S.N. Channabasappa ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಪ್ರೇಮವನ್ನು ಪ್ರೀತಿಸುವ, ಗೌರವಿಸುವ ಹಾಗೂ ಆಧರಿಸುವುದನ್ನು ಪ್ರತಿಯೊಬ್ಬ ಪ್ರಜೆಯು ಬೆಳೆಸಿಕೊಳ್ಳಬೇಕು ಎಂದು ಶಿವಮೊಗ್ಗ ಶಾಸಕರಾದ ಶ್ರೀಯುತ ಹೆಚ್.ಎಸ್.ಚನ್ನಬಸಪ್ಪನವರು ಹಿರಿಯ ಸ್ವಾತಂತ್ರ್ಯ ಹೋರಾಟಗರರಾದ ಗಾಂದಿ ಬಸಪ್ಪನವರ ವಂದೇ ಮಾತರಂ ನಿಲಯದ ಮಹಡಿಯ ಮೇಲೆ 79ನೇ ಸ್ವತಂತ್ರ ದಿನಚಾರಣೆಯ ಧ್ವಜರೋಹಣ ಮಾಡುತ್ತಾ ನುಡಿದರು.
ಮುಂದುವರೆದು ಶ್ರೀಯುತರು ಈ ಕುಟುಂಬ ಎರಡು ರಾಷ್ಟ್ರೀಯ ಹಬ್ಬಗಳಾದ ಗಾಂಧಿ ಜಯಂತಿ ಹಾಗೂ ಸ್ವಾತಂತ್ರ್ಯ ದಿನಚಾರಣೆಯನ್ನು ಅರ್ಥಪೂರ್ಣವಾಗಿ 79 ವರ್ಷದಿಂದ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಹಾಗೂ ಅನುಕರಣೀಯ ಎಂದು ನುಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಸಿ.ಎಸ್.ಚಂದ್ರಬೂಪಾಲ್‌ರವರು ಗಾಂಧಿ ಬಸಪ್ಪನವರ ಈ ಮನೆಯಲ್ಲಿ ಬಾಳಿ ಬದುಕಿದವರು, ಕುಟುಂಬದವರು ಅವರ ಆದರ್ಶಗಳನ್ನು ಮೈಗೂಡಿಕೊಂಡಿ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.
S.N. Channabasappa ಅಶೋಕ್ ಗಾಂಧಿ ಬಸಪ್ಪನವರಿಂದ ಸ್ವಾಗತ, ವಾಸುದೇವರವರಿಂದ ಅಧ್ಯಕ್ಷರ ನುಡಿ, ಸತೀಶ್‌ರವರಿಂದ ವಂದನಾರ್ಪಣೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಹಿಯನ್ನು ಹಂಚಿ ಸಂಭ್ರಮಿಸಲಾಯಿತು. ನಂತರ ಬಡಾವಣೆಯ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
