S.N.Chennabasappa ಟ್ರಾಫಿಕ್ ಸಮಸ್ಯೆಯ ನೆಪದಲ್ಲಿ ಟ್ರಾಫಿಕ್ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಹೂವಿನ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿರುವ ಕುರಿತು ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಇಂದು ಬೆಳಗ್ಗೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಿವಮೊಗ್ಗದ ಶಿವಪ್ಪ ನಾಯಕ ಹೂವಿನ ಮಾರುಕಟ್ಟೆಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದರು.
ಶ್ರಾವಣ ಮಾಸದ ಹಿನ್ನಲೆಯಲ್ಲಿ ಹೂವಿನ ವ್ಯಾಪಾರವು ಸಕ್ರಿಯಗೊಂಡಿರುವ ಈ ಸಂದರ್ಭದಲ್ಲಿ, ವ್ಯಾಪಾರಿಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
S.N.Chennabasappa ಈಗಾಗಲೇ ಪಾಲಿಕೆ ವತಿಯಿಂದ ಹೂವಿನ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರವಾಗಿ ಮಳಿಗೆಗಳು ನಿರ್ಮಿಸಲಾಗಿದ್ದು, ಅದರ ಹಂಚಿಕೆಯ ಪ್ರಕ್ರಿಯೆ ಶೀಘ್ರ ಆರಂಭವಾಗಲಿದ್ದು, ಮಳಿಗೆ ಹಂಚಿಕೆಯಾಗುವವರೆಗೂ ಯಾವುದೇ ತೆರವು ಕಾರ್ಯಾಚರಣೆ ಅಥವಾ ಅಡಚಣೆ ಉಂಟುಮಾಡದಂತೆ, ತಾತ್ಕಾಲಿಕವಾಗಿ ವ್ಯಾಪಾರ ಮಾಡುವ ಅವಕಾಶ ಕಲ್ಪಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
