Friday, December 5, 2025
Friday, December 5, 2025

Shivaganga Yoga Center ಯೋಗದಿಂದ ಸದೃಢವಾದ ದೇಹ ಮನಸ್ಸು ಹಾಗೂ ನಕಾರಾತ್ಮಕ ಭಾವನೆ ದೂರ : ಜಡೆ ಮಠದ ಶ್ರೀ ಮ. ನಿ. ಪ್ರ. ಮಹಾಂತ ಮಹಾಸ್ವಾಮಿ

Date:

Shivaganga Yoga Center ಸಾವಿರಾರು ವರ್ಷಗಳ ಕಾಲ ಇತಿಹಾಸವಿರುವ ಯೋಗ ಪ್ರಾಣಾಯಾಮ ಧ್ಯಾನ ಇಂದು ಹೆಚ್ಚು ಪ್ರಚಲಿತವಾಗಿದೆ ಎಂದು ವಿರಕ್ತ ಜಡೆ ಮಠದ ಶ್ರೀ ಮ. ನಿ. ಪ್ರ. ಮಹಾಂತ ಮಹಾಸ್ವಾಮಿಗಳು ನುಡಿದರು. ಇಂದು ಕುವೆಂಪು ನಗರ ಎನ್ಎಸ್ ಲೇಔಟ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳನಾದ ಉಚಿತ ಯೋಗ ಶಿಬಿರ ಹಾಗೂ ಸಂಗೀತ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯೋಗದಿಂದ ದೀರ್ಘಾಯುಷ್ಯ, ಸಕಾರಾತ್ಮಕ ಭಾವನೆಗಳ ಜೊತೆಗೆ ದೇಹ ಮನಸ್ಸು ಸದೃಢವಾಗಿರುತ್ತದೆ. ಯೋಗ ಹಾಗೂ ಸಂಗೀತ ಒಂದು ನಾಣ್ಯದ ಎರಡು ಮುಖಗಳು ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನಮ್ಮ ಮನಸ್ಸು ಸದಾ ಸದ್ಭಾವನೆ ಇಂದ
ಕೂಡಿರಲು ಯೋಗ ಸಂಗೀತ ಬಹಳ ಅವಶ್ಯಕವಾಗಿದೆ. ಅದರಲ್ಲೂ ಇಂದಿನ ಒತ್ತಡ ಪ್ರಪಂಚದಲ್ಲಿ ಎಲ್ಲಾ ಔಷಧಿ ಮಾತ್ರೆಗಳಿಗಿಂತ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಸಂಗೀತ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.

