Monday, February 2, 2026
Monday, February 2, 2026

Girish Kaleidoscope ಆಗಸ್ಟ್ 16. ಮುರಳಿಧರ ಖಜಾನೆ ಅವರ”ಗಿರೀಶ್ ಕೆಲೈಡೋಸ್ಕೋಪ್ ” ಕೃತಿ ವಿಶ್ಲೇಷಣೆ

Date:

Girish Kaleidoscope ನಗರದ ಬಹುಮುಖಿ ಆಯೋಜನೆಯ 57 ಕಾರ್ಯಕ್ರಮವಾಗಿ, ಆ.16 ರ ಶನಿವಾರ ಸಂಜೆ 5.30 ಕ್ಕೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ -ೆ್ರಂಡ್ಸ್ ಸೆಂಟರ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಮುರಳೀಧರ ಖಜಾನೆಯವರ ಗಿರೀಶ್ ಕಾರ್ನಾಡ್ ಕೆಲೈಡೋಸ್ಕೋಪ್ ಕೃತಿ ಕುರಿತು ಸಂವಾದ ನಡೆಯಲಿದೆ.
ಈ ಕೃತಿಯನ್ನು ಕುರಿತು ಖ್ಯಾತ ವಿಮರ್ಶಕ ಟಿ. ಪಿ. ಅಶೋಕರವರು ಮಾತನಾಡಲಿದ್ದು, ಕೃತಿಕಾರ ಮುರಳೀಧರ ಖಜಾನೆ, ಪುಸ್ತಕದ ಸಂಪಾದಕರಾದ ಹಿರಿಯ ಸಂಗೀತ ಶಾಸöಜ್ಞ ಎಂ. ಕೆ. ಶಂಕರ್ ಸಂವಾದ ನಡೆಸಿಕೊಡಲಿದ್ದಾರೆ.
ಶಿವಮೊಗ್ಗ ಮೂಲದ ಮುರಳೀಧರ ಖಜಾನೆಯವರು ಸುಮಾರು ನಾಲ್ಕು ದಶಕಗಳ ಕಾಲ ಪತ್ರಕರ್ತರಾಗಿ ಪ್ರಜಾವಾಣಿ, ಉದಯವಾಣಿ ಹಾಗೂ ದಿ ಹಿಂದೂ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒಡನಾಡುತ್ತಿರುವ ಅಪರೂಪದ ಪತ್ರಕರ್ತರು ಹಾಗೂ ಬರಹಗಾರರು. ಅವರು ಶಿವಮೊಗ್ಗೆಯಲ್ಲಿ ಇದ್ದ ಸಂದರ್ಭದಲ್ಲಿ ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದು, ಅಭಿನಯ ತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಿನ್ನೆಲೆಯಲ್ಲಿಯೂ ಕೆಲಸ ಮಾಡಿದ್ದಾರೆ. ಜೊತೆಗೆ ಅನೇಕ ಜನಪರ ಹೋರಾಟಗಳಲ್ಲಿಯೂ ಕೂಡಾ ಭಾಗಿಯಾಗಿದ್ದಾರೆ. ಮುರಳಿರವರು, ರುಸ್ತುಂ ಬರುಚ ಇವರ ಕೊಶ್ವನ್ ಆ-ï -ÉÊಥ್ ( ನಂಬಿಕೆಯ ಪ್ರಶ್ನೆ) ಹಾಗೂ ಡಿ. ಮಂಡಲ್ ರವರ ಅಯೋಧ್ಯ ಆರ್ಕಾ್ಯಲಜಿ ಎ.ಆರ್.ಕೃಷ್ಣಮೂರ್ತಿ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ . ಅಲ್ಲದೆ ರ‍್ಯಾಂಡಮ್ ರಿ-É್ಲಕ್ಷನ್ಸ್ – ಎ ಕೆಲೈಡೋಸ್ಕೋಪಿಕ್ ಮ್ಯೂಸಿಂಗ್ಸ್ ಆನ್ ಕನ್ನಡ ಸಿನೆಮಾ ಹೆಸರಿನ ಇಂಗ್ಲಿಷ್ ಪುಸ್ತಕದ ನಂತರ ಈಗ ಕಾರ್ನಾಡ್ ಕೆಲೈಡೋಸ್ಕೊಪ್ ಇಂಗ್ಲೀಷ್ ಕೃತಿ ಪ್ರಕಟಿಸಿದ್ದಾರೆ. ಭಾರತೀಯ ಚಲನಚಿತ್ರದ ಬಗ್ಗೆ ಅಽಕೃತವಾಗಿ ಮಾತನಾಡಬಲ್ಲ ಇವರು, ಜಿ. ವಿ. ಅಯ್ಯರ್, ಗರುದತ್, ಪ್ರಸಿದ್ಧ ಛಾಯಾಗ್ರಾಹಕ ವಿ. ಕೆ. ಮೂರ್ತಿ ಕುರಿತಾಗಿ ಕೃತಿಗಳನ್ನು ಸಧ್ಯದಲ್ಲಿಯೇ ಹೊರತರಲಿದ್ದಾರೆ. ಹಾಗೆಯೇ ಕನ್ನಡ ರಂಗಭೂಮಿಗೆ ಮಹತ್ವದ ನಾಟಕವೊಂದರ ರಚನೆಯಲ್ಲಿಯೂ ತೊಡಗಿದ್ದಾರೆ.
Girish Kaleidoscope ಇವರ ಮಹತ್ವದ ಪುಸ್ತಕ ಕುರಿತ ಚರ್ಚೆ ಹಾಗೂ ಸಂವಾದದಲ್ಲಿ ಸಾಹಿತ್ಯಾಸಕ್ತರು, ಸಿನಿಮಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9449284495, 9845014229, 95380 20367 ರಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...