ ಕ್ವಿಜ್ ಸಾಧನೆಗಾಗಿ, ಹಾಗೂ ಶ್ರೀ ನಾಗೇಶ್ ಹಾಗೂ ಶ್ರೀ ಪ್ರವೇಶ್ ಝಾ, ಇವರ ಸಮರ್ಥ್ ಬ್ಯುಸಿನೆಸ್ ಕ್ವಿಜ್ ಸಾಧನೆಗಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳು ಮತ್ತು ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಹಾಗೂ ಗೌರವಾನ್ವಿತ ಅತಿಥಿಗಳು, ವಿಐಎಸ್‌ಎಲ್ ಸೆಕ್ಯುರಿಟಿ, ಎನ್.ಸಿ.ಸಿ, ಸ್ಕೌಟ್ಸ್, ಹಿರಿಯ ಅಧಿಕಾರಿಗಳು, ವಿಐಎಸ್‌ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳೊಂದಿಗೆ ಕುಶಲೋಪರಿ ವಿಚಾರಿಸಿದರು.
Independence Day ಕಾರ್ಯಕ್ರಮವನ್ನು ಶ್ರೀಮತಿ ಕೆ.ಎಸ್. ಶೋಭ, ಉಪ ಪ್ರಬಂಧಕರು (ಹೆಚ್.ಆರ್) ಮತ್ತು ಶ್ರೀ ಎಮ್.ಎಲ್. ಯೋಗೇಶ್, ಕಿರಿಯ ಪ್ರಬಂಧಕರು (ಹೆಚ್.ಆರ್ – ಎಲ್ & ಡಿ) ನಿರೂಪಿಸಿದರು ಮತ್ತು ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕ, ಟ್ರಾಫಿಕ್, ನಗರಾಡಳಿತ ಮತ್ತು ಭದ್ರತಾ ಇಲಾಖೆಗಳು ಸಂಯೋಜಿಸಿದ್ದ ಈ ಕಾರ್ಯಕ್ರಮ ನೆರೆದಿದ್ದ ಜನಸಮೂಹದಲ್ಲಿ ದೇಶಭಕ್ತಿ ಮತ್ತು ದೇಶಪ್ರೇಮವನ್ನು ಮೂಡಿಸಿತು.
ಸ್ವಾತಂತ್ರ ದಿನಾಚರಣೆಯ ಅಂಗವಾಗಿ ವಿಐಎಸ್‌ಎಲ್ ವತಿಯಿಂದ ಉಚಿತ ಸಸಿ (ನುಗ್ಗೆ, ಪಪ್ಪಾಯ, ತುಳಸಿ, ಮಾವು, ನೇರಳೆ, ಹೊಂಗೆ ಇತ್ಯಾದಿ) ವಿತರಣಾ ಕಾರ್ಯಕ್ರಮವನ್ನು ೧ ವಾರ ಹಮ್ಮಿಕೊಳ್ಳಲಾಗಿದ್ದು, ಕಂಪನಿಯ ಮುಖ್ಯ ದ್ವಾರದ ಬಳಿ ಸಸಿಯನ್ನು ಪಡೆಯಬಹುದಾಗಿ ಸಾರ್ವಜನಿಕರಿಗೆ ಈ ಮೂಲಕ ತಿಳಿಸಲಾಗಿದೆ.
