Dr. H. B. Manjunatha ಮಧ್ಯಂತರ ಅಂಧತ್ವದಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯ ಪುನರ್ ದೃಷ್ಟಿಗೆ ನೇತ್ರದಾನಿಗಳ ಅವಶ್ಯವಿದ್ದು ನಿವೃತ್ತ ನೇತ್ರ ಪರೀಕ್ಷಕರು ನೇತ್ರದಾನಕ್ಕೆ ಜನರನ್ನು ಪ್ರೇರೇಪಿಸುವ ಸೇವಾ ಕಾರ್ಯವನ್ನು ಮಾಡಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆ ಕೊಟ್ಟರು. ಅವರಿಂದು ಕರ್ನಾಟಕ ನಿವೃತ್ತ ನೇತ್ರ ಪರೀಕ್ಷಕರ ಪ್ರಥಮ ರಾಜ್ಯಮಟ್ಟದ ಸ್ನೇಹಕೂಟದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ದೇಶದಲ್ಲಿ ವಾರ್ಷಿಕ ಸುಮಾರು ಒಂದು ಲಕ್ಷ ಮಂದಿ ಮಧ್ಯಂತರ ಅಂಧತ್ವದವರಿಗೆ ನೇತ್ರ ಕಸಿಗಾಗಿ ಸುಮಾರು ಎರಡು ಲಕ್ಷ ಎಪ್ಪತ್ತು ಸಾವಿರ ನೇತ್ರಗಳ ಅವಶ್ಯಕತೆ ಇದ್ದು ವಾರ್ಷಿಕ ನಮ್ಮ ದೇಶದಲ್ಲಿ ಸುಮಾರು 56 ಸಾವಿರದಿಂದ 66 ಸಾವಿರ ಮಾತ್ರ ನೇತ್ರದಾನಗಳು ನಡೆಯುತ್ತಿದ್ದು ಮರಣಾ ನಂತರ ಮಣ್ಣಲ್ಲಿ ಮಣ್ಣಾಗುವ ಬೆಂಕಿಯಲ್ಲಿ ಬೂದಿಯಾಗುವ ಮುನ್ನ ಮೃತರ ನೇತ್ರಗಳನ್ನು ಸೂಕ್ತ ಸಮಯದ ಒಳಗೆ ದಾನ ಮಾಡುವಂತೆ ಸಮಾಜದಲ್ಲಿ ಜಾಗೃತಿ ಉಂಟಾಗಬೇಕಿದೆ ಎಂದರು. ಕಣ್ಣಿನ ತೊಂದರೆಗೆ ಕಾರಣವಾಗುವ ಅನ್ನಾಂಗಗಳ ಕೊರತೆ ಬಗ್ಗೆ ಸಮಾಜಕ್ಕೆ ತಿಳಿಸಬೇಕಾಗಿದೆ ಅಲ್ಲದೆ ಶಾಲಾ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ನೇತ್ರ ಪರೀಕ್ಷೆಗೆ ಒಳಪಡಿಸಿದಲ್ಲಿ ಮುಂದೆ ಉಂಟಾಗಬಹುದಾದ ಕಣ್ಣಿನ ತೊಂದರೆಗಳು ಈಗಲೇ ತಡೆಯಬಹುದಾಗಿದ್ದು ಈ ನಿಟ್ಟಿನಲ್ಲೂ ನಿವೃತ್ತ ನೇತ್ರ ಪರೀಕ್ಷಕರು ಸ್ವಯಂ ಪ್ರೇರಣೆಯಿಂದ ಜನಜಾಗೃತಿ ಮೂಡಿಸುವ ಕೆಲಸಗಳನ್ನು ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಮಾಡಬೇಕು ಎಂದು ಎಚ್ ಬಿ ಮಂಜುನಾಥ್ ಹೇಳಿದರು . Dr. H. B. Manjunatha ನಿವೃತ್ತ ನೇತ್ರ ತಜ್ಞ ಡಾ.ಎ ಬಿ ಕಾಕಡೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೇತ್ರ ತಜ್ಞ ಡಾ. ಎಸ್ ಎಸ್ ಕೊಳಕೂರ್ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ ಹೆಚ್ ಎಂ ವೀರಯ್ಯ ಮುಂತಾದವರು ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ನೇತ್ರಾಧಿಕಾರಿ ಪ್ರಕಾಶ್ ಸವದತ್ತಿ ಮಾಡಿದರು.ರಂಗನಾಥ ಸ್ವಾಗತ ಕೋರಿದರು. ನಿವೃತ್ತ ನೌಕರರ ಮಿನಿ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.
Dr. H. B. Manjunatha ದೇಶದಲ್ಲಿ ನೇತ್ರದಾನಿಗಳ ಅಗತ್ಯವಿದೆ – ಹಿರಿಯ ಪತ್ರಕರ್ತ ಡಾ. ಹೆಚ್. ಬಿ. ಮಂಜುನಾಥ
Date:
