Rotary Shivamogga ಭಾರತೀಯ ಸಂಸ್ಕೃತಿಯಲ್ಲಿ ಸಹೋದರ ಸಹೋದರಿಯರ ಸಂಬಂಧ ಅತ್ಯಂತ ವಿಶೇಷವಾದದ್ದು ಎಂದು ರೋಟರಿ ಶಿವಮೊಗ್ಗ ಪೂರ್ವಚಾರಿಟೇಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ವಿ.ರವಿಶಂಕರ್ ಅಭಿಮತ ವ್ಯಕ್ತಪಡಿಸಿದರು.
ಅವರು ರೋಟರಿ ಶಾಲೆಯಲ್ಲಿ ರಕ್ಷಾ ಬಂಧನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ಷಾಬಂಧನದಂದು ಪ್ರತಿ ವರ್ಷ ರಕ್ಷಾ ಬಂಧನ ನೂಲೂ ಹುಣ್ಣಿಮೆ ಎಂದು ಸಹೋದರಿಯರು ರಕ್ಷಾ ಬಂಧನ ಸಹೋದರರಿಗೆ ರಕ್ಷಾ ಬಂಧನವನ್ನು ಕಟ್ಟುವುದರ ಮುಖಾಂತರ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ ಸಹೋದರರ ಬ್ರಾತೃತ್ವ ಹಾಗೂ ಪರಸ್ಪರರಲ್ಲಿ ರಕ್ಷಣಾ ಭಾವದಿಂದ ಈ ಹಬ್ಬ ಎಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ರೋಟರಿ ಮಾಜಿ ಸಾಯಕ ಗವರ್ನರ್ಜಿ ವಿಜಯ್ ಕುಮಾರ್ ಮಾತನಾಡಿ, ಸಹೋದರಿಯರು ರಕ್ಷಾ ಬಂಧನ ಸಹೋದರರಿಗೆ ರಕ್ಷಾ ಬಂಧನವನ್ನು ಕಟ್ಟುವುದರ ಮುಖಾಂತರ ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ರಕ್ಷಾ ಬಂಧನವೂ ಸಹೋದರ ಸಹೋದರಿಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚುಗೊಳಿಸುತ್ತದೆ ಎಂದು ರಕ್ಷಾ ಬಂಧನ್ ಮಹತ್ವವನ್ನು ತಿಳಿಸಿದರು.
Rotary Shivamogga ಇದೇ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳ ಕೈಗೆ ರಕ್ಷಾ ಬಂಧನ್ ಕಟ್ಟಿ ಶ್ರೀ ಹಂಚಿ ಸಂಭ್ರಮಿಸಿದರು ಕಾರ್ಯಕ್ರಮದಲ್ಲಿ ಮಾಜಿ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಉಪಾಧ್ಯಕ್ಷರಾದ ನಾಗವೇಣಿ ಎಸ್.ಆರ್, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ನೆಪ್ಟ್ಯೂನ್ ಕಿಶೋರ್ ಡಾಕ್ಟರ್ ಧನಂಜಯ, ಇನ್ನರ್ ವೀಲ್ ಮಾಜಿ ಅಧ್ಯಕ್ಷರುಗಳಾದ ಬಿಂದು ವಿಜಯ ಕುಮಾರ್, ರೂಪ ಹಾಗೂ ಮುಖ್ಯೋಪಾಧ್ಯಾಯರುಗಳು ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.
