Chamber Of Commerce Shivamogga ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ಇದರಿಂದ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ದೊರಕುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು.
ಭದ್ರಾವತಿ ವಾಸು ನೇತ್ರತ್ವದ ಭಾವಗಾನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಭಾವಗೀತೆ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಸಂಗೀತ ಸಾಧಕನ ಸ್ವತ್ತು, ಸೋಮಾರಿ ಸ್ವತ್ತಲ್ಲ. ಸಂಗೀತಕ್ಕೆ ಏಕಾಗ್ರತೆ ಹಾಗೂ ಧ್ವನಿ ಸಂಸ್ಕರಣೆ ಅತಿ ಮುಖ್ಯ ಎಂದು ತಿಳಿಸಿದರು.
ಒಳ್ಳೆಯ ಸಂಗೀತದಿಂದ ಶರೀರ ಹಾಗೂ ಶಾರೀರ ಶುದ್ಧಗೊಳ್ಳುತ್ತದೆ ಹಾಗೂ ಖಿನ್ನತೆ ದೂರವಾಗುತ್ತದೆ. ಸಮಾಜದಲ್ಲಿ ನಮಗೆ ಆದ ವಿಶೇಷವಾದ ಗೌರವ ದೊರಕುತ್ತದೆ. ಅದ್ದರಿಂದ ಪ್ರತಿಯೊಬ್ಬರೂ ಸಂಗೀತವನ್ನು ಶಾಸ್ತ್ರಬದ್ಧವಾಗಿ ಕಲಿತು ಮಾಡುವುದರಿಂದ ಅವರ ವ್ಯಕ್ತಿತ್ವವು ಸಹ ನಿರ್ಮಾಣಗೊಳ್ಳುತ್ತದೆ ಎಂದರು.
ಭಾವಗಾನ ತಂಡದ ವಾಸು ಅವರು ಸಾವಿರಾರು ವಿದ್ಯಾರ್ಥಿಗಳನ್ನು ಹಾಗೂ ಹೊಸ ಹೊಸ ಪ್ರತಿಭೆಗಳನ್ನ ವೇದಿಕೆಗೆ ಪರಿಚಯಿಸುವುದರ ಜತೆಗೆ ರಾಜ್ಯಮಟ್ಟದಲ್ಲೂ ಸಹ ಹಾಡುವುದಕ್ಕೆ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಪ್ರಶಂಸಿದರು.
ಭದ್ರಾವತಿ ವಾಸು ಮಾತನಾಡಿ, ಸಂಗೀತ ಕ್ಷೇತ್ರಕ್ಕೆ ನಮ್ಮ ತಂಡದಲ್ಲಿರುವ ಕಲಾವಿದರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿದ್ದೇವೆ. ನಮ್ಮ ತಂಡದಲ್ಲಿ ಅನೇಕ ಆಕಾಶವಾಣಿ ಗಾಯಕರು ಹಾಗೂ ದೂರದರ್ಶನ ಕಲಾವಿದರು ಸಹ ಇದ್ದಾರೆ ಎಂದರು.
Chamber Of Commerce Shivamogga ಕಾರ್ಯಕ್ರಮದಲ್ಲಿ ನೂರಾರು ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಸುಪ್ರಜಾ ಕಾಮತ್ ಅವರು ಪ್ರಥಮ ಬಹುಮಾನ, ನಂದಿ ವಿರೂಪಾಕ್ಷ ದ್ವಿತೀಯ ಬಹುಮಾನ, ಸುನಿಲ ಕಾಮತ್ ತೃತೀಯ ಬಹುಮಾನ ಹಾಗೂ ಶ್ವೇತಾ ಪಾಟೀಲ್, ಸಾಗರ್, ಬಸವರಾಜ್, ಮಮತಾ, ಅನುಪ್ ಸಮಾಧಾನಕರ ಬಹುಮಾನ, ಪ್ರಶಸ್ತಿ ಪತ್ರ, ಪಾರಿತೋಷಕ, ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು. ವೇದಿಕೆಯಲ್ಲಿ ಪ್ರಶಾಂತ್ ಹದಡಿ, ನವೀನ್, ಹೇಮಂತ್, ಬಸವರಾಜ್, ಪ್ರಮೋದ್ ಹಾಗೂ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Chamber Of Commerce Shivamogga ಪ್ರತಿಭೆ ಅನಾವರಣಕ್ಕೆ ಸಂಗೀತ ಸ್ಪರ್ಧೆ ಸೂಕ್ತ ವೇದಿಕೆ – ಜಿ.ವಿಜಯ ಕುಮಾರ್
Date:
