L B & S.B.S. College ಚೈತನ್ಯ ವಿಶೇಷ ಶಿಕ್ಷಣ ಶಾಲೆಯು ವಿಶೇಷ ಚೇತನ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಿದ್ದು ಇದರಿಂದಾಗಿ ಈ ಮಕ್ಕಳ ಸರ್ವತೋಮುಖ ಬೆಳವಣಿಗೆ ಕಂಡುಬಂದಿರುವುದು ಅಭಿನಂದನೀಯವಾಗಿದೆ, ಎಂದು ಎಮ್.ಡಿ.ಎಫ್.ನಿರ್ದೇಶಕರು, ಮತ್ತು ಎಲ್ ಬಿ & ಎಸ್.ಬಿ.ಎಸ್. ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಡಾ. ಶಶಿಧರ್ ಹೇಳಿದರು.
“ಸಣ್ಣ ಜಿಗಿತಗಳು ಮತ್ತು ದೊಡ್ಡ ಅದ್ಭುತಗಳು” ಎಂಬ ಕಪ್ಪೆ ಸಂಕುಲದ ಬಗ್ಗೆ ಮಾಹಿತಿ ಕಾರ್ಯಾಗಾರದ ಸಾಕ್ಷ್ಯಚಿತ್ರ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದರು.
ದಿನಾಂಕ:06-08-2025 ರಂದು ಕಂಚಿಕೈ ದೇವಪ್ಪ ಸಭಾಂಗಣ ಎಲ್ ಬಿ ಕಾಲೇಜ್ ನಲ್ಲಿ ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್, ಯೂಥ್ ಕನ್ಸರ್ವೇಷನ್ ಆಕ್ಷನ್ ನೆಟ್ ವರ್ಕ್,(youth Conservation Action Network)ಹಾಗೂ ಎಲ್ ಬಿ ಎಂಡ್ ಎಸ್ ಬಿ ಎಸ್ ಕಾಲೇಜ್ ಆಶ್ರಯದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
You CAN ಸಂಸ್ಥೆಯ Earth Education Fellowship nalli kaarya ನಿರ್ವಹಿಸುತ್ತಿರುವ ಅಂಜಲಿ ಪೂಜಾರಿ ಯವರು ವಿವಿಧ ವಿಭಾಗದ ಕಲೆಗಳನ್ನು ಬಳಸಿ ಪ್ರಕೃತಿಯೊಂದಿಗೆ ಸಂಬಂಧ ಬೆಸೆಯುವುದು ಮತ್ತು ಸಂವಹನ ನಡೆಸುವುದಕ್ಕೆ ಈ ವಿಶೇಷ ಚೇತನ ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರ ಅಂಗವಾಗಿ ಕಪ್ಪೆಗಳ ಕುರಿತಾದ ಸಾಕ್ಷ್ಯಚಿತ್ರ “THE LITTLE PLANET” ಪ್ರದರ್ಶಿಸಲಾಯಿತು.
ಸುಮಾರು 9 ವರ್ಷಗಳಿಂದ ಕಪ್ಪೆಗಳ ಬಗ್ಗೆ ತಮ್ಮ ತಂಡ ಅಧ್ಯಯನ ಮತ್ತು ಚಿತ್ರೀಕರಣ ನಡೆಸಿದ್ದು, ಈ ಚಿತ್ರವನ್ನು ವಿಶೇಷ ಚೇತನ ಮಕ್ಕಳಿಗಾಗಿ ಪ್ರದರ್ಶಿಸುತ್ತಿರುವುದು ತುಂಬಾ ಸಂತಸ ತಂದಿದೆ ಎಂದು ಈ ಚಿತ್ರದ ನಿರ್ದೇಶಕರಾದ ಸುಹಾಸ್ ಪ್ರೇಮಕುಮಾರ್ ಹೇಳಿದರು.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಪ್ಪೆಗಳು ಸುಮಾರು 20ಕ್ಕೂ ಹೆಚ್ಚು ಪ್ರಭೇದಗಳಿದ್ದು, ಕಪ್ಪೆಗಳ ಸಂಖ್ಯೆ ಜಾಸ್ತಿ ಇದ್ದಷ್ಟೂ ಪರಿಸರ ಆರೋಗ್ಯವಾಗಿರುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ನಾಯಕ್ ಅಭಿಪ್ರಾಯ ಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು LB ಕಾಲೇಜ್ ನ ಪ್ರಾಂಶುಪಾಲರಾದ ಶ್ರೀ ಲಕ್ಷ್ಮೀಶ ವಹಿಸಿದ್ದರು.
ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ B H ರಾಘವೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಶಾಂತಲಾ ಸುರೇಶ್ ಸ್ವಾಗತಿಸಿದರು.
L B & S.B.S. College ಶಾಲೆಯ ಮಕ್ಕಳು ಪ್ರಾರ್ಥಿಸಿದರು.ಶಿಕ್ಷಕರಾದ ವೆಂಕಟೇಶ್ ನಿರೂಪಿಸಿ ವಂದಿಸಿದರು.ಸಮಾರಂಭದಲ್ಲಿ ಲಿಟಲ್ ಪ್ಲಾನೆಟ್ ತಂಡದ ಶ್ರೀಕಾಂತ್ ನಾಯಕ್, ಗಿರೀಶ್ ಜನ್ನೆ, ಪ್ರದೀಪ್ ಕಲ್ಲಹಳ್ಳಿ ಈಶಾನ್ಯ ಪಾಲ್ಗೊಂಡಿದ್ದರು. M D F ಸಂಸ್ಥೆಯ ನಿರ್ದೇಶಕರಾದ ಜಗದೀಶ್ ಒಡೆಯರ್ ಮತ್ತು ಚೈತನ್ಯ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಕೆ ಏನ್, ರಾಮಸ್ವಾಮಿ ಕಳಸವಳ್ಳಿ, ಶ್ರೀಕಾಂತ ಉಪಸ್ಥಿತರಿದ್ದರು.
