Rotary Club Shimoga Midtown ರೋಟರಿ ಕೇವಲ ಒಂದು ಕ್ಲಬ್ ಅಲ್ಲ, ಇದು ಮನುಷ್ಯತ್ವದ ವಿದ್ಯಾಲಯ. ಸದಸ್ಯತ್ವ ಪ್ರವೇಶದ್ವಾರ ಆಗಿದ್ದು, ಸದಸ್ಯರಾದ ನಂತರ ಸ್ನೇಹ, ಸೇವೆ, ಮೌಲ್ಯಗಳು ಮತ್ತು ಮಾನವೀಯತೆಯ ಮಹಾದಾರಿ ತೆರೆದುಕೊಳ್ಳುತ್ತದೆ ಎಂದು ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ಪ್ರಪಂಚಾದ್ಯಂತ ಆರೋಗ್ಯ, ಶಿಕ್ಷಣ, ಶುದ್ಧ ನೀರು, ಶಾಂತಿ, ಪರಿಸರ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಒಬ್ಬ ಸಾಮಾನ್ಯ ಸದಸ್ಯನು ಸೇವಾ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದರು.
ಬ್ರಹ್ಮಕುಮಾರಿ ಸಂಸ್ಥೆಯ ಸ್ವಾತಿ ಅಕ್ಕ ಮಾತನಾಡಿ, ಬ್ರಹ್ಮಕುಮಾರಿ ಸಂಸ್ಥೆಯು ವಿಶ್ವಾದ್ಯಂತ ತನ್ನ ಕಾರ್ಯ ವೈಖರಿಯಿಂದ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರೀತಿ ಬೆಸೆದಿದೆ. ಸಹೋದರ ಸಹೋದರಿಯರ ಬಾಂಧವ್ಯದ ಸಂಕೇತವಾದ ರಾಖಿ, ಕೇವಲ ರಕ್ಷಣೆಯ ದಾರವಲ್ಲ, ಅದು ಪ್ರೀತಿ, ವಿಶ್ವಾಸ ಮತ್ತು ಬದ್ಧತೆಯ ಪ್ರತೀಕ. ರಾಖಿ ಕಟ್ಟುವುದು ಹೃದಯಗಳನ್ನು ಕಟ್ಟುವುದು, ಆತ್ಮೀಯ ಸಂಬಂಧಗಳನ್ನು ಗಟ್ಟಿಗೊಳಿಸುವುದು ಎಂದು ತಿಳಿಸಿದರು.
Rotary Club Shimoga Midtown ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್.ವಿಶ್ವನಾಥ ನಾಯಕ ಮಾತನಾಡಿ, ರೋಟರಿ ಸೇವಾ ಪ್ರೇರಣೆ ಮತ್ತು ರಾಖಿ ಸಂಸ್ಕೃತಿಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುತ್ತಿದ್ದೇವೆ. ಇದು ನಮ್ಮ ಕ್ಲಬ್‌ನ ವೈಶಿಷ್ಟ್ಯ ಮತ್ತು ಹೆಮ್ಮೆ ಎಂದು ಹೇಳಿದರು.
ಕಾರ್ಯಕ್ರಮವು ಸೇವಾ ತತ್ವ, ಸ್ನೇಹದ ಬಾಂಧವ್ಯ ಹಾಗೂ ಸಂಸ್ಕೃತಿಯ ಅರ್ಥಪೂರ್ಣ ಸಂಗಮವಾಗಿತ್ತು. ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಕಾರ್ಯದರ್ಶಿ ನಿತಿನ್ ಯಾದವ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಆನಂದ್‌ಮೂರ್ತಿ, ವಲಯ ಸೇನಾನಿ ಎಸ್.ಪಿ.ಶಂಕರ್, ಮಾಜಿ ಅಧ್ಯಕ್ಷ ಬಸವರಾಜ್ ಎಂ.ಆರ್., ನಾಗರಾಜ್ ಎಂ., ಧನರಾಜ್ ಬಿ.ಜಿ, ದೇವೇಂದ್ರಪ್ಪ ಆರ್, ಸಿ.ಎನ್ ಮಲ್ಲೇಶ್, ರೋಟರಿ ಸದಸ್ಯರು, ಇನ್ನರ್‌ವೀಲ್ ಸಹೋದರಿಯರು, ಬ್ರಹ್ಮಕುಮಾರಿ ಕುಟುಂಬ, ಯೋಗ ಕೇಂದ್ರದ ಸದಸ್ಯರು ಇದ್ದರು.
Rotary Club Shimoga Midtown ರೋಟರಿ ಕ್ಲಬ್ ,ಕೇವಲ ಕ್ಲಬ್ ಅಲ್ಲ. ಮನುಷ್ಯತ್ವದ ದೇವಾಲಯ-ವಸಂತ ಹೋಬಳಿದಾರ್
Date:
