Saturday, December 6, 2025
Saturday, December 6, 2025

Rotary Shivamogga ಸ್ವಾತಂತ್ರ್ಯ, ಲಕ್ಷಾಂತರ ಜನರ ತ್ಯಾಗ, ಬಲಿದಾನದ ಫಲ- ಡಿ.ಕಿಶೋರ್ ಕುಮಾರ್

Date:

Rotary Shivamogga ರೋಟರಿ ಪೂರ್ವ ಆಂಗ್ಲಮಾದ್ಯಮ ಶಾಲೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು

ಈ ಸಂದರ್ಭದಲ್ಲಿ ದ್ಷಜಾರೋಹಣವನ್ನು ನೆರೆವೇರಿಸಿ ರೊಟರಿ ಪೂರ್ವದ ಅದ್ಯಕ್ಷರಾದ ರೊ. ಕಿಶೋರ್ ಕುಮಾರ್.ಡಿ. ರವರು ವಿದ್ಯಾರ್ಥಿಗಳನ್ನೂದ್ದೇಶಿಸಿ ಮಾತನಾಡುತ್ತಾ ಸುಮಾರು ೨೦೦ ವರ್ಷಗಳ ಆಂಗ್ಲರ ಸ್ವಾತಂತ್ರ್ಯಹರಣದ ಬಿಡುಗಡೆಗಾಗಿ ಲಕ್ಷಾಂತರ ಜನರ ಹೋರಾಟ ತ್ಯಾಗ ಬಲಿದಾನ ರಕ್ತ ಕಣ್ಣೀರುಗಳ ಫಲಶೃತಿಯಿಂದಾಗಿ ಭಾರತವು ಇಂದು ವಿಶ್ವಗುರುವಾಗಿ ಹೊರಹೊಮ್ಮಿದೆ, ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿದ್ದ ಮಹಾತ್ಮಾಗಾಂಧಿ ಸರ್ ದಾರ್ ವಲ್ಲಭಾಯಿ ಪಟೇಲ್ , ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರಬೊಸ್, ಬಗತ್ ಸಿಂಗ್ ರಾಜಗುರು, ಲೋಕಮಾನ್ಯ ಬಾಲ ಗಂಗಾಧರ ತಿಲಕ್, ಇನ್ನೂ ಮುಂತಾದ ಆನೇಕ ಮಹನೀಯರ ಚರಿತ್ರೆಯನ್ನು ಓದಿ ಅವರಂತೆಯೇ ರಾಷ್ಟ ಭಕ್ತರಾಗಿ ರಾಷ್ಟದ ಅಭಿವೃದ್ದಿಗಾಗಿ ವಿದ್ಯಾರ್ಥಿಗಳು ಈಗಿನಿಂದಲೇ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.

ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟಿ ನ ಮ್ಯಾನೇಜಿಂಗ್ ಟ್ರಸ್ಟಿ ರೊ. ಕೆ ಬಿ ರವಿಶಂಕರ್ ರವರು ಮಾತನಾಡುತ್ತಾ ಇಂದಿನ ಯುವಜನತೆಯಲ್ಲಿ ಇತಿಹಾಸದ ಪ್ರಜ್ಙೆಇಲ್ಲವೆಂದು ಇತಿಹಾಸವನ್ನು ಮರೆತರೆ ಐತಿಹಾಸಿಕ ಸಂದರ್ಭಗಳ ಸೃಷ್ಟಿ ಸಾದ್ಯವಿಲ್ಲವೆಂದು ಈನಿಟ್ಟಿನಲ್ಲಿ ವಿದ್ಯಾರ್ಥಿಗಳು ಜನಪರ ಹೋರಾಟದ ಮನೋಬಾವವನ್ನು ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳು ಮಾತನಾಡುತ್ತಾ ಸಮಾರಂಭದಲ್ಲಿ ಸ್ವಾತಂತ್ರ್ಯಹೊರಾಟದ ೧೮೫೭ರಿಂದ ೧೯೪೭ರ ವರೆಗಿನ ಅವಧಿಯಲ್ಲಿ ಸ್ಟತಂತ್ರ್ಯಕ್ಕಾಗಿ ಹೊರಾಡಿದ ಮಹಾತ್ಮಗಾಂಧಿ, ನೆಹರು, ವಲ್ಲಭಾಯಿ ಪಟೇಲ್, ಸುಭಾಷ್ ಚಂದ್ರಬೊಸ್, ಬಾಬಾ ಸಹೇಬ್ ಅಂಬೇಡ್ಕರ್ ಕಿತ್ತೂರು ರಾಣಿ ಚೆನ್ನಮ್ಮ, ಜಾನ್ಸಿರಾಣಿ ಲಕ್ಷ್ಮೀಬಾಯಿ, ಸಾವಿತ್ರಬಾಯಿಪುಲೆ, ಚಂದ್ರಶೇಕರ್ ಅಜಾದ್, ರಾಜ್ ಗುರು ಶುಕ್‌ದೇವ್, ಸಂಗೋಳ್ಳಿ ರಾಯಣ್ಣ, ಮುಂತಾದ ಮಹನೀಯರ ವೇಷಭೋಷಣಗಳನ್ನು ತೊಟ್ಟು ಸ್ಟತಂತ್ರ್ಯ ಹೊರಾಟದ ಐತಿಹಾಸಿಕ ದಿನಗಳನ್ನು ನೆನಪುಮಾಡಿಕೊಟ್ಟ ವಿದ್ಯರ್ಥಿಗಳನ್ನು ಅಭಿನಂದಿಸಿ ಅವರಂತೆಯೇ ರಾಷ್ಟನಾಯಕರಾಗಬೇಕೆಂದು ಕರೆನೀಡಿದರು.

ಇದೇ ಸಮಾರಂಭದಲ್ಲಿ ರೊಟರಿ ಪೂರ್ವದ ಕಾರ್ಯದರ್ಶಿ ರೊ. ಧನಂಜಯ್ ಇವರು ಮಾತನಾಡುತ್ತಾ ಶಿಸ್ತು ಸಂಯಮ ಮಾಹಾಪುರುಷರ ಆತ್ಮಕಥೆಗಳನ್ನು ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ರೊಟರಿ ಪೂರ್ವ ಆಂಗ್ಲ ಮಾದ್ಯಮಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರು ಮುಂದಿನದಿನಗಳಲ್ಲಿ ಭಾರತದ ಸತ್ ಪಜ್ರೆಗಳಾಗಿ ಬೆಳೆಯಬೇಕೆಂದು ಆಮೂಲಕ ರಾಷ್ಟ್ರದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Rotary Shivamogga ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಟ್ರಸ್ಟಿಗಳಾದ ರೊ. ವಿಜಯಕುಮಾರ್ ರವರು ಮಾತನಾಡುತ್ತಾ ಈ ದಿನ ರೋಟರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬಾಗಿಯಾಗಿದ್ದ ಎಲ್ಲಾ ಹೋರಾಟಗಾರರ ವೇಷ ಭೋಷಣಗಳನ್ನು ತೊಟ್ಟಿದ್ದ ಮಕ್ಕಳನ್ನು ನೊಡಿದಾಗ ರೊಮಾಂಚನ ಉಂಟಾಗುತ್ತದೆಂದು, ಕಾರಣ ಇಂದಿನ ಯುವಜನತೆಗೆ ಇತಿಹಾಸ ಪುರುಷರ ನೆನಪು ಇಲ್ಲದಿರುವ ಪ್ರಯುಕ್ತ ಈ ವೇಷ ಭೋಷಣಗಳ ಮೂಲಕ ಇತಿಹಾಸವನ್ನು ಮರು ಸೃಷಿಮಾಡಿ ಸಮಾರಂಭಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟ ವಿದ್ಯಾರ್ಥಿಗಳಿಗೆ ಈನಿಟ್ಟಿನಲ್ಲಿ ಸಹಕರಿಸಿದ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು.

ಈ ಸಮಾರಂಭದಲ್ಲಿ ಟ್ರಸ್ಟಿನ ಖಜಾಂಚಿಯಾದ ರೊ. ಎನ್ ಬಿ ಮಂಜುನಾಥ ರವರು ಮಾತನಾಡುತ್ತಾ ನಮ್ಮ ದೇಶ ಪ್ಲಾಸ್ಟಿಕ್ ಮುಕ್ತ ದೇಶವಾಗಬೇಕೆಂದು ಕರೆನೀಡಿದರು.

ಉಪಾದ್ಯಕ್ಷರಾದ ಶ್ರೀಮತಿ ನಾಗವೇಣಿ ಎಸ್, ರೊ. ಕಡಿದಾಳ್ ಗೋಪಾಲ್, ಡಾ||ಪರಮೇಶ್ವರ್ ಶಿಗ್ಗಾಂವ್, ಆರ್. ರೊ. ಪ್ರತಾಪ್. ಇನ್ನರ್ ವ್ಹೀಲ್ ಅಧ್ಯಕ್ಷರಾದ ವೀಣಾ ಸುರೇಶ್ ಪ್ರಾಂಶುಪಾಲರಾದ ಆರ್. ಸೂರ್ಯನಾರಾಯಣ್ ಭಾಗವಹಿಸಿದ್ದು ಶ್ರೀಮತಿ ಕಾವ್ಯ ಇವರ ನಿರೂಪಣೆಯಲ್ಲಿ ಶ್ರೀಮತಿ ಶ್ವೇತ ರವರ ವಂದನಾರ್ಪಣೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...