ಈ ವೇಳೆ ಶಿವಗಂಗಾ ಯೋಗ ಕೇಂದ್ರದ ಗುರುಗಳಾದ ಯೋಗಚಾರ್ಯ ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಡಾ. ಸಿವಿ ರುದ್ರಾರಾಧ್ಯ ಅವರು ಮಾತನಾಡಿ ಶಿವಮೊಗ್ಗವನ್ನು ಒಂದು ಯೋಗ ನಗರವನ್ನು ಆಗಿಸುವ ಗುರಿ ಹೊಂದಿ ಇವತ್ತು 37ನೆಯ ಶಾಖೆಗೆ ನಾವು ಚಾಲನೆಯನ್ನು ಕೊಡುತ್ತಿದ್ದೇವೆ. ಮನೆ, ಮನೆಗಳಿಗೆ ಯೋಗವನ್ನು ತಲುಪಿಸುವುದರ ಮುಖಾಂತರ ಎಲ್ಲಾ ಬಡಾವಣೆಗಳಲ್ಲೂ ಯೋಗ ಶಿಕ್ಷಣವನ್ನ ನೀಡುತ್ತಾ ಇದ್ದೇವೆ. ಇದಕ್ಕೆಲ್ಲಾ ಪ್ರೇರಣೆ ನಮ್ಮ ಯೋಗ ಕೇಂದ್ರದ ಅಧ್ಯಕ್ಷರಾದ ರುದ್ರೇಗೌಡರು ಎಂದು ಹೇಳಿದರು. ಜೊತೆಗೆ 37 ಶಾಖೆಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ನಮ್ಮ ಯೋಗ ಶಿಕ್ಷಕರ ಪಾತ್ರ ತುಂಬಾ ಪ್ರಮುಖವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹುಮಾಯನ್ ಹರ್ಲಾಪುರ್ ಅವರು ಸಂಗೀತ ಶಿಬಿರಕ್ಕೆ ಚಾಲನೆ ನೀಡಿ ವಚನಗಳನ್ನು ಹಾಡುವುದರ ಮೂಲಕ ಸಂಗೀತ ಮಾನಸಿಕ ಖಿನ್ನತೆಯನ್ನು ದೂರವಾಗಿಸುವುದರ ಜೊತೆಗೆ ಆ ಮನೆಯ ವಾತಾವರಣವನ್ನು ತುಂಬಾ ಉತ್ತಮವಾಗಿ ಇಡುತ್ತದೆ. ಪ್ರಸ್ತುತ ಮೊಬೈಲ್ ಹಾವಳಿಯಿಂದ ಯುವ ಪೀಳಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಸಂಗೀತವನ್ನು ಅಭ್ಯಾಸ ಮಾಡುವುದರ ಮುಖಾಂತರ ಮನೋವಿಕಾಸವನ್ನು ಮಾಡಿಕೊಳ್ಳೋಣ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್, ಮಾತನಾಡಿ ವೀರಶೈವ ಮಹಾಸಭಾ ಸಮಾಜದಲ್ಲಿ ಸಂಘಟನೆಗಳ ಮುಖಾಂತರ ಲಿಂಗಾಯತ ಧರ್ಮವನ್ನು ಪ್ರಚಾರಗೊಳಿಸಿ ಹಲವಾರು ಸಾಧಕರಿಗೆ ಸನ್ಮಾನ ಮಾಡುವುದರ ಮುಖಾಂತರ. ಹಾಗೂ ದೇಶದಲ್ಲಿ ವಿಶೇಷವಾದ ಸಾಧನೆ ಮಾಡಿದ ಗಣ್ಯರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯನ್ನುನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ವೀರಶೈವ ಲಿಂಗಾಯಿತ ಮಹಾಸಭಾ ಪುನೀತವಾಗುತ್ತದೆ ಇದರ ಸದುಪಯೋಗವನ್ನು ನಮ್ಮ ಬಡಾವಣೆಯ ಎಲ್ಲರೂ ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು.

Shivaganga Yoga Center ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರು ಉದ್ಯಮಿಗಳು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಸ್ ರುದ್ರೇಗೌಡ ಅವರು ಮಾತನಾಡಿ, ನಿರಂತರವಾಗಿ ಯೋಗ ತರಬೇತಿಯನ್ನ ನೀಡುತ್ತಿರುವ ಏಕೈಕ ಸಂಸ್ಥೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದೆ ಎಂದಾದರೆ ಅದು ಶಿವಗಂಗಾ ಯೋಗ ಕೇಂದ್ರ ಮಾತ್ರ ಜೊತೆಗೆ ಈಗಾಗಲೇ ಶಿವಗಂಗಾ ಯೋಗ ಕೇಂದ್ರ ಪ್ರಧಾನ ಕಛೇರಿಯಲ್ಲಿ ಬರುವ ದಿನಗಳಲ್ಲಿ ನ್ಯಾಚುರೋಪತಿ ಆಯಿಲ್ ಬಾತ್ ಮಡ್ಬಾತ್ ಹಾಗೂ ಹಲವಾರು ಆರೋಗ್ಯ ಥೆರಪಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.

ಸಮಾರಂಭದಲ್ಲಿ ಶಿವಗಂಗಾ ಯೋಗಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ. ವಿಜಯಕುಮಾರ್. ನೀಲಕಂಠ. ಕಾಟನ್ ಜಗದೀಶ್. ಎಲ್.ಎಂ. ಮೋಹನ್,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ವಾಗ್ದೇವಿ ಬಸವರಾಜ್, ವೀರಶೈವ ಮಹಾಸಭಾ ಜಿಲ್ಲಾ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಆರ್. ಸೋಮನಾಥ್, ಪಾಲಿಕೆ ಘಟಕದ ಅಧ್ಯಕ್ಷ ರಾಜಶೇಖರ್, ವೀರಶೈವ ಮಹಾಸಭಾದ ಪದಾಧಿಕಾರಿಗಳು, ಯೋಗ ಶಿಕ್ಷಕರುಗಳು ಲವಕುಮಾರ್, , ಪೋಷಕರಾದ ಮೋಹನ್ ಬಾಳೆಕಾಯಿ, ಯೋಗ ತರಬೇತುದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...