Shimoga Bharat Scouts and Guides ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸ್ಕೌಟ್ ಮತ್ತು ಗೈಡ್ಸ್ ತರಬೇತಿಗಳು ಸಹಕಾರಿಯಾಗುತ್ತವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ, ಮಾಜಿ ಗೃಹಮಂತ್ರಿ ಪಿಜಿಆರ್ ಸಿಂಧ್ಯಾ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಿಪುಣ್ ಪರೀಕ್ಷಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ನಂತರ ಉದ್ಯೋಗ ಕ್ಷೇತ್ರಕ್ಕೆ ಕಾಲಿಟ್ಟಾಗ, ವಿಶೇಷವಾಗಿ ಕೇಂದ್ರ ಸರ್ಕಾರದ ರೈಲ್ವೆ, ಪೋಸ್ಟ್ ಆಫೀಸ್ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸ್ಕೌಟ್ ತರಬೇತಿ ಪಡೆದ ಪ್ರಮಾಣ ಪತ್ರ, ದಾಖಲೆಗಳನ್ನು ನೀಡಿದಾಗ ಶೇ. 10 ಮೀಸಲಾತಿ ದೊರಕುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಾಲೇಜು ಹಂತದಲ್ಲಿ ಜೀವನವನ್ನು ಸುಂದರವಾಗಿಸಿಕೊಳ್ಳಲು ವಿದ್ಯೆಯ ಜೊತೆಗೆ ಸ್ಕೌಟ್ಸ್ ಚಳುವಳಿಯಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣರಾಗುತ್ತಾರೆ. ಶಿವಮೊಗ್ಗ ಜಿಲ್ಲಾ ಶಾಖೆ ತುಂಬಾ ವ್ಯವಸ್ಥಿತ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ರಾಜ್ಯದಲ್ಲೇ ಒಂದು ಮಾದರಿ ಸಂಸ್ಥೆಯಾಗಿ ಹೊರಬಂದಿದೆ. ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸ್ಥಳೀಯ ಸಂಸ್ಥೆಯ ತಾಲೂಕು ಸಂಸ್ಥೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಹಕಾರ ಅತ್ಯಂತ ಮುಖ್ಯ ಎಂದು ಪ್ರಶಂಸಿಸಿದರು.
ಭಾರತ್ ಸ್ಕೌಟ್ಸ್ ಅಂಡ್ ಜಿಲ್ಲಾ ಗೈಡ್ಸ್ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಅಧಿಕಾರ ವಹಿಸಿಕೊಂಡ ನಂತರ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ರಾಜ್ಯ ಸಂಸ್ಥೆ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದ್ದೇವೆ. ಸ್ಕೌಟ್ಸ್ ಅಂಡ್ ಗೈಡ್ಸ್ ಚಳುವಳಿಯಲ್ಲಿ ತೊಡಗಿಸಿಕೊಂಡು ಸದೃಢ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯುವಜನರ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಶಾಲೆಗಳಲ್ಲಿ ಸ್ಕೌಟ್ ಘಟಕಗಳು ಸ್ಥಾಪನೆ ಆಗಬೇಕುಮನೆ ಮನೆಗೆ ಸ್ಕೌಟ್ ತಲುಪಬೇಕು ಎಂದರು.
Shimoga Bharat Scouts and Guides ರಾಜ್ಯ ಸಂಘಟನಾ ಆಯುಕ್ತೆ ಮಂಜುಳಾ, ಕೇಂದ್ರ ಸ್ಥಾನಿಕ ಆಯುಕ್ತ ಜಿವಿಜಯಕುಮಾರ್, ಜಂಟಿ ಕಾರ್ಯದರ್ಶಿ ವೈ ಆರ್ ವೀರೇಶಪ್ಪ, ಖಜಾಂಚಿ ಚೂಡಾಮಣಿ ಈ ಪವಾರ್, ಜಿಲ್ಲಾ ರೋವರ್ ಆಯುಕ್ತ ಕೆ ರವಿ, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ತರಬೇತಿ ಆಯುಕ್ತ ಎಚ್ ಶಿವಶಂಕ್ರಪ್ಪ, ಕೃಷ್ಣಸ್ವಾಮಿ, ಲಕ್ಷ್ಮೀ ಕೆ ರವಿ, ವಿನಯ ಭೂಷಣ್, ಹೆಚ್ ಜ್ಯೋತಿ, ಪರಿಮಳ, ಮಂಜುಳಾ, ಗಣಪತಿ, ರಮ್ಯಾ, ಸ್ಕೌಟ್ ಆಯುಕ್ತ ಎಸ್ ಜಿ ಆನಂದ್, ರುದ್ರಪ್ಪ ಚಿಲೂರು, ಎನ್ ಆರ್ ಚಂದ್ರಶೇಖರ್, ದೇವಪ್ಪ, ಸಂಗೀತಾ ಬಗಲಿ, ಬಸವಣ್ಣಪ್ಪ ಉಪಸ್ಥಿತರಿದ್ದರು.
Shimoga Bharat Scouts and Guides ಸ್ಕೌಟ್ ತರಬೇತಿ ಪಡೆದವರಿಗೆ ಕೇಂದ್ರದ ಉದ್ಯೋಗಗಳಲ್ಲಿ ಶೇ 10 ಮೀಸಲಾತಿ -ಪಿ.ಜಿ.ಆರ್.ಸಿಂಧ್ಯಾ
Date:
