Thursday, September 17, 2026
Thursday, September 17, 2026

E-Pauti ಇ-ಪೌತಿ ಆಂದೋಲನದ ಮೂಲಕ ಉಚಿತವಾಗಿ ಪಹಣಿ ಪಡೆಯಿರಿ- ತಹಶೀಲ್ದಾರ್ ವಿ.ಎಸ್.ರಾಜೀವ್

Date:

E-Pautiಕೃಷಿ ಜಮೀನುಗಳ ಮಾಲೀಕರು ಮೃತರಾದಲ್ಲಿ ಸದರಿ ಜಮೀನನ್ನು ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಪ್ರಸ್ತುತ ಸರಕಾರದಿಂದ ಇ-ಪೌತಿ ಆಂದೋಲನದ ಮೂಲಕ ಶಿವಮೊಗ್ಗ ತಾಲ್ಲೂಕಿನ ಜಮೀನುಗಳನ್ನು ಉಚಿತವಾಗಿ ವಾರಸತ್ವದ ವಂಶಾವಳಿ ಪ್ರಕಾರ ಪಹಣಿ ಪತ್ರಿಕೆ ಮಾಡಿಕೊಡಲಾಗುತ್ತಿದೆ.
ಈ ರೀತಿಯ ಜಮೀನುಗಳನ್ನು ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ವಾರಸುದಾರರ ಆಧಾರ್ ಕಾರ್ಡ್ ಇತ್ಯಾದಿ ಪೂರಕ ಎಲ್ಲಾ ದಾಖಲೆಗಳನ್ನು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿಗಳ ಹತ್ತಿರ ಸಲ್ಲಿಸಿ ಭೂ ಮಾಲೀಕರು ಮೃತರಾಗಿರುವ ಜಮೀನುಗಳ ವಾರಸುದಾರರಿಗೆ ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನದ ಮೂಲಕ ಪಹಣಿ ಮಾಡಿಸಿಕೊಳ್ಳಬಹುದಾಗಿರುತ್ತದೆ.
E-Pauti ಸಾರ್ವಜನಿಕರು ಈ ಬಗ್ಗೆ ಮದ್ಯವರ್ತಿಗಳಿಗೆ ಅವಕಾಶ ಕೊಡದೇ ನೇರವಾಗಿ ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳನ್ನು ಹಾಗೂ ರಾಜಸ್ವ ನಿರೀಕ್ಷಕರನ್ನು ಭೇಟಿ ಮಾಡಿ ಉಚಿತವಾಗಿ ನಿಮ್ಮ ಜಮೀನಿನ ಖಾತೆಯನ್ನು ಬದಲಾಯಿಸಿಕೊಳ್ಳಲು ತಿಳಿಸಿದೆ. ಇ-ಪೌತಿ ಆಂದೋಲನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಶಿವಮೊಗ್ಗ ತಾಲ್ಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಇ-ಪೌತಿ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರಾಜೀವ್ ವಿ ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...