Shivamogga Police ಕ್ಯಾತನಕೊಪ್ಪದಿಂದ ಸೂಗೂರಿಗೆ ಹೋಗುವ ಅಪ್ಪರ್ ತುಂಗಾ ಚಾನಲ್ ನೀರಿನಲ್ಲಿ ಯಾವುದೋ ಅನಾಮಧೇಯ ಗಂಡಸಿನ ಶವವು ತೇಲಿಕೋಂಡು ಬಂದು ಮಾಡಿ ಕ್ಯಾತನಕೊಪ್ಪದಿಂದ ಸೂಗೂರಿನ ಮದ್ಯದಲ್ಲಿ ಗುರಕಳ್ಳೇರ ಶಿವಣ್ಣನವರ ಅಡಿಕೆ ತೋಟದ ಹತ್ತಿರ ಇರುವ ತುಂಗಾ ಚಾನಲ್ ಸೇತುವೆಯ ಮದ್ಯದ ಪಿಲ್ಲರ್ ಕಂಬಕ್ಕೆ ಸುಮಾರು 30 ರಿಂದ 40 ವರ್ಷದ ಅನಾಮಧೇಯ ಗಂಡಸಿನ ಮೃತ ದೇಹವು ಪತ್ತೆಯಾಗಿದೆ.
ಈತನ ಚಹರೆ: ಸುಮಾರು 5.6 ಅಡಿ ಎತ್ತರ ಇದ್ದು ದುಂಡು ಮುಖ ಕಂದು ಬಣ್ಣ ಹೊಂದಿದ್ದು ದಪ್ಪನೆಯ ಮೈಕಟ್ಟು ಹೊಂದಿರುತ್ತಾನೆ. ಮೃತನ ದೇಹವು ಕೊಳೆತು ಮೇಲ್ಬಾಗದ ಚರ್ಮ ಕೊಳೆತು ಒಳಬಾಗ ಬಿಳಿ ಮತ್ತು ಕೆಂಪು ಬಣ್ಣದ ಚರ್ಮ ಕಾಣುತ್ತಿರುತ್ತದೆ.
ತಲೆಯ ಕೂದಲು ಉದುರಿಹೋದಂv ಕಂಡು ಬಂದಿರುತ್ತದೆ. ಮೃತನ ಬಲಮುಂಗೈಯಲ್ಲಿ ‘♡’ ಸಿಂಬಲ್ ಇದ್ದು ಅದರೊಳಗೆ ಐ ಮತ್ತು s ಹಚ್ಚೆ ಗುರುತು ಇರುತ್ತದೆ.
Shivamogga Police ಧರಿಸಿದ್ದ ಉಡುಪು; ಕೆಂಪು ಬಣ್ಣದ ಸ್ಯಾಂಡೋ ಬನಿಯನ್ ಹಾಗೂ ಕಡು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಬಲ ಮುಂಗೈಯಲ್ಲಿ ಕಬ್ಬಿಣದ ಕಡಗ ಇರುತ್ತದೆ.
ಈ ಮೃತ ವ್ಯಕ್ತಿಯ ಸಂಬಂಧಿಕರು ವಾರಸುದಾರರು ಪತ್ತೆಯಾದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ ಅಥವಾ ಪಿ.ಎಸ್.ಐ. ಗ್ರಾಮಾಂತರ ಪೊಲೀಸ್ ಠಾಣೆ ಶಿವಮೊಗ್ಗ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಶಿವಮೊಗ್ಗ ಪೋನ್ ನಂ 100 ಗೆ ಮಾಹಿತಿ ನೀಡಲು ಸೂಚಿಸಿದೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08182-261418, 261410, 261422, 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ನೀಡಿದೆ.
