Friday, December 5, 2025
Friday, December 5, 2025

Adichunchanagiri Education Trust ಅಕ್ಷರ ಅಭ್ಯಾಸವು ವ್ಯಕ್ತಿಯೊಬ್ಬನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ: ಶ್ರೀ ಪ್ರಸನ್ನನಾಥಸ್ವಾಮೀಜಿ

Date:

Adichunchanagiri Education Trust ಹಿಂದೂ ಪದ್ಧತಿಯಲ್ಲಿ, ಅಕ್ಷರಾಭ್ಯಾಸಂ ಅಥವಾ ವಿದ್ಯಾರಂಭಂ ಎಂದರೆ ಮಗುವನ್ನು ಶಿಕ್ಷಣದ ಪ್ರಪಂಚಕ್ಕೆ ವಿಧ್ಯುಕ್ತವಾಗಿ ಸೇರಿಸುವುದು. ಅಕ್ಷರ, ಅಂದರೆ “ಅಕ್ಷರ” ಮತ್ತು ಅಭ್ಯಾಸ, ಅಂದರೆ “ಅಧ್ಯಯನ”.ಈ ಪದವು ಎರಡು ಪದಗಳ ಸಂಯೋಜನೆಯಾಗಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಿ ಕೆ ಜಿ ಮತ್ತು ಎಲ್ ಕೆ ಜಿ ಪುಟಾಣಿ ಮಕ್ಕಳಿಗೆ ಬಿ ಜಿ ಎಸ್ ಸಭಾಭವನದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ,ಅಕ್ಷರ ಅಭ್ಯಾಸವು ವ್ಯಕ್ತಿಯೊಬ್ಬನ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಅಕ್ಷರ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಬೇಕು.
ಶಿಕ್ಷಣದ ಆರಂಭವು ಪ್ರತಿಯೊಂದು ಮಗುವಿನ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ಆದ್ದರಿಂದ ಈ ಪ್ರಯಾಣವನ್ನು ಶುಭ ಸೂಚನೆಯಾಗಿ, ವಿದ್ಯಾರಂಭದಂತಹ ಸಾಂಪ್ರದಾಯಿಕ ಸಮಾರಂಭದೊಂದಿಗೆ ಪ್ರಾರಂಭಿಸುವುದು ಅರ್ಥಪೂರ್ಣವಾಗಿದೆ.ಮಕ್ಕಳಲ್ಲಿ ನಾವು ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಹುಟ್ಟು ಹಾಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರು ನಿತ್ಯ ಶ್ರಮ ವಹಿಸಬೇಕು ಎಂದರು.
Adichunchanagiri Education Trust ಮಗುವಿನ ತಂದೆ ಅಥವಾ ಗುರುವು ಮಗುವಿನ ಕೈ ಹಿಡಿದು, ಸ್ಲೇಟ್ ಅಥವಾ ತಟ್ಟೆಯಲ್ಲಿ ಅಕ್ಕಿಯ ಮೇಲೆ ಓಂ, ಶ್ರೀ, ಮತ್ತು ಇತರ ದೇವರ ಹೆಸರುಗಳನ್ನು ಬರೆಯುತ್ತಾರೆ. ನಂತರ, ಮಗುವು ತಾನೇ ಅಕ್ಷರಗಳನ್ನು ಬರೆಯಲು ಪ್ರಯತ್ನಿಸುತ್ತದೆ ಎಂದು ಪೂಜ್ಯರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...