Saturday, December 6, 2025
Saturday, December 6, 2025

ಪ್ರತಿಭೆಗಳಿಗೆ ಶ್ಲಾಘನೆ ಸೇರಿದರೆ ಮಕ್ಕಳು ಮೇಲೆ ಬರಲು ಸಾಧ್ಯ- ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್

Date:

Canara Bank ಪ್ರತಿಭಾ ಪುರಸ್ಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯಾದ ರಮೇಶ್ ಅವರು ಅಭಿಪ್ರಾಯಪಟ್ಟರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ಸರ್ಕಾರಿ ಶಾಲೆ, ಸರ್ಕಾರಿ ಅನುದಾನಿತ ಶಾಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಕ್ಕೆ ಸೇರಿದ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ನೀಡುವ ಕೆನರಾ ಬ್ಯಾಂಕ್ ಡಾ. ಬಿಆರ್ ಅಂಬೇಡ್ಕರ್ ವಿದ್ಯಾ ಜ್ಯೋತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು ಮಕ್ಕಳು ಬಹಳ ಸಂತೋಷ ಸಂಭ್ರಮ ಪಡೆಯುವ ವಿಚಾರವಾಗಿದ್ದು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟುವುದರಿಂದ ಮಕ್ಕಳು ಮೇಲೆ ಬರಲು ಸಾಧ್ಯ ಇಚ್ಛಾ ಶಕ್ತಿ ಇರಬೇಕು ಆಗ ಮಾತ್ರ ಸಾಧನೆ ಮೆಟ್ಟಿಲು ಏರಲು ಸಾಧ್ಯವಾಗುತ್ತದೆ ಎಂದರು.

ಅಂಬೇಡ್ಕರ್ ಅವರ ಹತ್ತಿರ ಯಾವುದೇ ಆಸ್ತಿ ಹಣ ಇಲ್ಲದಿದ್ದರೂ ಅವರು ಇಡೀ ಜಗತ್ತು ಅವರನ್ನು ಗುರುತಿಸಿತು ಕಾರಣ ಅವರಲ್ಲಿ ಇರುವ ವಿದ್ಯೆ ಆ ವಿದ್ಯೆಯಿಂದಲೇ ಅವರು ನಮ್ಮ ಸಂವಿಧಾನವನ್ನು ರಚಿಸಿ ಇಡೀ ಜಗತ್ತಿಗೆ ಮಾದರಿಯಾದರೂ ಇಂತಹ ಮಹಾನ್ ವ್ಯಕ್ತಿಯ ಹೆಸರಿನಿಂದ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಅದರಲ್ಲೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಾಧನೆ ಮಾಡಿರುವ ವಿದ್ಯಾರ್ಥಿನಿಯರಿಗೆ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ನಂತರ ಮಾತನಾಡಿದ ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ದೇವರಾಜ್ಆರ್ ಅವರು ಕಳೆದ 20 ವರ್ಷಗಳಿಂದ ಕೆನರಾ ಬ್ಯಾಂಕ್ ವಿದ್ಯಾ ಜ್ಯೋತಿಯನ್ನು ನೀಡುತ್ತಿದೆ ಪ್ರತಿ ಶಾಖೆಯಿಂದ ಆರು ಮಕ್ಕಳಂತೆ 62 ಶಾಖೆಯಿಂದ 372 ಮಕ್ಕಳಿಗೆ ಒಟ್ಟು 15 ಲಕ್ಷ ರೂ ಶಿವಮೊಗ್ಗ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ನೀಡುತ್ತಿದೆ ಐದು ಆರು ಹಾಗೂ 7ನೇ ತರಗತಿ ಮಕ್ಕಳಿಗೆ 3000 ಹಾಗೂ 8 9 10ನೇ ತರಗತಿ ಮಕ್ಕಳಿಗೆ 5000 ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ ವಿದ್ಯಾರ್ಥಿನಿಯರು ಐದನೇ ತರಗತಿಯಲ್ಲಿ ವಿದ್ಯಾರ್ಥಿವೇತನ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಹತ್ತನೇ ತರಗತಿಯವರೆಗೂ ಪ್ರತಿಭಾ ಪುರಸ್ಕಾರ ತೆಗೆದುಕೊಳ್ಳುವಂತಹ ಆಗಬೇಕು ಎಂದು ಹಾರೈಸಿದರು.

ನನಗೂ ಹತ್ತನೇ ತರಗತಿಯಲ್ಲಿ 25 ರೂ ಪ್ರತಿಭಾ ಪುರಸ್ಕಾರ ಪಡೆದಿದ್ದೆ ಮೊತ್ತ ಮುಖ್ಯವಲ್ಲ ಪ್ರತಿಭೆಯನ್ನು ಗುರುತಿಸುವುದು ಬಹಳ ಮುಖ್ಯ ಎಂದರು ಕೆನರಾ ಆಸ್ಪೈರ್ (aspire)ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನರಾ ಬ್ಯಾಂಕಿನ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೋರಿದರು.

Canara Bank ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರಾಜು ಅಣಜಿ ಹಿರಿಯ ವ್ಯವಸ್ಥಾಪಕರಾದ ಪ್ರಶಾಂತ್, ಗೀತಾಂಜಲಿ ಪ್ರಸನ್ನ ಕುಮಾರ್ ವಿವಿಧ ಶಾಖೆಯ ಮುಖ್ಯಸ್ಥರು ಹಾಗೂ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...