University of Agriculture ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ವತಿಯಿಂದ ದಿ : 18-08-2025 ರಿಂದ 22-08-2025 ರವರೆಗೆ “ಅನ್ವೇಷಣೋತ್ಸವ” ಎಂಬ ವಿಜ್ಞಾನ ಪ್ರದರ್ಶನವನ್ನು ನವುಲೆ ಆವರಣದ ಕೃಷಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಮತ್ತು ಸೊಸೈಟಿ ಫಾರ್ ಅಡ್ವಾನ್ಸ್ಮೆಂಟ್ ಇನ್ ಸೈನ್ಸ್, ಟೆಕ್ನಾಲಜಿ, ರಿಸರ್ಚ್ ಅಂಡ್ ಆರ್ಟ್ಸ್ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಯುವ ವಿಜ್ಞಾನಿಗಳನ್ನು ಪೋಷಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಕ್ರಮವು ಮಹತ್ವದ ಪಾತ್ರ ವಹಿಸುತ್ತದೆ.
ದಿನಾಂಕ 18-08-2025 ರಂದು ಬೆಳಿಗ್ಗೆ 10.30 ಕ್ಕೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರÀಪ್ಪನವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು, ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಈ ಮೇಳವನ್ನು ಜಿಲ್ಲಾ ಮಟ್ಟದ ವಿಜ್ಞಾನ ಕಾರ್ಯಕ್ರಮವನ್ನಾಗಿ ಮಾಡುವ ಉದ್ದೇಶ ಹೊಂದಿದ್ದು, ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಂದ ಸುಮಾರು 25,000 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಈ ವಿಜ್ಞಾನ ಪ್ರದರ್ಶನದಲ್ಲಿ ಪ್ಲಾಸ್ಮಾ ರಿಸರ್ಚ್ ಸಂಸ್ಥೆಯಿಂದ ವಿವಿಧ ವಿಜ್ಞಾನಗಳ ವಿಷಯಗಳಲ್ಲಿ ನೇರ ಪ್ರದರ್ಶನ, ತರಬೇತಿ ಕಾರ್ಯಕ್ರಮಗಳು, ಪ್ರತಿಷ್ಠಿತ ಸಂಸ್ಥೆಯ ವಿಜ್ಞಾನಿಗಳಿಂದ ಮಾಹಿತಿ ಹಂಚಿಕೊಳ್ಳುವುದು ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳು ಇರುತ್ತವೆ.
ಈ ಪ್ರದರ್ಶನದಲ್ಲಿ ಇಸ್ರೋ ಮತ್ತು ಡಿ ಆರ್ ಡಿ ಓ ಸಂಸ್ಥೆಗಳಿಂದ ವಿಜ್ಞಾನಿಗಳು ಆಗಮಿಸಲಿದ್ದು ತಮ್ಮ ಕ್ಷೇತ್ರದಲ್ಲಿ ಪ್ರದರ್ಶನ ಪ್ರದರ್ಶನವನ್ನು ಮಾಡಿ ವಿದ್ಯಾರ್ಥಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ
ವಿಶ್ವೇಶ್ವರಯ್ಯ ತಾಂತ್ರಿಕ ಮ್ಯೂಸಿಯಂ ಮತ್ತು ಆಟೋಮಿಕ್ ಎನರ್ಜಿ ಸಂಸ್ಥೆಯಿಂದ ಉತ್ತಮವಾದ ವೈಜ್ಞಾನಿಕ ತಾಂತ್ರಿಕ ಮಾಹಿತಿ ಜೊತೆಗೆ ನೇರ ಪ್ರದರ್ಶನದ ವ್ಯವಸ್ಥೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರ್ಯಭಟ ಪ್ಲಾನೆಟೋರಿಯಂ ಮತ್ತು ಟೆಲಿಸ್ಕೋಪ್ ಸಂಸ್ಥೆಯಿಂದ ಬಾಹ್ಯಾಕಾಶ ವಿಜ್ಞಾನದ ನೇರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ವಿಜ್ಞಾನಿಗಳೊಂದಿಗೆ ಮುಕ್ತವಾಗಿ ಚರ್ಚೆ ಮಾಡಲು ಅವಕಾಶವಿರುತ್ತದೆ.
University of Agriculture ವಿಜ್ಞಾನ ಪ್ರದರ್ಶನ ಮೇಳದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಕೌನ್ಸಿಲ್‌ನ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರು ಭಾಗವಹಿಸಲಿದ್ದಾರೆ, ಇಸ್ರೋದ ಮಾಜಿ ಅಧ್ಯಕ್ಷರು ಮತ್ತು ವಿಜ್ಞಾನಿಗಳಾದ ಡಾ. ಎಸ್ ಕಿರಣ್ ಕುಮಾರ್ ಅವರು ಭಾಗವಹಿಸಿ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ಅದೇ ರೀತಿ ಆಟೋಮಿಕ್ ಎನರ್ಜಿ ಸಂಸ್ಥೆಯ ವಿಜ್ಞಾನಿಗಳು, ವಿಜ್ಞಾನ ಪ್ರದರ್ಶನ ಸಮಿತಿಯ ಅಧ್ಯಕ್ಷರು, ಸೆಕ್ರೆಟರಿರವರು ಮತ್ತು ಇತರೆ ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು ಡಾಕ್ಟರ್ ಆರ್ ಸಿ ಜಗದೀಶ್ ಮತ್ತು ಎಲ್ಲಾ ವಿಶ್ವವಿದ್ಯಾಲಯದ ಅಧಿಕಾರಿ ವೃಂದದವರು, ಪ್ರಾಧ್ಯಾಪಕರು, ವಿಜ್ಞಾನಿಗಳು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ.ತಿಪ್ಪೇಶ ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
University of Agriculture ಆಗಸ್ಟ್ 18 ರಿಂದ ಶಿವಮೊಗ್ಗ ಕೃಷಿ ಕಾಲೇಜಿನಲ್ಲಿ ” ಅನ್ವೇಷಣೋತ್ಸವ-ವಿಜ್ಞಾನ ಪ್ರದರ್ಶನ”
Date:
