Rotary Shivamogga ರೋಟರಿ ಶಿವಮೊಗ್ಗ ಪೂರ್ವ ಹಾಗೂ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇವರ ಸಹಯೋಗದಲ್ಲಿ ಆಗಸ್ಟ್ 9ರಂದು ಬೆಳಗ್ಗೆ 10.30ಕ್ಕೆ ರಾಜೇಂದ್ರ ನಗರದ ರೋಟರಿ ಶಾಲೆ ಆವರಣದಲ್ಲಿ ಕೃತಕ ಬುದ್ಧಿಮತ್ತೆ ಉಪಯೋಗಿಸಿ ಸ್ತನ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ.
ಈ ತಪಾಸಣೆಯಲ್ಲಿ ಸ್ಪರ್ಶ ಇಲ್ಲ, ನೋವು ಇಲ್ಲ, ವಿಕಿರಣದ ಆತಂಕವಿಲ್ಲ. ಮಹಿಳೆಯರಿಂದಲೇ ತಪಾಸಣೆ, ಕೇವಲ 10-15 ನಿಮಿಷದಲ್ಲಿ ತಪಾಸಣೆ ಆಗಲಿದೆ. ಮೊದಲು ನೋಂದಾಯಿಸಿದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ತಪಾಸಣೆಗೂ ಮೂರು ಗಂಟೆಗಳ ಮೊದಲು ವ್ಯಾಯಾಮ, ಯೋಗ ಮಾಡಿರಬಾರದು. ತಪಾಸಣೆಗೆ ಒಂದು ಗಂಟೆ ಮುಂಚೆ ಮುನ್ನ ಆಹಾರ, ಹಣ್ಣು, ಪಾನೀಯ ಸೇವಿಸಬಾರದು. ಹೆಚ್ಚಿನ ಮಾಹಿತಿಗೆ 9483683754 ಹಾಗೂ ನೋಂದಣಿಗೆ 8317443637 ಸಂಪರ್ಕಿಸಬಹುದಾಗಿದೆ.
Rotary Shivamogga ತಪಾಸಣೆಗೆ ನೋಂದಣಿ ಕಡ್ಡಾಯವಾಗಿದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ್ ತಿಳಿಸಿದ್ದಾರೆ.
