Bharat Scouts and Guides ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಕೌಶಲ್ಯ ವೃದ್ಧಿಸುವ ದೃಷ್ಟಿಯಿಂದ ನಿಪುಣ್ ಪರೀಕ್ಷಾ ಶಿಬಿರ ಸಹಕಾರಿಯಾಗಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಎರಡು ದಿನ ಬಿ ಎಚ್ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಕೌಟ್ ಭವನದ ಬೇಡನ್ ಪೋವೆಲ್ ಹಾಲ್ ನಲ್ಲಿ ಪ್ರಥಮದರ್ಜೆ ಕಾಲೇಜುಗಳ ರೋವರ‍್ಸ್, ರೇಂಜರ‍್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಿಪುಣ್ ಟೆಸ್ಟಿಂಗ್ ಕ್ಯಾಂಪ್ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಜೀವನದಲ್ಲಿ ಪರಿಪೂರ್ಣತೆ ಸಾಧಿಸಲು ವಿದ್ಯಾಭ್ಯಾಸದ ಜೊತೆಗೆ ಸ್ಕೌಟ್ಸ್ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು. ಅದರಲ್ಲೂ ನಿಪುಣ್ ಟೆಸ್ಟ್ ತುಂಬಾ ಪ್ರಮುಖ ಘಟ್ಟವಾಗಿದೆ. ಈ ಹಂತವನ್ನು ದಾಟಿದ ನಂತರ ಮುಂದೆ ರಾಜ್ಯ ಪುರಸ್ಕಾರನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆದ್ದರಿಂದ ಇಂತಹ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೋವರ್ ವಿಭಾಗದ ಜಿಲ್ಲಾ ಆಯುಕ್ತ ಕೆ ರವಿ ಮಾತನಾಡಿ, ಈಗಾಗಲೇ ಜಿಲ್ಲೆಯ ವಿವಿಧ ಕಾಲೇಜುಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶಿಬಿರದಲ್ಲಿ ತೊಡಗಿಕೊಂಡಿರುವುದು ತುಂಬಾ ಹೆಮ್ಮೆ ವಿಷಯವಾಗಿದೆ. ಇದರಲ್ಲಿ ಅವರಿಗೆ ಸಂಸ್ಕಾರ, ಪ್ರತಿಜ್ಞೆ ನಿಯಮಗಳು, ಆತ್ಮ ರಕ್ಷಣೆ ಕಲೆ, ಜೀವನ ಕೌಶಲ್ಯಗಳು, ಬದುಕಿನ ಕಲೆಯನ್ನು ಕಲಿಸುವುದರ ಜೊತೆಗೆ ದೇಶಾಭಿಮಾನ, ಕರ್ತವ್ಯ ಹಾಗೂ ಸಮಯ ಪ್ರಜ್ಞೆ ಮತ್ತು ಶಿಸ್ತು ಕಲಿಸಲಾಗುವುದು ಎಂದು ನುಡಿದರು.
Bharat Scouts and Guides ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಚಳುವಳಿ ಮನೆ ಮನೆಗೆ ತಲುಪಬೇಕು. ಮಕ್ಕಳಲ್ಲಿರುವ ಕ್ರಿಯಾಶೀಲತೆ ಹಾಗೂ ಅವರಲ್ಲಿರುವ ಪ್ರತಿಭೆಗೆ ಹಾಗೂ ಕಲಿಕೆಗೆ ಉತ್ತಮ ವೇದಿಕೆಯಾಗಿದೆ. ಈ ಚುನಾವಣೆಯಲ್ಲಿ ತೊಡಗಿಕೊಂಡವರಿಗೆ ವಿಶೇಷವಾದ ಗೌರವ ದೊರಕುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ, ತರಬೇತಿ ಆಯುಕ್ತರಾದ ಎಚ್ ಶಿವಶಂಕ್ರಪ್ಪ, ಕೃಷ್ಣಸ್ವಾಮಿ, ಲಕ್ಷ್ಮೀ ಕೆ ರವಿ, ವಿನಯ ಭೂಷಣ್, ಹೆಚ್ ಜ್ಯೋತಿ, ಪರಿಮಳ, ಮಂಜುಳಾ, ಗಣಪತಿ, ರಮ್ಯಾ, ಮಲ್ಲಿಕಾರ್ಜುನ್ ಕಾನೂರ್, ರುದ್ರಪ್ಪ ಚಿಲೂರು, ಎನ್ ಆರ್ ಚಂದ್ರಶೇಖರ್, ದೇವಪ್ಪ, ಸಂಗೀತಾ ಬಗಲಿ, ಬಸವಣ್ಣಪ್ಪ ಉಪಸ್ಥಿತರಿದ್ದರು
Bharat Scouts and Guides ಆತ್ಮವಿಶ್ವಾಸ, ಕೌಶಲ್ಯ ವೃದ್ಧಿಸುವ ನಿಪುಣ್ ಪರೀಕ್ಷಾ ಶಿಬಿರ
Date:
